
ಬಂಟ್ವಾಳ ತಾಲೂಕು ಶಂಭೂರು ಶ್ರೀ ವಾಸುದೇವ ಭಂಡಾರಿ ಮತ್ತು ಶ್ರೀಮತಿ ಗೀತಾ ವಾಸುದೇವ ಭಂಡಾರಿ ದಂಪತಿಗಳ ಪುತ್ರ…

ಚಿ|| ತಕ್ಷಣ್ ಕುಮಾರ್.
ಮತ್ತು
ಚಿ||ಸೌ|| ಸ್ಮಿತಾ.
ಬೆಳ್ತಂಗಡಿ ತಾಲೂಕು ವೇಣೂರು ಗರ್ಡಾಡಿ ಗುಂಡದಡೆ ದಿವಂಗತ ಜಯರಾಮ ಭಂಡಾರಿ ಮತ್ತು ಶಶಿಕಲಾ ಜಯರಾಮ ಭಂಡಾರಿ ದಂಪತಿಯ ಪುತ್ರಿ.





ಇವರ ವಿವಾಹವು ಜನವರಿ 27,2019 ರ ಭಾನುವಾರ ಬಂಟ್ವಾಳ ಪಾಣೆಮಂಗಳೂರು ಶ್ರೀ ವೀರ ವಿಠ್ಠಲ ದೇವಸ್ಥಾನದ ಶ್ರೀ ಸುಕೃತೀಂದ್ರ ಕಲಾಮಂದಿರದಲ್ಲಿ ಬಂಧುಮಿತ್ರರು,ಕುಟುಂಬಸ್ಥರು ಹಾಗೂ ಆತ್ಮೀಯರ ಸಮ್ಮುಖದಲ್ಲಿ ಅಗ್ನಿಸಾಕ್ಷಿಯಾಗಿ ಗುರುಹಿರಿಯರ ಶುಭಾಶೀರ್ವಾದಗಳೊಂದಿಗೆ ನೆರವೇರಿತು.
ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದ ನವ ದಂಪತಿಗಳಿಗೆ ಶ್ರೀ ದೇವರು ಆರೋಗ್ಯ, ಆಯುಷ್ಯ,ಸಕಲ ಐಶ್ವರ್ಯವನ್ನೂ ದಯಪಾಲಿಸಿ, ಪ್ರೀತಿ ವಿಶ್ವಾಸದಿಂದ ಜೀವನ ಸಾಗಿಸುವ ಶಕ್ತಿಯನ್ನು ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಯು ಹಾರ್ದಿಕವಾಗಿ ಶುಭ ಹಾರೈಸುತ್ತದೆ.
“ಭಂಡಾರಿವಾರ್ತೆ.”