ಕೋವಿಡ್ -19 ಎಂಬ ಮಹಾಮಾರಿ ಕಾಯಿಲೆಯ ಕಾರಣ ಲಾಕ್ ಡೌನ್ ಜಾರಿಯಾಗಿತ್ತು. ಈ ಸಂದರ್ಭದಲ್ಲಿ ದುಡಿಯುವ ವರ್ಗಗಳು ಹೈರಾಣಾಗಿ ಹೋಗಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಸುಮಾರು 2 ತಿಂಗಳು ಆರ್ಥಿಕ ಚಟುವಟಿಕೆಗಳು ಸಂಪೂರ್ಣ ಸ್ತಬ್ದವಾಗಿದ್ದ ಪರಿಣಾಮ ಬಡ ಮತ್ತು ಮಧ್ಯಮ ವರ್ಗ ತೀರಾ ಕಷ್ಟದಲ್ಲಿ ಸಿಲುಕಿದೆ. ಇದು ಕ್ಷೌರಿಕ ಬಂಧುಗಳು ಹೆಚ್ಚಾಗಿರುವ ಭಂಡಾರಿ ಕುಟುಂಬಗಳ ಮೇಲೆ ಅತಿಯಾದ ಪ್ರಭಾವ ಬೀರಿದೆ. ಈ ಬಗ್ಗೆ ಸಂಘ ಸಂಸ್ಥೆಗಳು ಮತ್ತು ಹಲವು ಒಕ್ಕೂಟಗಳ ಧ್ವನಿ ಸರ್ಕಾರಕ್ಕೆ ಮುಟ್ಟಿದ ಪರಿಣಾಮ ಕ್ಷೌರಿಕರಿಗೆ ರೂ. 5000 ಪರಿಹಾರ ನೀಡಲಾಗುತ್ತಿದೆ. ಆದರೆ ಕೆಲ ಕ್ಷೌರಿಕ ಮತ್ತು ಕ್ಷೌರಿಕೇತರ ಭಂಡಾರಿ ಕುಟುಂಬಗಳು ಸರ್ಕಾರದ ಪರಿಹಾರಕ್ಕೆ ಅರ್ಹರಾಗದೇ ವಂಚಿತರಾಗಿದ್ದಾರೆ.
ಭಂಡಾರಿ ಕುಟುಂಬಗಳ ಆರ್ಥಿಕತೆ ಬಗ್ಗೆ ಸದಾ ಅವಲೋಕಿಸುತ್ತಿರುವ ಭಂಡಾರಿ ವಾರ್ತೆ ಲಾಕ್ ಡೌನ್ ಸಂದರ್ಭದಲ್ಲಿ ಕಷ್ಟದಲ್ಲಿರುವ ಭಂಡಾರಿ ಕುಟುಂಬಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಅದಕ್ಕೆ ಬೇಕಾದಂತೆ ಸ್ಥಳೀಯ ಸಂಘ ಅಥವಾ ಸ್ವಯಂ ಸೇವಕರು ಅಥವಾ ದಾನಿಗಳ ಮೂಲಕ ತುರ್ತಾಗಿ ಸ್ಪಂಧಿಸಿ ಮಾಧ್ಯಮವಾಗಿ ಮಾಡಬೇಕಾದ ಜವಬ್ದಾರಿಯನ್ನು ತನ್ನಿಂದ ಆದಷ್ಟು ನಿಭಾಯಿಸಿದೆ.
ಈಗ ಭಂಡಾರಿ ವಾರ್ತೆಯು ಲಾಕ್ ಡೌನ್ ನಂತರವೂ ತೊಂದರೆಯಲ್ಲಿರುವ , ಸರ್ಕಾರದ ಯಾವುದೇ ಕೋವಿಡ್-19 ಪರಿಹಾರ ಸೌಲಭ್ಯ ವಂಚಿತರಾಗಿದ್ದು, ಕೆಲಸ ಕಳೆದುಕೊಂಡು ಮನೆಯಲ್ಲಿರುವ ಕುಟುಂಬಗಳನ್ನು ಗುರುತಿಸುವ ಮತ್ತು ದಾನಿಗಳ ಸಹಕಾರದೊಂದಿಗೆ ಪರಿಹಾರ ನೀಡುವ ಬಗ್ಗೆ ಒಂದು ಯೋಜನೆ ರೂಪಿಸಿದೆ.
ಇದಕ್ಕೆ ಈಗಾಗಲೇ ಮಾನದಂಡಗಳು ಸಿದ್ಧಗೊಂಡಿದ್ದು, ಆನ್ ಲೈನ್ ಅರ್ಜಿಯೊಂದನ್ನು ತಯಾರಿಸಿದೆ.. ಈ ಅರ್ಜಿಯನ್ನು ನಿಮ್ಮ ಮೊಬೈಲ್ ಭಂಡಾರಿ ವಾರ್ತೆ ವೆಬ್ಸೈಟ್ ಮೂಲಕ ಸಲ್ಲಿಸಬಹುದಾಗಿದೆ.
ಭಂಡಾರಿ ವಾರ್ತೆ ಕೋವಿಡ್ -19 ಪರಿಹಾರ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಲ್ಲದ ಕುಟುಂಬಗಳು ಯಾವುವು?
1) ಸರ್ಕಾರಕ್ಕೆ ಕೋವಿಡ್ -19 ಪರಿಹಾರ ಪಡೆಯಲು ಅರ್ಜಿ ಸಲ್ಲಿಸಿದ ಮತ್ತು ಪರಿಹಾರ ಪಡೆದ ಕ್ಷೌರಿಕ, ಚೆಂಡೆ -ವಾದ್ಯ ವಾದಕ, ಆಟೋ, ಟ್ಯಾಕ್ಸಿ, ಕೃಷಿಕ, ನೇಕಾರ ಮುಂತಾದ ಕುಟುಂಬಗಳು.
2. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಮತ್ತು ಕಟ್ಟಡ ಕಾರ್ಮಿಕ ಕಾರ್ಡ್ ಹೊಂದಿದ್ದು ಪರಿಹಾರ ಪಡೆದವರು ಮತ್ತು ಅರ್ಜಿ ಸಲ್ಲಿಸಿರುವ ಕುಟುಂಬಗಳು.
3) 5 ಲಕ್ಷ ಮೀರಿದ ವಾರ್ಷಿಕ ಆದಾಯ ಹೊಂದಿರುವ ಎಲ್ಲಾ ಕುಟುಂಬಗಳು
4) ಸರ್ಕಾರಿ ಮತ್ತು ಇತರ ಖಾಯಂ ನೌಕರಿ ಹೊಂದಿರುವ ಸದಸ್ಯರನ್ನೊಳಗೊಂಡ ಕುಟುಂಬಗಳು .
ಯಾವ ಕುಟುಂಬಗಳು ಅರ್ಹರು?
ಮೇಲೆ ತಿಳಿಸಿದ (1) (2) (3) (4) ನಿಬಂಧನೆಗಳನ್ನು ಹೊರತು ಪಡಿಸಿ ಉಳಿದ ಎಲ್ಲಾ ಭಂಡಾರಿ ಕುಟುಂಬಗಳು (ಉಡುಪಿ, ದಕ್ಷಿಣಕನ್ನಡ, ಕಾಸರಗೋಡು ಮೂಲದ) ಅರ್ಜಿ ಸಲ್ಲಿಸಬಹುದು. ಒಂದು ಕುಟುಂಬಕ್ಕೆ ಒಂದು ಅರ್ಜಿ ಸಲ್ಲಿಸಲು ಮಾತ್ರ ಅವಕಾಶ.
ಆಯ್ಕೆ ಪ್ರಕ್ರಿಯೆ ಹೇಗೆ?
1) ಆನ್ ಲೈನ್ ಅರ್ಜಿ ಸ್ವೀಕಾರ
2) ಅರ್ಹ ಕುಟುಂಬಗಳ ಗುರುತಿಸುವಿಕೆ
3) ಸ್ಥಳೀಯ ಸಂಸ್ಥೆಗಳ ಸಹಾಯದಿಂದ ಧೃಡೀಕರಣ.
4) ಆಯ್ಕೆಯಾದ ಅರ್ಹ ಕುಟುಂಬದ ಯಜಮಾನನ ಖಾತೆಗೆ ನೇರ ನಗದು ವರ್ಗಾವಣೆ.
ವಿ. ಸೂ: ಅರ್ಜಿ ಸಲ್ಲಿಸುವ ಅವಿಭಕ್ತ ಕುಟುಂಬ (Joint Family) ಗಳು ಮಾತ್ರ ಒಂದಕ್ಕಿಂತ ಹೆಚ್ಚು ಅರ್ಜಿ ಸಲ್ಲಿಸಬಹುದು.
ಆನ್ಲೈನ್ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 22-06-2020
ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 20-07-2020
ONLINE ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
……………………………………………………………………………………………………………………………….
*ಇದೊಂದು ಪ್ರಾಯೋಗಿಕ ಹೆಜ್ಜೆಯ ಯೋಜನೆಯಾಗಿದ್ದು, ನಮಗೆ ಈ ಯೋಜನೆಯನ್ನು ಸಂಘಟಿತವಾಗಿ ಕಾರ್ಯಗತಗೊಳಿಸುವ ಅನಿವಾರ್ಯತೆಯಿದ್ದು, ಯೋಜನೆಯ ಅನುಷ್ಟಾನದಲ್ಲಿ ಕೈ ಜೋಡಿಸುವ ಸೇವಾ ಮನೋಭಾವವುಳ್ಳ ಸಂಘ ಸಂಸ್ಥೆಗಳು ಮತ್ತು ವ್ಯಕ್ತಿಗಳು ಈ ಕೆಳಗಿನ ಸಂಪರ್ಕ ಸಂಖ್ಯೆಯನ್ನು ಸಂಪರ್ಕಿಸಬಹುದು. ಹಾಗೆಯೇ ಅರ್ಜಿ ಸಲ್ಲಿಸುವವರು ಯಾವುದೇ ಅನುಮಾನ , ತಾಂತ್ರಿಕ ಸಮಸ್ಯೆಯಾದಲ್ಲಿ ಈ ಕೆಳಗಿನ ಸಂಖ್ಯೆಯನ್ನು ಸಂಪರ್ಕಿಸಬಹುದು.
ಮೊಬೈಲ್ : 9845125214, 7892294705, 9964275012, 9980563164