January 18, 2025
PicsArt_09-07-01.58.19
ಶ್ರೀ ಮಾಧವ ರಂಗ ಭಂಡಾರಿ

         ಬೆಳ್ಕಾಳೆ ರಂಗ ಭಂಡಾರಿ ಮತ್ತು ನರ್ಸಿ ಭಂಡಾರಿ ದಂಪತಿಗಳ ಪುತ್ರರಾದ ಶ್ರೀ ಮಾಧವ ರಂಗ ಭಂಡಾರಿಯವರು(ಎಂ.ಆರ್.ಭಂಡಾರಿ) ಉಡುಪಿಯ ಕೊಡವೂರು, ಗರಡಿ ಮಜಲಿನಲ್ಲಿ ಜನಿಸಿದರು. ತಮ್ಮ ಸ್ವಸ್ಥಳದಲ್ಲಿ ಪ್ರೌಡ ಶಿಕ್ಷಣ ವ್ಯಾಸಂಗವನ್ನು ಮಾಡುತ್ತಿರುವಾಗಲೇ ಇವರು ಉದ್ಯೋಗವನ್ನರಸಿ ಮುಂಬ್ಯೆಗೆ ಹೋಗಿ ಉದ್ಯೋಗದೊಂದಿಗೆ ತಮ್ಮ ಹೆಚ್ಚಿನ ವಿದ್ಯಾಭ್ಯಾಸ ಮುಗಿಸಿದರು. ಓದಿನಲ್ಲಿ ಮುಂದಿದ್ದ ಇವರು ವಿದ್ಯೆಯಲ್ಲಿ  ಬಹಳ ಆಸಕ್ತಿ ಹೊಂದಿದ್ದರು. ಸಿದ್ಧ ಉಡುಪುಗಳ ಖಾಸಗಿ ಸಂಸ್ಥೆಯೊಂದರಲ್ಲಿ ವಿದ್ಯಾರ್ಹತೆಗೆ ತಕ್ಕಂತೆ ಜವಾಬ್ದಾರಿಯುತ ಸ್ಥಾನಗಳಲ್ಲಿ ಕೆಲಸ ನಿರ್ವಹಿಸಿ ಉತ್ತಮ ನೌಕರನೆಂದು ಹೆಸರು ಪಡೆದಿದ್ದರು. ಸಂಘಟನಾ ನಿಪುಣರಾಗಿದ್ದ ಇವರು ಮುಂಬ್ಯೆ ಭಂಡಾರಿ ಸೇವಾ ಸಮಿತಿಯಲ್ಲಿ ಅಧ್ಯಕ್ಷರಾಗಿ  ಸುಮಾರು 10 ವರ್ಷಗಳ ಕಾಲಸೇವೆ ಸಲ್ಲಿಸಿ, ನಮ್ಮ ಸಮಾಜದ ಏಳಿಗೆಗಾಗಿ ಶ್ರಮಿಸಿರುತ್ತಾರೆ.

      ಜನಸೇವಾ ಮನೋಭಾವ ಹೊಂದಿದ್ದ ಇವರು ಮುಂಬ್ಯೆಯಲ್ಲಿ ನಮ್ಮ ಸಮಾಜದ ಸಮಿತಿಯಷ್ಟೇ ಅಲ್ಲದೇ…. ರಾಜಕೀಯ ಕ್ಷೇತ್ರ,  ಸ್ವ ಸಹಾಯ ಸಂಘಗಳು ಹಾಗೂ ಸಾರ್ವಜನಿಕ ಸೇವಾ ವಲಯಗಳಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಕಾರ್ಯದರ್ಶಿ ಎಂಬಂತಹ ಉನ್ನತ ಸ್ಥಾನಗಳನ್ನು  ಅಲಂಕರಿಸುತ್ತಾ, ತಮ್ಮ ಸೇವೆ, ಸಲಹೆಗಳನ್ನು ನೀಡುತ್ತಾ ಜನಮನ್ನಣೆಗಳನ್ನು ಗಳಿಸಿರುತ್ತಾರೆ. ಮುಂಬ್ಯೆನಲ್ಲಿ ವಾಸ್ತವ್ಯ ಹೂಡಿದ್ದರೂ ಸಹ 1990 ನೇ ಇಸವಿಯಲ್ಲಿ ಪ್ರಾರಂಭವಾದ ಕಚ್ಚೂರು ಶ್ರೀ  ನಾಗೇಶ್ವರ ದೇವಸ್ಥಾನದ  ಸ್ಥಾಪಕ  ಟ್ರಸ್ಟ್  ತಂಡದಲ್ಲಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದುದನ್ನು ನೋಡಿದರೇ ಅವರ  ಕಾರ್ಯ ವ್ಯೆಶಾಲ್ಯತೆಯು ನಮಗೆ ತಿಳಿಯುತ್ತದೆ.

      ಪ್ರಸ್ತುತ,  ತಮ್ಮ ಇಳಿ ವಯಸ್ಸಿನಲ್ಲೂ ಸಹ ಮೂಡಬಿದ್ರಿ ವಲಯ ಭಂಡಾರಿ ಸೇವಾ ಸಂಘದಲ್ಲಿ ಪ್ರತ್ಯಕ್ಷ/ಪರೋಕ್ಷವಾಗಿ ಸೇವೆ ಸಲ್ಲಿಸುತ್ತಾ ಇರುತ್ತಾರೆ. ಎರಡು ಗಂಡು, ಒಂದು ಹೆಣ್ಣು ಮಕ್ಕಳನ್ನು ಹೊಂದಿದ ಇವರು ಪತ್ನಿ ಶಾರದ ಭಂಡಾರಿಯವರೊಂದಿಗೆ ಮೂಡಬಿದ್ರಿಯಲ್ಲಿ ನೆಲೆಸಿರುತ್ತಾರೆ.
      ಇವರ ವಿದ್ಯಾಸಕ್ತಿ, ಮೃದುಸ್ವಭಾವ, ನಿಸ್ವಾರ್ಥ ಸೇವಾ ಮನೋಭಾವ, ಸಂಘಟನಾ ಕಾರ್ಯವ್ಯೆಖರಿಗಳು ಇಂದಿನ ಯುವಪೀಳಿಗೆಗೆ ದಾರಿದೀಪವಾಗಿರಲಿ ಎಂದು ಭಂಡಾರಿ ವಾರ್ತೆ ತಂಡ ಆಶಿಸುತ್ತದೆ.
: ಭಂಡಾರಿ ವಾರ್ತಾ ತಂಡ

2 thoughts on “ಭಂಡಾರಿ ಸ್ವಯಂ ಸೇವಕ-2

  1. Respected Mr. Madhava Ranga Bhandary Sir,

    I heard of you earlier for your community service and learnt a bit more now.
    I admire your simplicity and sincerity, in serving our SAMAJA.

    You are sure a lot of advice, suggestions and blessings to generations next.
    Wish to call on you at the earliest possible.

    Thank you and very kind of you Sir,
    SAGARA MADHAVA BHANDARI.

Leave a Reply

Your email address will not be published. Required fields are marked *