January 18, 2025
bv-covid-package
ಕೊರೋನ ಸೋಂಕು ಬಡವರ ಮತ್ತು ಮಧ್ಯಮ ವರ್ಗದವರ ಜೀವನಪಥವನ್ನು ಅಸ್ತವ್ಯಸ್ತಗೊಳಿಸಿರುವುದು ಈಗ ನಮ್ಮ ಕಣ್ಣ ಮುಂದಿದೆ.ಕ್ಷೌರಿಕ ವೃತ್ತಿಯನ್ನು ಅವಲಂಬಿಸಿ ಜೀವನ ಸಾಗಿಸುತ್ತಿರುವ ಭಂಡಾರಿ ಬಂಧುಗಳ ಬವಣೆ ಅನುಭವಿಸಿದವರಿಗೆ ಮಾತ್ರ ಗೊತ್ತು.ಕೊರೋನ ಹಾವಳಿಯಿಂದಾಗಿ ಸರ್ಕಾರ ಲಾಕ್ ಡೌನ್ ಘೋಷಣೆ ಮಾಡಿದಾಗ ಭವಿಷ್ಯದ ಪರಿಸ್ಥಿತಿ ಹೀಗಾಗಬಹುದು ಎಂಬುದನ್ನು ಮೊದಲು ಗುರುತಿಸಿ,ಬಂಧುಗಳಿಗೆ ಮುನ್ನೆಚ್ಚರಿಕೆ ನೀಡಿದ್ದು ಭಂಡಾರಿವಾರ್ತೆ. ಇದು ಭಂಡಾರಿವಾರ್ತೆಯ ದೂರದೃಷ್ಟಿತ್ವ ಮತ್ತು ಬಂಧುಗಳ ಬಗೆಗಿನ ಕಾಳಜಿಯನ್ನು ಹೊರಹೊಮ್ಮಿಸಿತು.
 
ದಿನದ ಸಂಪಾದನೆಯನ್ನು ಅವಲಂಬಿಸಿ ಜೀವನ ನಿರ್ವಹಿಸುವ ಸಮುದಾಯಗಳಲ್ಲಿ ನಮ್ಮ ಭಂಡಾರಿ ಸಮಾಜವೂ ಒಂದು. ಲಾಕ್ ಡೌನ್ ಕ್ಷೌರಿಕರ ಬದುಕನ್ನು ಕಿತ್ತುಕೊಂಡಿದೆ,ಹಾಗಾಗಿ ಸರ್ಕಾರ ಕೂಡಲೇ ನಮ್ಮ ನೆರವಿಗೆ ಧಾವಿಸಬೇಕು.ಪರಿಹಾರ ರೂಪದಲ್ಲಿ ಕ್ಷೌರಿಕರಿಗೆ ಸಹಾಯಧನ ನೀಡಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರಕ್ಕೆ ಒತ್ತಾಯಪೂರ್ವಕ ಮನವಿಗಳನ್ನು ಮೊದಲು ಸಲ್ಲಿಸಿದ್ದು “ಭಂಡಾರಿವಾರ್ತೆ.” ಸರ್ಕಾರ ಕೂಡಲೇ ಸ್ಪಂದಿಸದಿದ್ದಾಗ ನಾವು ದುಂಬಾಲು ಬಿದ್ದದ್ದು ಭಂಡಾರಿ ಸಮಾಜದ ಬಲಿಷ್ಟ ಸಂಘಟನೆಗಳಿಗೆ.ಆದರೆ ಸಮಾಜ, ಸಂಘಟನೆಗಳ ಯಾವುದೇ ಮಹಾನ್ ನಾಯಕರುಗಳು ಭಂಡಾರಿ ಬಂಧುಗಳ ಪರವಾದ ನಮ್ಮ ಮನವಿಗೆ ಸ್ಪಂದಿಸದೇ ಇದ್ದಾಗ ನಾವು ಸ್ಥಳೀಯ ಭಂಡಾರಿ ಸಂಘಟನೆಗಳ ಮೊರೆ ಹೋದೆವು.ಕೆಲವು ಭಂಡಾರಿ ಕುಟುಂಬಸ್ಥರು ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿರುವ ಸ್ಥಿತಿಯನ್ನು ಅವರಿಗೆ ಮನದಟ್ಟು ಮಾಡಿಕೊಟ್ಟೆವು.ಈ ಪ್ರಯತ್ನದಲ್ಲಿ ನಾವು ಸ್ವಲ್ಪ ಮಟ್ಟಿಗಿನ ಯಶಸ್ಸನ್ನು ಕಂಡಿದ್ದು ನಿಜ.
 
 
ಮೊದಲೇ ಕಾರ್ಯ ಪ್ರವೃತವಾಗಿದ್ದ ಮೂಡಬಿದ್ರೆ ಭಂಡಾರಿ ಸಮಾಜ ಸಂಘದ ಅಧ್ಯಕ್ಷರ ಮತ್ತು ಪಧಾದಿಕಾರಿಗಳ ಸೇವಾ ಯಜ್ಞವನ್ನು ಗಮನಿಸಿ ವರದಿ ಪ್ರಕಟಿಸಿದ್ದು, ಉಡುಪಿ,ಕುಂದಾಪುರ, ಬಂಟ್ವಾಳ, ಮಂಗಳೂರು, ಪುತ್ತೂರು ಸಮಾಜ ಸಂಘ , ಸವಿತಾ ಸಮಾಜ ಸಂಘ ಮತ್ತು ಯುವ ವೇದಿಕೆಗಳ ಸೇವಾ ಕಾರ್ಯಕ್ಕೆ ಪ್ರೇರಣೆಯಾಗಿತ್ತು . ಸ್ಥಳೀಯ ಸಂಘಟನೆಗಳು ಅಕ್ಕಿ, ದವಸ ಧಾನ್ಯ ಮುಂತಾದ ಸಾಮಗ್ರಿಗಳನ್ನೊಳಗೊಂಡ ಕಿಟ್ ಗಳನ್ನು ವಿತರಿಸಲಾರಂಭಿಸಿದರು. ಈ ಸಂದರ್ಭದಲ್ಲಿ ವಿಶೇಷವಾಗಿ ಕೆಲವರಿಗೆ ನಾವೇ ಖುದ್ದಾಗಿ ಕರೆಮಾಡಿ ಫಲಾನುಭವಿಗಳನ್ನು ಗುರುತಿಸಿ ದಿನಸಿ ಕಿಟ್ ಗಳನ್ನು ಒದಗಿಸುವ ವ್ಯವಸ್ಥೆಯನ್ನು ಸಹ ಮಾಡಿದೆವು.
 
 
 
 
ಕೊನೆಗೆ ಎಚ್ಚೆತ್ತ ಸರ್ಕಾರ ಕ್ಷೌರಿಕರಿಗೆ ಸಹಾಯಧನ ಘೋಷಣೆಯನ್ನೇನೋ ಮಾಡಿತು, ಆದರೆ ಸರ್ಕಾರದ ನಿಬಂಧನೆಗಳು ಸಾಕಷ್ಟು ಬಂಧುಗಳಿಗೆ ಸೌಲಭ್ಯ ವಂಚಿತರನ್ನಾಗಿ ಮಾಡಿತು.ಇದನ್ನು ಸೂಕ್ಷ್ಮವಾಗಿ ಗಮನಿಸಿದ ಭಂಡಾರಿವಾರ್ತೆ ನಿಬಂಧನೆಗಳ ಸಡಿಲಿಕೆಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯನ್ನೂ ಮಾಡಿತು. ಆದರೆ ಯಾವುದೇ ಫಲ ನೀಡಲಿಲ್ಲ. ಇಂತಹ ಸಂದರ್ಭದಲ್ಲಿ ಹುಟ್ಟಿಕೊಂಡ ಯೋಜನೆಯೇ “ಭಂಡಾರಿವಾರ್ತೆ ಕೋವಿಡ್ 19 ಪರಿಹಾರನಿಧಿ.” 
 
 
ಈ ಯೋಜನೆಯನ್ವಯ ಸರ್ಕಾರದ ಕೋವಿಡ್ ಪರಿಹಾರ ಸಹಾಯಧನ, ಕಟ್ಟಡ ಕಾರ್ಮಿಕರ ಸಹಾಯನಿಧಿ, ಕೃಷಿ ಸಮ್ಮಾನ್ ಹೀಗೆ ಸರ್ಕಾರದ ಯಾವುದೇ ಯೋಜನೆಯ ಸೌಲಭ್ಯದಿಂದ ವಂಚಿತರಾಗಿರುವ ಭಂಡಾರಿ ಬಂಧುಗಳನ್ನು ಗುರುತಿಸಿ,ಅಂತಹವರಿಗೆ ಸಮಾಜದ ಸಹೃದಯಿ ದಾನಿಗಳಿಂದ ಹಣ ಸಂಗ್ರಹಿಸಿ ವಿತರಿಸುವ ಕಾರ್ಯ ಯೋಜನೆ ರೂಪಿಸಲಾಯಿತು. ಅದರಂತೆ ಭಂಡಾರಿ ಸಮಾಜದ ಒಂದಷ್ಟು ಕೊಡುಗೈ ದಾನಿಗಳಿಂದ ನಿಧಿ ಸಂಗ್ರಹಿಸಲಾಗಿದೆ. ಫಲಾನುಭವಿಗಳ ಪಟ್ಟಿಯೂ ಸಿದ್ದಗೊಂಡಿದೆ. ಈ ಕೆಳಗಿನ ಪಟ್ಟಿ ನಿಮ್ಮೆಲ್ಲರ ಅವಗಾಹನೆಗಾಗಿ…..
 
ನಮ್ಮ ಸೇವಾ ಯೋಜನೆಯ ಪಾಲುದಾರರು:
 
SI NO Donors /  Stakeholder of Charity Project
1 P Mahabala Mangalore
2 Prasanna Bhandry Vadodara
3 Pramod Hosanagara
4 Sudesh Kumar Udupi
5 Vatsala Chandrashekhar Bhandary Kulai
6 Naveenchandra Manipal
7 Birthi Shankar Bhandary
8 Venkatesh Kundapura
9 Ajith Ammembala
10 Nagesh Vidhyaranyapura
11 Naveenchandra Hosabettu (Ex-Naik)
12 Pratham Kumar Campco Jaipur
13 Kishor Sornad Vijaya karnataka
14 Swathi Avinash Bhandary Mangalore
15 Kushal Kumar Bangalore
16 Nellyadi Shreepal Bhandary  Qatar
17 Prashanth Bhandary Karkala
18 Prakash Bhandary Katla
19 Rajashekhar Bangalore
20 Panduranga Bhandary ‘U like’ Udupi
21 B S Satheesh Puttur

ಭಂಡಾರಿ ವಾರ್ತೆ ಕೋವಿಡ್ 19 ಪರಿಹಾರ ನಿಧಿ ಯೋಜನೆಗೆ ಆಯ್ಕೆಯಾದವರ ಪಟ್ಟಿ (Masked)

SI NO Name Taluk Mobile No.
1 R** bhandari K Kundapura ********7562
2 Lo**sh Mangalore ********5629
3 U***h bhandary Udupi ********0538
4 S***tha s Udupi ********3548
5 Sub****a H.K Sringeri ********7020
6 In***a Karkala ********3422
7 Veer****a Hosanagara ********1553
8 B***athi Udupi ********6499
9 Di***h bhandary Udupi ********0914
10 Bh*****thi Sullia ********2429
11 Pra***** bhandari J S Chikkamagalor ********1092
12 Di*****a Bhandary Karkala ********4411
13 Gi***a Puttur ********7657
14 Shr****a Bantwala ********0441
15 Na***na Belthangady ********4268
16 Kri***** bhandari Puttur ********4136
17 Mo*** Karkala ********4954
18 Ra****a Karkala ********0785
19 Ra****h Belthangady ********6637
20 Va***a Belthangady ********6528
21 Rag***** Bhandari Byndoor ********3036
22 Ya****a K Puttur ********3282
23 G****sh bhandari Kurla  ********0462
24 V***na Karkala ********6732
25 Pr*****r Bhandary Mangalore ********5901
26 Sa******h Hosanagara ********6299
27 Na****hi Bantwala ********9538
28 L****la Bantwala ********5706
29 Ra****h.K.A Mangalore ********6845
30 S****h bhandary Kundapura ********8140
31 S****va bhandari Udupi ********5822
32 A****INI Manjehwara ********1173
33 B. Ra***** Bhandary Udupi ********4885
34 Kri**** Bhandary Udupi. ********2815
35 S****ar ****a jeddu Brahmavara ********2787
36 Ki***n Udupi ********3570
37 A****tha Kundapura ********1785
38 G**** bhandary Bantwala ********2488
39 Ke*** bhandari Bantwala ********9498
40 N**** S Bhandari Mangalore ********0210
41 Ge***a Mangalore ********8659
42 V****sh Chikkamagalor ********6426
43 Re****i bhandary Puttur ********7160
44 Thi***** bhandary Kasaragod ********8106
45 Ra****a Belthangady ********8045
46 Vi***a Bantwala ********1202
47 Ya*****da Karkala ********8170
48 SA******BHANDARY MANGALORE ********9294
49 Bh****R B Mangalore ********0197
50 Sh****Bhandary Belthangady *******  6635
51 Me****hi Mangalore ********4309
52 N****a Mangalore ********6049
53 S*****na B Puttur ********5507
54 M****K Bhandary Udupi ********3840
55 M*****ra K Manjehwara ********5874
56 C*****ara B M Puttur ********9471
 
ಆಯ್ಕೆಯಾದ ಕುಟುಂಬಗಳ ಖಾತೆಗೆ ಆಗಸ್ಟ್ 31 ರ ಒಳಗಾಗಿ ನಿಗದಿತ ಮೊತ್ತವನ್ನು ಜಮೆ ಮಾಡಲಾಗುವುದು.
 
ಸಮಾಜಮುಖಿ ಚಿಂತನೆಯನ್ನು ಹೊಂದಿರುವ ಭಂಡಾರಿವಾರ್ತೆಯೆಂಬ ಒಂದು ಪುಟ್ಟ ತಂಡ ಸಮಾಜದ ಬಂಧುಗಳ ಒಳಿತಿಗಾಗಿ ಮಾಡಿರುವ ಒಂದು ಸಣ್ಣ ಪ್ರಯತ್ನವಿದು.ಈ ಯೋಜನೆಯ ಸಂಪೂರ್ಣ ಯಶಸ್ಸು ನಮ್ಮ ಮೇಲೆ ವಿಶ್ವಾಸವಿಟ್ಟು ತಮ್ಮ ಸಂಪಾದನೆಯ ಒಂದು ಭಾಗವನ್ನು ನಮಗೆ ನೀಡಿ ಪ್ರೋತ್ಸಾಹಿಸಿದ ಈ ಎಲ್ಲಾ ಮಹನೀಯರದು.ಅವರಿಗೆ ಎಂದೆಂದಿಗೂ ನಾವು ಅಭಾರಿಯಾಗಿದ್ದೇವೆ. ನಮ್ಮ ಮುಂದಿನ ಸೇವಾ ಕೈಂಕರ್ಯಗಳಲ್ಲಿ ನಿಮ್ಮೆಲ್ಲರ ಭಾಗವಹಿಸುವಿಕೆಯ ವಿನಂತಿಯನ್ನು ಮತ್ತೊಮ್ಮೆ ಮಾಡಿಕೊಳ್ಳುತ್ತೇವೆ.
 
ಧನ್ಯವಾದಗಳೊಂದಿಗೆ..
“ಭಂಡಾರಿವಾರ್ತೆ.”

3 thoughts on ““ಭಂಡಾರಿ ವಾರ್ತೆ ಕೋವಿಡ್ 19 ಪರಿಹಾರ ನಿಧಿ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಮೂಲಕ ವಿತರಣೆ.”

  1. Thank you Bhandary Varthe and Team. ಕಷ್ಟದ ಪರಿಸ್ಥಿತಿಯಲ್ಲಿ ಸಹಾಯ ನೀಡಲು ಮನಸು ಮಾಡಿದ ಎಲ್ಲ ನಮ್ಮ ಸಮಾಜ ಬಾಂಧವರಿಗೆ ಧನ್ಯವಾದಗಳು. ಅಂತೆಯೇ ಪ್ರತಿ ಮಾಹಿತಿಯನ್ನು ನಮ್ಮ ಮನೆಗೆ ತಲುಪುವಂತೆ Whatsapp ಮುಖಾಂತರ ಕುಳುಹಿಸುವ ಶ್ರೀಪಾಲ್ ಅಣ್ಣನಿಗೆ ನನ್ನ ವಂದನೆಗಳು.

  2. ಭಂಡಾರಿ ವಾರ್ತೆ ಕೇವಲ ಸುದ್ದಿ ಮಾಧ್ಯಮಕ್ಕೆ ಮಾತ್ರ ಸೀಮಿತವಾಗಿರದೆ ಶಿಕ್ಷಣ, ಸಮಾಜ ಅಂತ ಬಂದಾಗ ಸಹಾಯಹಸ್ತವನ್ನು ನೀಡಿದೆ…ನೀಡುತ್ತಾ ಬಂದಿದೆ… ಮುಂದೆಯೂ ನೀಡುತ್ತದೆ. ಅದು ಕೂಡ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಈ ರೀತಿಯ ನಿಸ್ವಾರ್ಥ ಸೇವೆಯೂ ಭಂಡಾರಿ ವಾರ್ತೆಯನ್ನು ತೆಗಳುವವರಿಗೆ ಮಾದರಿಯಾಗಿದೆ.

Leave a Reply

Your email address will not be published. Required fields are marked *