January 18, 2025
celebration
ಮಾಧವ ಭಂಡಾರಿ ಸಾಗರ ಮತ್ತು ಲಕ್ಷ್ಮಣ ಕರಾವಳಿಯವರ ಮಾತುಗಳು ಸಭೆಯಲ್ಲಿ ಒಂದು ರೀತಿಯ ವಿದ್ಯುತ್ ಸಂಚಾರವನ್ನುಂಟು ಮಾಡಿದ್ದಂತೂ ಸತ್ಯ.
ನಿರೂಪಕಿ ಗ್ರೀಷ್ಮಾ ಭಂಡಾರಿ ಕಲ್ಲಡ್ಕ… “ಸಭೆಯಲ್ಲಿ ಉಪಸ್ಥಿತರಿರುವ ಬಂಧುಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಬಹುದು” ಎಂದು ವಿನಂತಿಸಿಕೊಂಡಾಗ ಬಂಟ್ವಾಳದ ಎಸ್.ವಿ.ಎಸ್ ಕಾಲೇಜಿನ ಉಪನ್ಯಾಸಕರೂ, ಕುರಿಯಾಳ ಶ್ರೀ ಜಗದೀಶ್ ಭಂಡಾರಿಯವರ ಧರ್ಮಪತ್ನಿ ಶ್ರೀಮತಿ ಮೋಹಿನಿ ಜಗದೀಶ್ ಭಂಡಾರಿಯವರ ಸಹೋದರರಾದ ಶ್ರೀ ನಾರಾಯಣ ಭಂಡಾರಿಯವರು ವೇದಿಕೆಗಾಗಮಿಸಿ….
“ಎಲ್ಲರಿಗೂ ನಮಸ್ಕಾರಗಳು.ಈ ದಿನ ಈ ಸಭೆಗೆ ಬರುವಾಗ ಯಾವುದೇ ಹೆಚ್ಚಿನ ನಿರೀಕ್ಷೆಗಳಿರಲಿಲ್ಲ. ಆದರೆ ಇಲ್ಲಿ ಬಂದ ಮೇಲೆ ಭಂಡಾರಿವಾರ್ತೆ ಮಾಡುತ್ತಿರುವ ಸಮಾಜಮುಖಿ ಕಾರ್ಯಗಳನ್ನು ನೋಡಿ ಆಶ್ಚರ್ಯವಾಯಿತು. ವಿದ್ಯಾರ್ಥಿಗಳಿಗೆ ನೀವು ಮಾಡುತ್ತಿರುವ ಸಹಾಯ ನೋಡಿ ಸಂತೋಷವಾಯಿತು. ನಾನೂ ಸಹ ಕಾಲೇಜಿನಲ್ಲಿ ತುಂಬಾ ವರ್ಷಗಳಿಂದ ಗುಪ್ತವಾಗಿ ಕೆಲವು ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತಾ ಬಂದಿದ್ದೇನೆ. ಇನ್ನು ಮುಂದೆ ಭಂಡಾರಿ ಸಮಾಜದ ಮಕ್ಕಳಿಗೆ ಸಹಾಯ ಆಗುವುದಾದರೆ ಭಂಡಾರಿವಾರ್ತೆಯ ಈ ಕಾರ್ಯದಲ್ಲಿ ನಾನೂ ಕೈ ಜೋಡಿಸುತ್ತೇನೆ. ಧನ್ಯವಾದಗಳು “ ಹೀಗೆ ಭರವಸೆಯ ಮಾತುಗಳನ್ನಾಡಿದರು.
ನಂತರ ವೇದಿಕೆಗೆ ಆಗಮಿಸಿದವರು ಶ್ರೀ ಶೇಖರ್ ಭಂಡಾರಿ ಕಾರ್ಕಳ.ಅವರು ಮಾತನಾಡುತ್ತಾ….”ಭಂಡಾರಿವಾರ್ತೆಯಲ್ಲಿ ನನ್ನ ಬಗ್ಗೆ ಸಾದಿತ ಭಂಡಾರಿ ಅಂಕಣದಲ್ಲಿ ಭಾಸ್ಕರ್ ಭಂಡಾರಿಯವರು ತುಂಬಾ ಚನ್ನಾಗಿ ಬರೆದಿದ್ದಾರೆ.ಓದಿ ತುಂಬಾ ಖುಷಿಯಾಯಿತು.ಭಂಡಾರಿವಾರ್ತೆಗೆ  ಮತ್ತು ತಂಡಕ್ಕೆ ಧನ್ಯವಾದಗಳು.ಮತ್ತೆ ನಾನೇನೂ ಭಾಷಣಕ್ಕೆ ತಯಾರಿ ಮಾಡಿ ಬಂದಿಲ್ಲ.ಹಾಗಾಗಿ ನನ್ನ ಕೆಲವು ಪ್ರಾಸ ರಚನೆಗಳನ್ನು ಹೇಳುತ್ತೇನೆ…..”
“ಭಂಡಾರಿವಾರ್ತೆಯ ಟೀಮು
ಅವರಲ್ಲಿಲ್ಲ ಡಬಲ್ ಗೇಮು
ಅವರಿಗಿರುವುದು ಒಂದೇ ಏಮು
ಭಂಡಾರಿ ಸಮಾಜಕ್ಕೆ ಬರಬೇಕೊಂದು ನೇಮು.”
ಎಂದು ಹೇಳಿ ಸಭೆಯನ್ನು ನಗೆಗಡಲಲ್ಲಿ ತೇಲಿಸಿದರು.ಮುಂದುವರಿಯುತ್ತಾ….”ಪ್ರಕಾಶ ಎಂದರೆ ಬೆಳಕು.ಪ್ರಕಾಶ್ ಭಂಡಾರಿ ಕಟ್ಲಾರವರು ಭಂಡಾರಿ ಸಮಾಜಕ್ಕೆ ಭಂಡಾರಿವಾರ್ತೆಯೆಂಬ ಒಂದು ಬೆಳಕು ಕೊಟ್ಟಿದ್ದಾರೆ. ಆ ಬೆಳಕು ನಿರಂತರವಾಗಿ ಬೆಳಗುತ್ತಿರಲಿ ಎಂದು ಹಾರೈಸುತ್ತೇನೆ. “ಎಂದು ಶುಭ ಕೋರುತ್ತಾ ತಮ್ಮ ಮಾತುಗಳನ್ನು ಮುಗಿಸಿದರು.
“ಈಗ ಭಂಡಾರಿವಾರ್ತೆಯ ಸೆಲ್ಫಿ ಸ್ಪರ್ಧೆಯ ವಿಜೇತರಿಗೆ ಪ್ರಶಸ್ತಿಪತ್ರ ವಿತರಣೆ” ಹೀಗೆಂದು ನಿರೂಪಕಿ ಹೇಳುತ್ತಿದ್ದಂತೆ ಪ್ರಕಾಶ್ ಭಂಡಾರಿ ಕಟ್ಲಾರವರು ಮುಂದಿನ ಕಾರ್ಯಕ್ರಮದ ಹೊಣೆ ಹೊತ್ತರು….
“ದಯವಿಟ್ಟು ಸೆಲ್ಫಿ ಸ್ಪರ್ಧೆಯ ವಿಜೇತರಿಗೆ ಪ್ರಶಸ್ತಿಪತ್ರ ಮತ್ತು ಬಹುಮಾನ ನೀಡಲು ನಮ್ಮ ಪ್ರಾಯೋಜಕರು ವೇದಿಕೆಗೆ ಆಗಮಿಸಬೇಕು” ಎಂದು ಪ್ರಾಯೋಜಕರನ್ನು ವೇದಿಕೆಗೆ ಅಹ್ವಾನಿಸಿದರು.
ವೇದಿಕೆಗೆ ಶ್ರೀ ನರಸಿಂಹ ಭಂಡಾರಿ ಕೊಪ್ಪ, ಶ್ರೀ ಲಕ್ಷ್ಮಣ ಕರಾವಳಿಯವರು, ಶ್ರೀ ಪ್ರವೀಣ್ ಭಂಡಾರಿ ಕೋಡಕ್ಕಲ್, ಶ್ರೀ ಪ್ರಫುಲ್ ಭಂಡಾರಿ ಬ್ಲಂಟ್ ಸಲೂನ್,ಮಂಗಳೂರು, ಬಂಟ್ವಾಳದ ಶೃಂಗಾರ್ ಜ್ಯುವೆಲ್ಲರ್ಸ್ ಮಾಲೀಕರು ಇವರನ್ನೆಲ್ಲ ಆಹ್ವಾನಿಸಲಾಯಿತು. 

*ಸೆಲ್ಫಿ ಸ್ಪರ್ಧೆಯ ಪ್ರಥಮ ಬಹುಮಾನ ಪಡೆದ ಸುನಂದಾ ಭಂಡಾರಿ ಕರಂಬಳ್ಳಿಯವರಿಗೆ ಐವತ್ತು ಗ್ರಾಮ್ ಬೆಳ್ಳಿಯ ಪದಕ ಮತ್ತು ಪ್ರಶಸ್ತಿಪತ್ರ ನೀಡಲಾಯಿತು.

*ದ್ವಿತೀಯ ಬಹುಮಾನ ಪಡೆದ ನಾಗೇಶ್ ಭಂಡಾರಿ ಕೊಪ್ಪ ಇವರಿಗೆ ಮೂವತ್ತು ಗ್ರಾಮ್ ನ ಬೆಳ್ಳಿಯ ಪದಕ ಮತ್ತು ಪ್ರಶಸ್ತಿಪತ್ರವನ್ನು ನೀಡಲಾಯಿತು.

ಪ್ರಾಯೋಜಕರಿಗೆಲ್ಲಾ ನೆನಪಿನ ಕಾಣಿಕೆ ನೀಡಲಾಯಿತು.

ಆಗ ಪ್ರಕಾಶ್ ಭಂಡಾರಿ ಕಟ್ಲಾರವರು ಒಂದು ಸ್ಪಷ್ಟೀಕರಣ ನೀಡಲು ಮುಂದಾದರು…. “ಈ ಸೆಲ್ಫಿ ಸ್ಪರ್ಧೆಯ ವಿಜೇತರ ಆಯ್ಕೆ ಕೆಲವರಿಗೆ ಅಸಮಾಧಾನ ತಂದಿರಬಹುದು. ಹಾಗಾಗಿ ನಾನು ಸ್ಪಷ್ಟೀಕರಣ ನೀಡ ಬಯಸುತ್ತೇನೆ. ಈ ಸ್ಪರ್ಧೆಯ ಉದ್ದೇಶ ನಿಮ್ಮನ್ನೆಲ್ಲಾ ಒಗ್ಗೂಡಿಸುವುದರ ಜೊತೆಗೆ ನಮ್ಮ ಭಂಡಾರಿವಾರ್ತೆಯ ಪ್ರಚಾರವು ನಮಗೆ ಮುಖ್ಯವಾಗಿತ್ತು. ಅದರಂತೆ ನಮ್ಮ ನಿಯಮ ನಿಬಂಧನೆಗಳ ಅಡಿಯಲ್ಲಿ ಅದನ್ನೂ ಕಾಣಿಸಲಾಗಿತ್ತು. ಫೋಟೋ ಲೈಕ್ ಗಳ ಜೊತೆಗೆ ಅತೀ ಹೆಚ್ಚು ಪೇಜ್ ಲೈಕ್ ಪಡೆದವರಿಗೆ ಬಹುಮಾನ ನೀಡಲಾಗುವುದೆಂದು. ಆ ನಿಬಂಧನೆಯಡಿ ವಿಜೇತರನ್ನು ಆಯ್ಕೆ ಮಾಡಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸಿರುವವರು ಎಲ್ಲರೂ ನಮ್ಮವರೇ ಆಗಿರುವಾಗ ಪಕ್ಷಪಾತದ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಅಲ್ಲವೇ?” ಎಂದು ಕೆಲವರ ಸಂಶಯಗಳಿಗೆ ತೆರೆ ಎಳೆದರು.
ಸಾಗರದ ಮಾಧವ ಭಂಡಾರಿಯವರಿಗೆ ಅವರ ವ್ಯಂಗ್ಯಚಿತ್ರವನ್ನೊಳಗೊಂಡ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಅದನ್ನು ನೋಡಿದ ಮಾಧವಣ್ಣನವರು…. “ನನಗೆ ನನ್ನದೇ ವ್ಯಂಗ್ಯಚಿತ್ರ ಬರೆಸಿಕೊಳ್ಳುವುದು ತುಂಬಾ ಇಷ್ಟದ ಹವ್ಯಾಸ,ನನ್ನ ಬಳಿ ಈಗಾಗಲೇ ದೇಶದ ಪ್ರಖ್ಯಾತ ವ್ಯಂಗ್ಯಚಿತ್ರಕಾರರು ಬರೆದ ಇಪ್ಪತ್ತೆಂಟಕ್ಕೂ ಹೆಚ್ಚು ವ್ಯಂಗ್ಯಚಿತ್ರಗಳ ಸಂಗ್ರಹವೇ ಇದೆ” ಎಂದು ತಮ್ಮ ಸಂತಸವನ್ನು ಹಂಚಿಕೊಂಡರು.
ಸಭೆಯಲ್ಲಿ ಉಪಸ್ಥಿತರಿದ್ದ ಕೆಲವು ಸ್ಪರ್ಧಿಗಳಿಗೆ ಪ್ರಶಸ್ತಿಪತ್ರಗಳನ್ನು ಸಂದೇಶ್ ಬಂಗಾಡಿಯವರು ಕ್ರಮವಾಗಿ ನೀಡಿದಂತೆ ಪ್ರಕಾಶ್ ಭಂಡಾರಿ ಕಟ್ಲಾರವರು ವಿತರಿಸಿದರು.
ಪ್ರಶಸ್ತಿಪತ್ರ ಪಡೆದ ವಿಟ್ಲ ಠಾಣೆಯ ಪೋಲಿಸ್ ಕಾನ್ಸ್‌ಟೇಬಲ್ ಶ್ರೀ ಸುಧಾಕರ ಭಂಡಾರಿ ಮುಕ್ಕ ಮಾತನಾಡುತ್ತಾ….. “ಇಪ್ಪತ್ತೈದು ವರ್ಷಗಳ ಹಿಂದೆ ಈ ಭಂಡಾರಿವಾರ್ತೆಯ ತಂಡ ನನಗೆ ಸಿಕ್ಕಿದ್ದರೆ ನಾನೂ ಕೂಡಾ ಐಪಿಎಸ್ ಅಥವಾ ಐಏಎಸ್ ಮಾಡುತ್ತಿದ್ದೆನೇನೋ? ನನಗೆ ಆಗ ಓದಲು ಯಾರದ್ದೂ ಸಹಕಾರ ಇರಲಿಲ್ಲ.ಮತ್ತು ಭಂಡಾರಿವಾರ್ತೆ ಪರಿಚಯ ಆದ ಮೇಲೆ ನನಗೂ ಸ್ವಲ್ಪ ಈ ಇಂಟರ್ನೆಟ್, ವಾಟ್ಸ್ಯಾಪ್ ನಂತಹ ಸಾಮಾಜಿಕ ಜಾಲತಾಣಗಳ ಪರಿಚಯ ಆಯ್ತು.ಧನ್ಯವಾದಗಳು ಭಂಡಾರಿವಾರ್ತೆಯ ತಂಡಕ್ಕೆ” ಎಂದು ತಮ್ಮ ಮನದಿಂಗಿತವನ್ನು ವ್ಯಕ್ತಪಡಿಸಿದರು.
ನಿರೂಪಕಿ ಗ್ರೀಷ್ಮಾ ಭಂಡಾರಿ ಈಗ ಭಂಡಾರಿವಾರ್ತೆಯ ಕಾರ್ಯನಿರ್ವಾಹಕರು ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಬೇಕೆಂದು ಪ್ರಕಟಿಸಿದರು.
ಆಗ ಪ್ರಕಾಶ್ ಭಂಡಾರಿಯವರು….. “ನಾನು ನನ್ನೆಲ್ಲಾ ಅನಿಸಿಕೆ, ಅಭಿಪ್ರಾಯಗಳನ್ನು ಹಂಚಿಕೊಂಡಾಗಿದೆ. ಆದರೂ ಒಂದು ಮುಖ್ಯವಾದ ವಿಷಯ ಬಾಕಿಯಿದೆ. ಅದೇನೆಂದರೆ ತುಂಬಾ ಉತ್ತಮ ರೀತಿಯಲ್ಲಿ ನಡೆಯುತ್ತಿದ್ದ ಭಂಡಾರಿ ವಿವಾಹ ವೇದಿಕೆ ಕಾರಣಾಂತರಗಳಿಂದ ಒಂದೆರಡು ವರ್ಷ ಸ್ಥಗಿತಗೊಂಡಿತ್ತು. ಕಾರಣ ಈಗ ಅನವಶ್ಯಕ. ಈ ದಿನ ಭಂಡಾರಿವಾರ್ತೆಯ ” ಭಂಡಾರಿ ವಿವಾಹ” ವೆಬ್ಸೈಟ್ ನ್ನು ಅನಾವರಣ ಮಾಡಿ ಅದನ್ನು ಪುನರ್ ಪ್ರಾರಂಭಿಸುತ್ತಿದ್ದೇನೆ. ಈ ವೇದಿಕೆಯಿಂದ ಇಳಿದ ಕೂಡಲೇ ಸಂಬಂಧಿಸಿದ ಲಿಂಕ್ ನ್ನು ನಿಮಗೆಲ್ಲಾ ಕಳಿಸಿಕೊಡುತ್ತೇನೆ. ದಯವಿಟ್ಟು ನಿಮ್ಮ ಸಹಕಾರ ನಮ್ಮ ಮೇಲಿರಲಿ” ಎಂದು ಹೇಳಿ ತಮ್ಮ ಮಾತಿಗೆ ಮಂಗಳ ಹಾಡಿದರು.
ನಿರೂಪಕಿಯಿಂದ ಸೂಚನೆ “ಈಗ ಪ್ರಶಾಂತ್ ಭಂಡಾರಿ ಕಾರ್ಕಳ ಅವರಿಂದ ವಂದನಾರ್ಪಣೆ.”
ವೇದಿಕೆಗೆ ಆಗಮಿಸಿದ ಪ್ರಶಾಂತ್ ಭಂಡಾರಿ ಕಾರ್ಕಳ….
“ಎಲ್ಲರಿಗೂ ನಮಸ್ಕಾರಗಳು.ಈಗ ಕಾರ್ಯಕ್ರಮದ ಕೊನೆಯ ಹಂತದಲ್ಲಿ ನಾವಿದ್ದೇವೆ.
ಈ ಕಾರ್ಯಕ್ರಮದಲ್ಲಿ ನಮ್ಮೊಂದಿಗಿದ್ದ ಅತಿಥಿ ಗಣ್ಯರಿಗೆ ಧನ್ಯವಾದಗಳು. ನಮ್ಮೆಲ್ಲಾ ಕಾರ್ಯಕ್ರಮದ ಪ್ರಾಯೋಜಕರಿಗೆ ಹೃದಯಸ್ಪರ್ಶಿ ಧನ್ಯವಾದಗಳು. ಕಳೆದ ಒಂದು ವರ್ಷದಿಂದ ನಮ್ಮ ಭಂಡಾರಿವಾರ್ತೆ ಅಂತರ್ಜಾಲ ಪತ್ರಿಕೆಯನ್ನು ಓದಿ ನಮ್ಮನ್ನು ಪ್ರೋತ್ಸಾಹಿಸಿದ್ದಲ್ಲದೇ, ನಮ್ಮ ಪ್ರಥಮ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಪಾಲ್ಗೊಂಡ ಎಲ್ಲಾ ಭಂಡಾರಿ ಬಂಧುಗಳಿಗೂ ಧನ್ಯವಾದಗಳು. ಹಾಗೆಯೇ ಭಂಡಾರಿವಾರ್ತೆ ಸೆಲ್ಫಿ ಸ್ಪರ್ಧೆಯಲ್ಲಿ ಅತೀ ಉತ್ಸಾಹದಿಂದ ಪಾಲ್ಗೊಂಡ ಎಲ್ಲಾ ಸ್ಪರ್ಧಿಗಳಿಗೂ, ವಿಜೇತರಿಗೂ ಧನ್ಯವಾದಗಳು. ಇಂದಿನ ಕಾರ್ಯಕ್ರಮವನ್ನು ಚಂದಗಾಣಿಸಿಕೊಟ್ಟ ತಂಡದ ಸದಸ್ಯರಿಗೂ ಮತ್ತು ವಿವಿದೆಡೆಗಳಿಂದ ಆಗಮಿಸಿ ಕಾರ್ಯಕ್ರಮದ ಯಶಸ್ಸಿನಲ್ಲಿ ಭಾಗಿಯಾದ ಎಲ್ಲರಿಗೂ ಅನಂತಾನಂತ ವಂದನೆಗಳು.” ಎಂದು ತಮ್ಮ ವಂದಾನಾರ್ಪಣಾ ಭಾಷಣವನ್ನು ಪೂರೈಸಿದರು.
ನಿರೂಪಕಿ ಗ್ರೀಷ್ಮಾ ಭಂಡಾರಿ ಕಲ್ಲಡ್ಕ ಸಭೆಗೆ ಆಗಮಿಸಿದ “ಎಲ್ಲರೂ ಲಘು ಉಪಹಾರವನ್ನು ಸೇವಿಸಬೇಕು” ಎಂದು ಹೇಳುವುದರೊಂದಿಗೆ ಸಭೆಗೆ ಪೂರ್ಣವಿರಾಮ ಹಾಕಲಾಯಿತು.
ವರದಿ : ಭಾಸ್ಕರ್ ಭಂಡಾರಿ ಶಿರಾಳಕೊಪ್ಪ.

2 thoughts on “ಭಂಡಾರಿವಾರ್ತೆಯ ಮೊದಲ ವರ್ಷದ ವಾರ್ಷಿಕೋತ್ಸವ ವರದಿ. 5- ಸೆಲ್ಫಿ ಸ್ಪರ್ಧೆ 2018 ಬಹುಮಾನ ವಿತರಣೆ ಸಮಾರಂಭ

  1. You did present the program in the right spirit and the right way a program of social concern should go. Thank you ” Bhandary varthe ” team, I would see you are on the right path with a clear attitude. Keep your special attention always open to critics and opinions in the interest of “SAMAJA” from the regardable sources. Ever drain out good samaritans, let your attitude attract and gets more n better samaritans to serve the society. Thank you all those who made ” Bhandary varthe ” once again. NAMASTHE.

  2. Nange tumba kushi aytu Function ge bandiddu.
    Heriyara kushi yada mathu tumbba kushi niditu.mate mate kelabeku anisuva madhura mathu galu.

    Namma bhandary varthe namma Hemme.
    Namma Jana namma yellige.

    Tqqq so much… Bhandary varthe team…

Leave a Reply

Your email address will not be published. Required fields are marked *