January 18, 2025
bhandary seva samiti mumbai

ಮುಂಬಯಿ ಭಂಡಾರಿ ಸೇವಾ ಸಮಿತಿಯ 2018-19 ನೇ ಸಾಲಿನ ವಾರ್ಷಿಕ ಸಮ್ಮಿಲನ

ಮುಂಬಯಿ ಭಂಡಾರಿ ಸೇವಾ ಸಮಿತಿಯ 2018-19 ನೇ ಸಾಲಿನ ವಾರ್ಷಿಕ ಸಮ್ಮಿಲನ ಡಿಸೆಂಬರ್ 23, 2018 ರ ಭಾನುವಾರ ಮುಂಬಯಿಯ ಪಶ್ಚಿಮ ಮುಲುಂಡ್ ನ ಸರಸ್ವತಿವಾಡಿಯಲ್ಲಿರುವ ಶ್ರೀ ಕುಛ್ ದೇಶಿಯ ಸರಸ್ವತಿ ಮಹಾ ಸಂಸ್ಥಾನ ಟ್ರಸ್ಟ್   ಸಭಾಂಗಣದಲ್ಲಿ ಬೆಳಿಗ್ಗೆ 10 ಗಂಟೆಗೆ ವಿದ್ಯುಕ್ತವಾಗಿ ಆರಂಭಗೊಂಡಿತು.
ಮುಂಬಯಿ ಭಂಡಾರಿ ಸೇವಾ ಸಮಿತಿಯ ಅಧ್ಯಕ್ಷರಾದ ಶ್ರೀ ಆರ್.ಎಂ ಭಂಡಾರಿಯವರ ಅಧ್ಯಕ್ಷತೆಯಲ್ಲಿ ಆರಂಭಗೊಂಡ ಸಮ್ಮಿಲನ ಕಾರ್ಯಕ್ರಮವನ್ನು ಅಖಿಲ ಭಾರತ ತುಳು ಒಕ್ಕೂಟ ಮಂಗಳೂರು ಘಟಕದ ಅಧ್ಯಕ್ಷರಾದ ಶ್ರೀ ಧರ್ಮಪಾಲ್. ಯು. ದೇವಾಡಿಗ ಅವರು ದೀಪ ಬೆಳಗುವುದರೊಂದಿಗೆ ಚಾಲನೆ ನೀಡಿದರು. ಶ್ರೀಮತಿ ಗಾಯತ್ರಿ ನಾರಾಯಣ ಭಂಡಾರಿಯವರು ಪ್ರಾರ್ಥನಾ ಗೀತೆ ಹಾಡಿದರು. ಸೇವಾ ಸಮಿತಿಯ  ಗೌರವ ಪ್ರಧಾನ ಕಾರ್ಯದರ್ಶಿ ಶ್ರೀ ಶಶಿಧರ್.ಡಿ.ಭಂಡಾರಿ ಸ್ವಾಗತಿಸಿ ಪ್ರಾಸ್ತಾವಿಕ ಭಾಷಣವನ್ನು ಮಾಡಿದರು. ಗೌರವ ಕೋಶಾಧಿಕಾರಿ ಶ್ರೀ ಕರುಣಾಕರ್.ಎಸ್.ಭಂಡಾರಿಯವರು ವಾರ್ಷಿಕ ಲೆಕ್ಕಪತ್ರ ಮಂಡನೆ ಮಾಡಿದರು. 
ಕಾರ್ಯಕ್ರಮದ ಜೊತೆಗೆ ಸಮಾಜದ ಬಂಧುಗಳಿಗಾಗಿ ರಂಗೋಲಿ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿತ್ತು. ನಂತರ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮಹಿಳೆಯರು ಮತ್ತು ಮಕ್ಕಳು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದರು. ಹರೀಶ್ ಶೆಟ್ಟಿ ಎರ್ಮಾಳ್ ನೇತೃತ್ವದಲ್ಲಿ ಪನ್ವಿ ಕ್ರಿಯೇಷನ್ಸ್ ಸಂಸ್ಥೆ ಸಂಗೀತ ಮತ್ತು ನೃತ್ಯಗಳನ್ನೊಳಗೊಂಡ ಸಂಗೀತ ರಸಮಂಜರಿ ಕಾರ್ಯಕ್ರಮ ಪ್ರಸ್ತುತಪಡಿಸಿದರು. ಶ್ರೀಮತಿ ಸರಿತಾ.ಕೆ.ಬಂಗೇರ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು.
ವಿವಿಧ ಕ್ರೀಡೆಗಳಲ್ಲಿ  ಸ್ಪರ್ಧಿಸಿ ಜಯಗಳಿಸಿದ ಸಮಾಜದ ಬಂಧುಗಳಿಗೆ, ಮಕ್ಕಳಿಗೆ ಬಹುಮಾನ ವಿತರಿಸಲಾಯಿತು ಮತ್ತು ಸಮಾಜದ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸತ್ಕರಿಸಲಾಯಿತು.
ಸಮ್ಮಿಲನ ಕಾರ್ಯಕ್ರಮದ ಅಂತಿಮ ಹಂತದ ಸಭಾ ಕಾರ್ಯಕ್ರಮ ಮುಂಬಯಿ ಭಂಡಾರಿ ಸೇವಾ ಸಮಿತಿಯ ಅಧ್ಯಕ್ಷರಾದ ಶ್ರೀ ಆರ್ ಎಂ.ಭಂಡಾರಿಯವರ ಅಧ್ಯಕ್ಷತೆಯಲ್ಲಿ ಆರಂಭಗೊಂಡಿತು. ವೇದಿಕೆಯಲ್ಲಿ ಉಪಸ್ಥಿತರಿದ್ದ ಅಧ್ಯಕ್ಷರು ಮತ್ತು ಗೌರವ ಅತಿಥಿಗಳು ಜ್ಯೋತಿಯನ್ನು ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 
ವೇದಿಕೆಯಲ್ಲಿ ಗೌರವ ಅತಿಥಿಗಳಾಗಿ ಶ್ರೀ ಲಕ್ಷ್ಮಣ ಕರಾವಳಿಯವರು, ಶ್ರೀ ಕಡಂದಲೆ ಸುರೇಶ್ ಭಂಡಾರಿಯವರು, ಶ್ರೀ ಸದಾಶಿವ ಭಂಡಾರಿ ಸಕಲೇಶಪುರ, ಶಿವಾಸ್ ಗ್ರೂಪ್ಸ್ ನ ಶ್ರೀ ಶಿವರಾಮ್.ಕೆ.ಭಂಡಾರಿ, ಮುಂಬಯಿ ಭಂಡಾರಿ ಸೇವಾ ಸಮಿತಿಯ ಮಾಜಿ ಅಧ್ಯಕ್ಷರುಗಳಾದ ಶ್ರೀ ಮಾಧವ.ಆರ್.ಭಂಡಾರಿ ಮೂಡುಬಿದಿರೆ, ನ್ಯಾಯಮೂರ್ತಿ ಶ್ರೀ ಸುಂದರ್.ಜಿ. ಭಂಡಾರಿ, ಶ್ರೀ ಬಾಲಕೃಷ್ಣ.ಪಿ.ಭಂಡಾರಿ, ನ್ಯಾಯಮೂರ್ತಿ ಶ್ರೀ ಶೇಖರ್.ಎಸ್‌.ಭಂಡಾರಿ, ಮಹಿಳಾ ವಿಭಾಗದ ಹಾಲಿ ಮತ್ತು ಮಾಜಿ ಕಾರ್ಯಾಧ್ಯಕ್ಷೆಯರಾದ ಶ್ರೀಮತಿ  ಲಲಿತಾ.ವಿ.ಭಂಡಾರಿ,ಶ್ರೀಮತಿ ಶೋಭಾ ಸುರೇಶ್ ಭಂಡಾರಿ,ಶ್ರೀಮತಿ ಶಾಲಿನಿ.ಆರ್.ಭಂಡಾರಿ ಮುಂತಾದವರು ಉಪಸ್ಥಿತರಿದ್ದರು.
ಉಪಾಧ್ಯಕ್ಷರುಗಳಾದ ಶ್ರೀ ಪ್ರಭಾಕರ್.ಪಿ.ಭಂಡಾರಿ,ಪುರುಷೋತ್ತಮ.ಜಿ.ಭಂಡಾರಿ, ಕುಮಾರಿ ಕ್ಷಮಾ.ಆರ್.ಭಂಡಾರಿ ಮತ್ತು ಪಲ್ಲವಿ.ಆರ್.ಭಂಡಾರಿ ಅತಿಥಿಗಳನ್ನು ಪರಿಚಯಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಕರಾವಳಿ ಇಂಟರ್ನೆಟ್ ಸರ್ವಿಸ್ ಅಂಡ್ ಕೇಬಲ್ ಟಿವಿ ನೆಟ್ವರ್ಕ್ಸ್ ನ ಆಡಳಿತ ನಿರ್ದೇಶಕ ಶ್ರೀ ಲಕ್ಷ್ಮಣ್ ಕರಾವಳಿಯವರು ಆರೂವರೆ ದಶಕದಿಂದ ಭಂಡಾರಿ ಸೇವಾ ಸಮಿತಿ ಮಾಡಿಕೊಂಡು ಬರುತ್ತಿರುವ ಸೇವೆಗೆ ಗುರುಹಿರಿಯರ ದೂರದೃಷ್ಟಿಯೇ ಕಾರಣ. ಅವರೆಲ್ಲರ ಶ್ರಮದ ಪ್ರತಿಫಲವಾಗಿ ನಾವೆಲ್ಲರೂ  ಇಂದು ಒಗ್ಗೂಡಿದ್ದೇವೆ. ಸಮಾಜದ ಬಂಧುಗಳು ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ವಿಮಾ ಯೋಜನೆ ಹಾಗೂ ವಿದ್ಯಾನಿಧಿ ರೂಪಿಸಿ ಸಮಾಜವನ್ನು ಸ್ವಾಸ್ಥ್ಯ ವಾಗಿಸಬೇಕು ಸಮಯೋಚಿತ ಸೇವೆಯಿಂದ ಸಮಾಜದ ಉದ್ಧಾರ ಸಾಧ್ಯ ಆದ್ದರಿಂದ ಸಮುದಾಯದ ಏಳಿಗೆಗೆ ಸಂಸ್ಥೆಗಳು ನಿಸ್ವಾರ್ಥವಾಗಿ ಸೇವಾತತ್ಪರರಾಗಬೇಕು. ಭಂಡಾರಿ ಬಂಧುಗಳು ಮಾನವೀಯತೆ ಮೆರೆದು ಸಮುದಾಯವನ್ನು ಬಲಪಡಿಸಬೇಕು”ಎಂದು ಕರೆ ಕೊಟ್ಟರು.
ಭಂಡಾರಿ ಮಹಾಮಂಡಲದ ಅಧ್ಯಕ್ಷರಾದ ಶ್ರೀ ಸದಾಶಿವ ಭಂಡಾರಿ ಸಕಲೇಶಪುರಅವರು ಮಾತನಾಡುತ್ತಾ “ಭಂಡಾರಿ ಸಮಾಜ ಪ್ರಸ್ತುತ ಸಾಂಘಿಕವಾಗಿ ಮುನ್ನಡೆಯುತ್ತಿದೆ. ಮುಂಬಯಿಯಲ್ಲಿ ವಾಸಿಸುವ ಭಂಡಾರಿಗಳು ಏಕತೆಗೆ ಸರ್ವರಿಗೂ ಮಾದರಿಯಾಗಿದ್ದಾರೆ. ಮುಂಬಯಿ ಭಂಡಾರಿ ಸೇವಾ ಸಮಿತಿಯಿಂದ ಭಂಡಾರಿ ಸಮುದಾಯ ಜಾಗತಿಕವಾಗಿ ಪ್ರಸಿದ್ಧಿಗೆ ಬಂದಿದೆ ಎನ್ನಲು ಅಭಿಮಾನವೆನಿಸುತ್ತದೆ”ಎಂದು ನುಡಿದರು.
ಬಾರ್ಕೂರು ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಆಡಳಿತ ಮೋಕ್ತೇಸರರಾದ ಶ್ರೀ ಸುರೇಶ್ ಭಂಡಾರಿ ಕಡಂದಲೆ ಅವರು ಮಾತನಾಡುತ್ತಾ “ತುಳುನಾಡಿನವರು ಎಂದಿಗೂ ಏಕತೆಗೆ ಮತ್ತು ಸಂಸ್ಕೃತಿಗೆ ಹೊಂದಿಕೊಳ್ಳುವವರು. ಮುಂಬಯಿಯ ಎಲ್ಲ ತುಳು ಕನ್ನಡಿಗರು ಸಂಘಟನಾ ಚತುರರು.ಈ ಮಧ್ಯೆ ನಮ್ಮ ಭಂಡಾರಿ ಸಂಘವು ಒಳಗೊಂಡಿದೆ. ಈ ದಿನ ಇಷ್ಟೊಂದು ಸಂಖ್ಯೆಯಲ್ಲಿ ಸೇರಿದ ನಮ್ಮ ಸಮಾಜದ ಬಂಧುಗಳ ಏಕತೆಯಿಂದ ಸಮಾಜದ ಸಮುದಾಯದ ಅಭಿವೃದ್ಧಿ ಆಗುವಂತೆ ಭಾಸವಾಗುತ್ತದೆ. ಇಂತಹ ಒಗ್ಗಟ್ಟು ಇನ್ನಷ್ಟು ಬೆಳೆಯಲಿ” ಎಂದು ಶುಭ ಹಾರೈಸಿದರು.
ವೇದಿಕೆಯ ಮೇಲೆ ಭಂಡಾರಿ ಸಮಾಜದ ಸಾಧಕರಾದ ಶ್ರೀ ವಿಠ್ಠಲ್.ಕೆ.ಭಂಡಾರಿ ಭಾಂಡೂಪ್ ಮತ್ತು ಶ್ರೀಮತಿ ಪುಷ್ಪಾ ವಿಠ್ಠಲ್ ಭಂಡಾರಿ,ಶ್ರೀ ಟಿ.ಎಂ.ಶೇಖರ ಭಂಡಾರಿ ಮುಲುಂಡ್ ಮತ್ತು ಶ್ರೀಮತಿ ಶುಭ ಶೇಖರ್ ಭಂಡಾರಿ ದಂಪತಿಗಳನ್ನು,ಹಾಗೂ ವನಿತಾ.ಎಸ್.ಭಂಡಾರಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಜಯಶೀಲ ಭಂಡಾರಿ ಮತ್ತು ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಶ್ರೀಮತಿ ರೇಖಾ.ಎ.ಭಂಡಾರಿ ಸನ್ಮಾನಿತರನ್ನು ಪರಿಚಯಿಸಿದರು.

ಗೌರವ ಕೋಶಾಧಿಕಾರಿ ಕರುಣಾಕರ್.ಎಸ್.ಭಂಡಾರಿ, ಸಹ ಕಾರ್ಯದರ್ಶಿ ನ್ಯಾಯವಾದಿ ಶಾಂತರಾಜ್.ಡಿ.ಭಂಡಾರಿ, ಸಹ ಕೋಶಾಧಿಕಾರಿ ಪ್ರಕಾಶ್.ಕೆ.ಭಂಡಾರಿ ಮತ್ತು ಸುಭಾಷ್.ಜಿ.ಭಂಡಾರಿ, ಮಹಿಳಾ ಕಾರ್ಯದರ್ಶಿ ಜಯಸುಧಾ.ಟಿ.ಭಂಡಾರಿ ಮತ್ತಿತರರು ಅತಿಥಿಗಳಿಗೆ ಪುಷ್ಪ ಗುಚ್ಛಗಳನ್ನು ನೀಡಿ ಗೌರವಿಸಿದರು.

ಸಹ ಕಾರ್ಯದರ್ಶಿ ರಂಜಿತ್.ಎಸ್.ಭಂಡಾರಿ ವಂದನಾರ್ಪಣೆ ಮಾಡುವುದರೊಂದಿಗೆ ಸಭಾ ಕಾರ್ಯಕ್ರಮಕ್ಕೆ ಮಂಗಳ ಹಾಡಲಾಯಿತು.
ವರದಿ : ಭಾಸ್ಕರ್ ಭಂಡಾರಿ ಶಿರಾಳಕೊಪ್ಪ.

Leave a Reply

Your email address will not be published. Required fields are marked *