ಭಂಡಾರಿ ವಾರ್ತೆ ಹುಟ್ಟಿದ ಹಬ್ಬಕ್ಕೆ ಶುಭಾಶಯಗಳು
ಆಗಷ್ಟ್ 26 ರಂದು ಜನ್ಮತಾಳಿದ ಭಂಡಾರಿ ವಾರ್ತೆ ಈಗ 5 ವರ್ಷ ಕ್ಕೆ ಕಾಲಿಟ್ಟಿದೆ. ಈ ಶುಭ
ಸಂದರ್ಭ ದಲ್ಲಿ ನಾನು ಶುಭಾಶಯ ಕೋರುತ್ತಿದ್ದೇನೆ .
ಪತ್ರಿಕಾ ರಂಗದಲ್ಲಿ ತನ್ನದೇ ಆದ ಛಾಪನ್ನು ಮೂಡಿಸುತ್ತಿರುವ ಭಂಡಾರಿ ವಾರ್ತೆಯ ಗೆಳೆಯರ ವರ್ಗಕ್ಕೂ ನಾನು ಅಭಿನಂದನೆ ಸಲ್ಲಿಸುತ್ತೇನೆ .
ನಾನು ಕಂಡತೆ ಉತ್ತಮ ಬರಹಗಾರರು ಈ ಪತ್ರಿಕೆಯಲ್ಲಿ ಇರುವುದು ನನಗೆ ಸಂತಸ ತಂದಿದೆ .
ಆದರೆ ಜನರಿಗೆ ರಾಜಕೀಯ ದ ಜ್ಞಾನ ಹಾಗು ಧರ್ಮದ ಮಾರ್ಗ ನಾಗರೀಕತೆ ಬೆಳೆಸುವಲ್ಲಿ ನಿಮ್ಮಪತ್ರಿಕೆ ಸಹಕಾರಿ ಯಾಗಲಿ ಎಂಬುವುದು ನನ್ನ ಹೆಬ್ಬಯಕೆ.
ವಂದನೆಗಳು:
ಮಹೇಂದ್ರ ಕುಮಾರ್ ಫಲ್ಗುಣಿ
ರಾಜ್ಯಾದ್ಯಕ್ಷರು:
ಯುವ ಜಾಗೃತಿ ಮತದಾರರ ವೇದಿಕೆ
ಮಾಲಿಕರು:
ಶ್ರೀ ಗಜಾನನ ಎಂಟರ್ಪ್ರೈಸಸ್
(ಫಲ್ಗುಣಿ ಜಾಬ್ಸ್) ಬೆಂಗಳೂರು.
ಭಂಡಾರಿ ವಾರ್ತೆ ತನ್ನ ನಾಲ್ಕು ವರ್ಷಗಳ ಯಶಸ್ವಿ ಪಯಣ ಮುಗಿಸಿ ಇದೀಗ ಐದನೇ ವರ್ಷಕ್ಕೆ ಕಾಲಿಟ್ಟ ಈ ಶುಭ ಸಂಧರ್ಭದಲ್ಲಿ ಭಂಡಾರಿ ವಾರ್ತೆ ಯನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ಇದರ ಹಿಂದಿನ ಎಲ್ಲಾ ಕ್ರಿಯಾಶೀಲರಿಗೂ ಅಭಿನಂದನೆಗಳು .
ಈ ತೆರನಾದ ಒಂದು ವಾರ್ತೆಯ ಕನಸು ಕಂಡವರು ಶ್ರೀ ಪ್ರಕಾಶ್ ಕಟ್ಲ ಅವರು. ಸಾಮಾಜಿಕ ಬದ್ದತೆಯುಳ್ಳ ಇವರಲ್ಲಿ ಹಲವಾರು ಸಮಾಜ ಮುಖಿ ಕನಸುಗಳಿವೆ.ಅದೆಲ್ಲಾ ನನಸಾದರೆ ಸಮಾಜದ ಸರ್ವತೋಮುಖ ಪ್ರಗತಿ ಸಾಧ್ಯ.ಎಲ್ಲದಕ್ಕೂ ಕಾಲ ಕೂಡಿ ಬರಬೇಕು.
ಭಂಡಾರಿ ಸಮಾಜವನ್ನು ಒಂದಾಗಿ ಬೆಸೆಯಲು,ಸಮಾಜದ ಪ್ರತಿಭಾವಂತ ಜನರ ಗುರುತಿಸಲು,ಎಳೆಯ ಪ್ರತಿಭೆಗಳ ಬೆಳೆಸಲು,ಜನರ ನೋವಿಗೆ ಸ್ಪಂದಿಸಲು,ವೈಚಾರಿಕತೆ ಬೆಳೆಸಲು,ಜನನ ಮರಣ ಹುಟ್ಟು ಹಬ್ಬ. ಪ್ರಶಸ್ತಿ ಪುರಸ್ಕಾರ ದೇವರ ದೇವಸ್ಥಾನ ಸುದ್ದಿ ಗಳು, ಕತೆ ಕವನ ಹೀಗೆ ನಾನಾ ಸುದ್ದಿ ಗಳ ಸಮಾಜ ಕ್ಕೆ ಈ ವಾರ್ತೆ ತಲುಪಿಸಿದೆ.ಪ್ರತಿಫಲದ ಅಪೇಕ್ಷೆ ಇಲ್ಲದೆ ಇದು ದುಡಿದಿದೆ.
ಇದು ಇನ್ನಷ್ಟು ಬೆಳೆಯಲಿ ಎಂಬ ಹಾರೈಕೆ ಗಳೊಂದಿಗೆ
ಸುಧಾಕರ ಬನ್ನಂಜೆ,ಬೆಂಗಳೂರು
ಸುರಿಯುವ ಮಳೆಯು ಮನಕುಲವನ್ನು ಮತ್ತು ಭೂಮಿಯನ್ನು ತಂಪಾಗಿಸುತ್ತದೆ
ಬೀಸುವ ಗಾಳಿಯು ದೇಹವನ್ನು ಮನಸ್ಸನ್ನು ತಂಪಾಗಿಸುತ್ತದೆ
ಭಂಡಾರಿ ಸಮಾಜದ ಭಂಡಾರಿ ವಾರ್ತೆಯು ಬಂಧುಗಳ ಮನೆಯನ್ನು ಬೆಳಗಿಸಿ ಜ್ಞಾನವನ್ನು ಪಸರಿಸಿದೆ
ಭಂಡಾರಿ ವಾರ್ತೆಯು ಐದನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಶುಭ ಸಂದರ್ಭದಲ್ಲಿ ಹಾರ್ದಿಕ ಹಾರ್ದಿಕ ಅಭಿನಂದನೆಗಳು
ಅಭಿಮಾನಿ.
ಭಂಡಾರಿ ವಾರ್ತೆ ಐದನೇಯ ವರ್ಷಕ್ಕೆ ತನ್ನ ನಿಸ್ವಾರ್ಥ ಸೇವೆಯನ್ನು ಸಮಸ್ತ ಭಂಡಾರಿ ಸಮುದಾಯದ ಸಮಗ್ರ ಅಭಿರುದ್ಧಿಯಾ ನಿಟ್ಟಿನಲ್ಲಿ ನೀಡುತ್ತಿರುದು ಅತೀ ಸಂತೋಷದ ವಿಚಾರ. ಒಗ್ಗಟ್ಟಿನಲ್ಲಿ ಬಲವಿದೆ ಮುನ್ನಡೆಯೋಣ.
—ಸತೀಶ್ ಪುತ್ತೂರು
ಭಂಡಾರಿ ವಾರ್ತೆ ಐದನೇಯ ವರ್ಷಕ್ಕೆ ತನ್ನ ನಿಸ್ವಾರ್ಥ ಸೇವೆಯನ್ನು ಸಮಸ್ತ ಭಂಡಾರಿ ಸಮುದಾಯದ ಸಮಗ್ರ ಅಭಿರುದ್ಧಿಯಾ ನಿಟ್ಟಿನಲ್ಲಿ ನೀಡುತ್ತಿರುದು ಅತೀ ಸಂತೋಷದ ವಿಚಾರ.
ಒಗ್ಗಟ್ಟಿನಲ್ಲಿ
ಬಲವಿದೆ
ಮುನ್ನಡೆಯೋಣ.