January 18, 2025
Rainvictim help
ಈ ವರ್ಷದ ಬೀಕರ ಮಳೆಗೆ ಅಲ್ಲಲ್ಲಿ ನೆರೆ , ಗುಡ್ಡಕುಸಿತ ಮತ್ತು ಬಿರುಗಾಳಿಗೆ ಮರಕುಸಿದು ಮನೆ-ಮಠ ಮತ್ತು  ಮನೆಯವರನ್ನು ಕಳೆದುಕೊಂಡ ಅನೇಕ ಕುಟುಂಬಗಳಿಗೆ ನೆರವು ಬೇಕಾಗಿದೆ. 
ಭಂಡಾರಿ ಬಂಧುಗಳಲ್ಲೂ ಇಂತಹ ಅನೇಕ ಸಂತ್ರಸ್ತರಿದ್ದು ಕೂಡಲೇ ಅವರ ನೆರವಿಗೆ ಧಾವಿಸಬೇಕಾಗಿದೆ. ಅಂತಹವರ ಮಾಹಿತಿಯನ್ನು ಸಮಾಜದ ಸಂಘಗಳಿಗೆ ಮತ್ತು ದಾನಿಗಳಿಗೆ ಮುಟ್ಟಿಸುವ ಕೆಲಸದೊಂದಿಗೆ ತನ್ನ ಕೈಲಾದ ಸಹಾಯವನ್ನು ಭಂಡಾರಿ ವಾರ್ತೆ ಮಾಡಲು ಎದುರುನೋಡುತ್ತಿದೆ.
 
ಸಂತ್ರಸ್ತ ಕುಟುಂಬ -1
 
 
ಬಂಟ್ವಾಳ ತಾಲೂಕಿನ ವಿಟ್ಲದ ಕೂಡಂಗಾಯಿ ರಾಜೀವಿ ಸೇಸಪ್ಪ  ಭಂಡಾರಿ ಇವರ ಮನೆಗೆ ಅತಿವೃಷ್ಟಿಯ ಪರಿಣಾಮ ಮೇಲ್ಚಾವಣಿಗೆ ಸಂಪೂರ್ಣ ಹಾನಿಯಾಗಿದ್ದು, ಸುಮಾರು 2 ಲಕ್ಷದಷ್ಟು ನಷ್ಟ ಉಂಟಾಗಿದ್ದು ಮೇಲ್ಚಾವಣಿ ದುರಸ್ತಿಗೆ 2 ಲಕ್ಷಕ್ಕೂ ಮೇಲ್ಪಟ್ಟು ಸಹಾಯಹಸ್ತ ಬೇಕಾಗಿದೆ. ರಾಜೀವಿ ಭಂಡಾರಿಯವರಿಗೆ ಮಕ್ಕಳಿದ್ದರೂ ಎಲ್ಲರೂ ಬೇರೆ ಮನೆ ಮಾಡಿಕೊಂಡು ಇರುವ ಕಾರಣ ಒಬ್ಬಂಟಿಯಾಗಿ ವಾಸಿಸುತ್ತಿದ್ದಾರೆ. ತನ್ನ ಜೀವನೋಪಾಯಕ್ಕಾಗಿ ಬೀಡಿ ಕಟ್ಟುವ ಕಾಯಕವನ್ನು ಮಾಡುತ್ತಿದ್ದಾರೆ. ಮನೆಯನ್ನು ಕಳೆದುಕೊಂಡಿರುವ ಇವರು ಸಂಬಂಧಿಗಳ ಮನೆಯಲ್ಲಿ ವಾಸ್ತವ್ಯವಿದ್ದು , ಕೂಡಲೇ ಮೇಲ್ಚಾವಣೆ ನಿರ್ಮಿಸದಿದ್ದರೆ ಗೋಡೆಯೂ ಕುಸಿಯುವ ಸಂಭವವಿದ್ದು, ವಿವಿಧ ಸೇವಾ ಸಂಘಗಳು, ಸರಕಾರ ಮತ್ತು ದಾನಿಗಳ ಸಹಾಯವನ್ನು ನಿರೀಕ್ಷಿಸುತ್ತಿದ್ದಾರೆ. 
 
 
ಇವರನ್ನು ಸಂಪರ್ಕಿಸುವವರು 9880878389 ಈ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದು.
 
ಹಣ ವರ್ಗಾಯಿಸಲು ಬ್ಯಾಂಕ್ ಖಾತೆ ವಿವರ
 
Bank Name: Syndicate Bank 
 
Branch: VITTLA Bantwal 
 
Account Holder Name : Rajeevi 
 
Account Number : 01412200053640
 
IFSC Code : SYNB0000141
 
 
ಬಂಧುಗಳ ಬೇಡಿಕೆಯ ಮೇರೆಗೆ ಭಂಡಾರಿವಾರ್ತೆಯು UPI ( Bhim, Phonepe, G-pay , Paytm )ಮೂಲಕ ಹಣ  ಹಣ ವರ್ಗಾಯಿಸಲು ಸೌಲಭ್ಯ ಕಲ್ಪಿಸುತ್ತಿದೆ.  
 
 
UPI ID :pakkukattla@okhdfcbank
 
Google Pay: 9845125214
 
 
ಭಂಡಾರಿ ವಾರ್ತೆಯ UPI ID ಗೆ ಕಳುಹಿಸಿದ ಹಣವನ್ನು ಸಂತ್ರಸ್ತರಿಗೆ ನೇರವಾಗಿ ಅವರ ಖಾತೆಗೆ NEFT ಅಥವಾ Cheque ಮೂಲಕ ಹಣ ವರ್ಗಾಯಿಸಲಾಗುವುದು. ಸಂತ್ರಸ್ತರ ಸಂಖ್ಯೆ ಏರಿಕೆಯಾದಲ್ಲಿ ಸಮಾನವಾಗಿ ಅಥವಾ ಆದ್ಯತೆಯ ಮೇರೆಗೆ ಹಂಚಲಾಗುವುದು.
 
ನಿಮ್ಮ  ಊರಿನಲ್ಲಿ ನೆರೆಸಂತ್ರಸ್ತರು ಇದ್ದಲ್ಲಿ ಭಂಡಾರಿ ವಾರ್ತೆಗೆ ಮಾಹಿತಿ ನೀಡಬಹುದು. 9845125214 ಅಥವಾ ವಿವರಗಳೊಂದಿಗೆ bhandaryvarthe@gmail.com ಗೆ ಇಮೈಲ್ ಮಾಡಬಹುದು.
 
-ಭಂಡಾರಿ ವಾರ್ತೆ

Leave a Reply

Your email address will not be published. Required fields are marked *