ಭಂಡಾರಿ ಸಮಾಜ ಸಂಘ (ರಿ) ಬೆಂಗಳೂರು ವಲಯದ ವಾರ್ಷಿಕ ಮಹಾಸಭೆ ಮತ್ತು ಕೌಟುಂಬಿಕ ಸ್ನೇಹ ಕೂಟ
ಇದೇ ಬರುವ ಡಿಸೆಂಬರ್ 25, 2018 ರ ಮಂಗಳವಾರ ಬೆಳಿಗ್ಗೆ ಗಂಟೆ 8 ರಿಂದ ಸಂಜೆ ಗಂಟೆ 6 ರ ವರೆಗೆ ಬೆಂಗಳೂರಿನ ಮೆಜೆಸ್ಟಿಕ್ ಬಳಿ ಇರುವ ಗಾಂಧಿನಗರದ ಮಹಾರಾಷ್ಟ್ರ ಮಂಡಳಿಯಲ್ಲಿ ಜರಗಲಿದೆ .
ಬೆಳಿಗ್ಗೆ ಗಂಟೆ 8 ಕ್ಕೆ ಸದಸ್ಯರ ನೋಂದಾವಣೆ ಹಾಗೂ ಉಪಹಾರ
ಗಂಟೆ 9 ರಿಂದ 10 ರ ವರೆಗೆ ನಡೆಯಲಿರುವ ವಾರ್ಷಿಕ ಮಹಾಸಭೆಯಲ್ಲಿ ಕಳೆದ ಒಂದು ವರ್ಷದ ವಾರ್ಷಿಕ ವರದಿ , ಲೆಕ್ಕ ಪತ್ರ ಮಂಡನೆ ಹಾಗೂ ಅನುಮೋದನೆ ಅದರ ಜೊತೆಯಲ್ಲಿ ಮುಂದಿನ ಎರಡು ವರ್ಷದ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆ.
ಗಂಟೆ 10 ರಿಂದ 11.30 ರ ವರೆಗೆ ಒಳಾಂಗಣ ಕ್ರೀಡಾಕೂಟ .
ಗಂಟೆ 11 .30 ರಿಂದ 1.00 ರ ವರೆಗೆ ಶ್ರೀ ಉಮೇಶ್.ಎ ರವರ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಭಂಡಾರಿ ಸಮಾಜ ಸಂಘ (ರಿ) ಬೆಂಗಳೂರು ವಲಯದ ಮಾಜಿ ಅಧ್ಯಕ್ಷರುಗಳಾದ ಶ್ರೀ ವೈ ಎಸ್ ಭಂಡಾರಿ , ಶ್ರೀ ಬಿ ಎಸ್ ಭಂಡಾರಿ ಹಾಗೂ ಶ್ರೀ ಬಿ ಕೆ ಭಂಡಾರಿ ಯವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ .
ಸಭಾ ಕಾರ್ಯಕ್ರಮದಲ್ಲಿ ಸಮಾಜದ ಪ್ರತಿಭಾವಂತರಿಗೆ ಸನ್ಮಾನ ಮತ್ತು ಕಳೆದ ಶೈಕ್ಷಣಿಕ ಸಾಲಿನಲ್ಲಿ ಶೇಕಡಾ 90 ಮತ್ತು ಅಧಿಕ ಅಂಕ ಪಡೆದು ತೇರ್ಗಡೆ ಹೊಂದಿರುವ ಎಸ್. ಎಸ್. ಎಲ್. ಸಿ ಮತ್ತು ಪಿ ಯು ಸಿ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ವಿದ್ಯಾರ್ಥಿ ವೇತನ ವಿತರಣೆ .
ಈ ವರ್ಷದಿಂದ ವಿದ್ಯಾರ್ಥಿ ವೇತನಕ್ಕೆ ಬಂದಿರುವ ಅರ್ಜಿಗಳಲ್ಲಿ ಸೂಕ್ತ ಪರಿಶೀಲನೆ ಮೂಲಕ ಮಂಜೂರುಗೊಂಡ ಅರ್ಜಿಗಳಲ್ಲಿ ಎಸ್. ಎಸ್. ಎಲ್. ಸಿ ಮತ್ತು ಪಿ ಯು ಸಿ ಯಲ್ಲಿ ಅತೀ ಹೆಚ್ಚು ಅಂಕ ಪಡೆದಿರುವ ತಲಾ ಒಬ್ಬ ವಿದ್ಯಾರ್ಥಿ /ವಿದ್ಯಾರ್ಥಿನಿಗೆ ಬೆಂಗಳೂರು ವಲಯದ “ಮಾಜಿ ಅಧ್ಯಕ್ಷರಾದ ಶ್ರೀ ಬಿ ಕೆ ಭಂಡಾರಿಯವರು ತಮ್ಮ ತಂದೆ ತಾಯಿಗಳಾದ ದಿವಂಗತ ಕಾಡಬೆಟ್ಟು ಸೋಮಯ್ಯ ಭಂಡಾರಿ ಮತ್ತು ದಿವಂಗತ ಸೀತಾ ಸೋಮಯ್ಯ ಭಂಡಾರಿಗಳ ಸ್ಮರಣಾರ್ಥ ವಿಶೇಷ ಗೌರವಧನ ವಿತರಿಸಲಿದ್ದಾರೆ” .ಈ ಕಾರ್ಯಕ್ರಮವು ಇನ್ನು ಮುಂದಕ್ಕೆ ಪ್ರತೀ ವರ್ಷವೂ ಮುಂದುವರಿಯಲಿದೆ .
ಗಂಟೆ 1 .00 ರಿಂದ 2.00 ರ ವರೆಗೆ ಭೋಜನ ಪ್ರಾಯೋಜಕರು : ಸಂಘದ ಅಧ್ಯಕ್ಷರಾದ ಉಮೇಶ್ (ಅತ್ತೆ ಮತ್ತು ಮಾವ ದಿವಂಗತ ಗೋಪಾಲ್ ಭಂಡಾರಿ ಬೈಕಾಡಿ ಮತ್ತು ದಿವಂಗತ ಕುಸುಮ ಗೋಪಾಲ್ ಭಂಡಾರಿಯವರ ಸ್ಮರಣಾರ್ಥ)
ಗಂಟೆ 2 .00 ರಿಂದ 6.00 ರ ವರೆಗೆ ಭಂಡಾರಿ ಬಂಧುಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಝೀ ಕನ್ನಡದ ಸರಿಗಮಪ ಲಿಟ್ಲ್ ಚಾಂಪ್ಸ್ ಖ್ಯಾತಿಯ ಮಕ್ಕಳಿಂದ ಸಂಗೀತ ರಸಮಂಜರಿ ಹಮ್ಮಿಕೊಳ್ಳಲಾಗಿದೆ.
ಸಭಾ ಕಾರ್ಯಕ್ರಮದಲ್ಲಿ ಸನ್ಮಾನಿಸಲ್ಪಪಡುವವರು ಶ್ರೀಮತಿ ಗೀತಾ ಸುರತ್ಕಲ್ ಖ್ಯಾತ ರಂಗ ಭೂಮಿ ಕಲಾವಿದೆ ಹಾಗೂ ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಉದ್ಯೋಗಿ ಮತ್ತು ಡಾ (ಮೇಜರ್)ರೋಹನ್ ಪಿ ಜೆ ಭಾರತೀಯ ಭೂ ಸೇನೆ (ಎಂ ಡಿ ರೇಡಿಯೋ ಡೈಯೋಗ್ನಾಸಿಸ್ ) ಹಾಗೂ ಹಿರಿಯ ಕುಲಕಸುಬು ಭಾಂದವರಾದ ಶ್ರೀ ಕುಶಲ್ ಭಂಡಾರಿ ಮಂದಾರ್ತಿ .
ವಿಶೇಷ ಉಡುಗೆ ತೊಡುಗೆಯೊಂದಿಗೆ ಕಾರ್ಯಕ್ರಮಕ್ಕೆ ಆಗಮಿಸುವ ಬಂಧುಗಳಿಗೆ ಆಕರ್ಷಕ ಬಹುಮಾನ ನೀಡಲಾಗುವುದು .
ವಿಶೇಷ ಸೂಚನೆ ಕಾರ್ಯಕ್ರಮಕ್ಕೆ ಬರುವ ಸಮಾಜದ ಬಂಧುಗಳು ಆಹ್ವಾನಪತ್ರಿಕೆಯನ್ನು ಜೊತೆಯಲ್ಲಿ ತೆಗೆದುಕೊಂಡು ಬರಬೇಕು. ಕಾರ್ಯಕ್ರಮದ ಕೊನೆಯಲ್ಲಿ ಲಕ್ಕಿ ಡಿಪ್ ಮೂಲಕ ಆಯ್ಕೆಯಾಗುವ ಬಂಧುಗಳಿಗೆ ವಿಶೇಷ ಬಹುಮಾನವಿರುತ್ತದೆ.
ಸಮಾಜದ ಎಲ್ಲಾ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಭಂಡಾರಿ ಸಮಾಜ ಸಂಘ (ರಿ) ಬೆಂಗಳೂರು ವಲಯದ ಅಧ್ಯಕ್ಷರು ಶ್ರೀ ಉಮೇಶ್.ಎ ಮತ್ತು ಕಾರ್ಯದರ್ಶಿ ಶ್ರೀ ಪ್ರಸಾದ್ ಮುನಿಯಾಲ್ ಪ್ರಕಟಣೆ ಮೂಲಕ ವಿನಂತಿಸಿಕೊಂಡಿದ್ದಾರೆ.
–