January 18, 2025
dark-green-blue-wallpaper-meets-wallpapers_20190905234938561_20190906075806727.jpg
ಮುಂಬಯಿ ಭಂಡಾರಿ ಸೇವಾ ಸಮಿತಿಯ 2018-19 ನೇ ಸಾಲಿನ  66 ನೇ ವಾರ್ಷಿಕಸಭೆ ಸಮಿತಿಯ ಅಧ್ಯಕ್ಷರಾದ ಅಡ್ವೊಕೇಟ್ ಆರ್.ಎಮ್.ಭಂಡಾರಿಯವರ ಅಧ್ಯಕ್ಷತೆಯಲ್ಲಿ ಸೆಪ್ಟೆಂಬರ್ 8,2019 ರ ಭಾನುವಾರ ಮಧ್ಯಾಹ್ನ 3:00 ಗಂಟೆಗೆ ಮುಲಂದ್ ವೆಸ್ಟ್ ಮುಂಬಯಿಯ ಸಾರಸ್ವತ್ ವಾಡಿಯಾ ಶ್ರೀ ಕಚ್ ದೇಶಿಯ ಸಾರಸ್ವತ ಬ್ರಾಹ್ಮಣ ಮಹಾಸ್ಥಾನ ಟ್ರಸ್ಟ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
 
ಭಂಡಾರಿ ಸೇವಾ ಸಮಿತಿಯ ಸತ್ಸಂಪ್ರದಾಯದಂತೆ ವಾರ್ಷಿಕ ವರದಿ,2018-19 ನೇ ಸಾಲಿನ ಲೆಕ್ಕಪತ್ರ ಮಂಡನೆ, 2019-20 ನೇ ಸಾಲಿನ ಆಯವ್ಯಯ ಮಂಡನೆ ಇರುವುದರಿಂದ ಸಮಿತಿಯ ಗೌರವಾನ್ವಿತ ಸದಸ್ಯರು,ಸಮಾಜದ ಬಂಧುಗಳು ಸಮಯಕ್ಕೆ ಸರಿಯಾಗಿ ಆಗಮಿಸಿ,ವಾರ್ಷಿಕಸಭೆಯನ್ನು ಸಾಂಗವಾಗಿ ನೆರವೇರಿಸಲು ಸಹಕರಿಸಬೇಕೆಂದು ಸಮಿತಿಯ ಕಾರ್ಯದರ್ಶಿಗಳಾದ ಶಶಿಧರ್.ಡಿ. ಭಂಡಾರಿಯವರು ಕೋರಿದ್ದಾರೆ.
 
— ಭಂಡಾರಿವಾರ್ತೆ.

Leave a Reply

Your email address will not be published. Required fields are marked *