November 22, 2024
chippinolagina+bhandary+muttu1
      ಭಂಡಾರಿ ಸಮುದಾಯ ತನ್ನದೇ ಇತಿಹಾಸವನ್ನು ದಾಖಲಿಸಿದೆ ಮಾತ್ರವಲ್ಲ ತನ್ನ ಶ್ರೀಮಂತಿಕೆಯನ್ನು ಸಾರುತ್ತಲೇ ಬಂದಿದೆ.. ಆದರೆ ಸಂಖ್ಯಾದೃಷ್ಠಿಯತ್ತ ಕಣ್ಣು ಹಾಯಿಸಿದರೆ.. ಹೇಳಿಕೊಳ್ಳುವಂತ ಗಟ್ಟಿ ಸಮಾಜ ನಮ್ಮದಲ್ಲ.. ಅದೇ ಕಾರಣಕ್ಕೇನೋ.. ಸಮುದಾಯ ಪ್ರಚಾರದ ಹಿನ್ನಲೆಯಲ್ಲಿ ತುಸು ಹಿಂದೆ ಬಿದ್ದಿದೆ ಎಂಬುದು ಕಟು ಸತ್ಯ. ಇತಿಹಾಸದ ಶ್ರೀಮಂತಿಕೆ ಜೊತೆಗಿದೆ ಎಂದ ಮಾತ್ರಕ್ಕೆ ಇಡೀ ಭಂಡಾರಿ ಸಮುದಾಯ ಶ್ರೀಮಂತಿಕೆಯ ಸುಪ್ಪತ್ತಿಗೆಯಲ್ಲಿದೆ ಎಂದು ಭಾವಿಸಿದರೆ ನಮ್ಮಂತ ಮೂರ್ಖರು ಇನ್ನೆಲ್ಲೂ ಸಿಗಲಾರರು.. ಭಂಡಾರಿ ಸಮುದಾಯದಲ್ಲಿ ಸ್ಥಿತಿವಂತರು,  ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಿದ ಜನ ಮತ್ತು ಕುಟುಂಬಗಳು ಇವೆ.. ಆದರೆ ಇಡೀ ಜನಾಂಗದ ಬಗ್ಗೆ ಅವಲೋಕಿಸಿದರೆ .. ಆರ್ಥಿಕವಾಗಿ.. ಶೈಕ್ಷಣಿಕವಾಗಿ ಇನ್ನೂ ಸಾಕಷ್ಟು ಹಿಂದುಳಿದಿರುವ ಬಗ್ಗೆ ಸ್ಪಷ್ಟವಾಗಿ ಗೋಚರವಾಗುತ್ತದೆ.. ಆದರೆ ಇಷ್ಟೆಲ್ಲಾ ಹಿನ್ನಡೆಯ ನಡುವೆಯೂ

ಗಮನಸೆಳೆಯುವ ಅಂಶವೆಂದರೆ ಸಮುದಾಯದಲ್ಲಿನ ಪ್ರತಿಭಾ ಶ್ರೀಮಂತಿಕೆ.. ಕಲೆ, ಸಾಹಿತ್ಯ, ಸಾಂಸ್ಕೃತಿಕ ಲೋಕ ಮಾತ್ರವಲ್ಲದೆ, ಶಿಕ್ಷಣ, ಕ್ರೀಡೆ, ವೈಜ್ಞಾನಿಕವಾಗಿ .. ಹಳ್ಳಿಯಿಂದ ಹಿಡಿದು ಜಾಗತಿಕ ಮಟ್ಟದವರೆಗೂ ಸದ್ದಿಲ್ಲದೆ ಸಾಧನೆ ಮಾಡಿದವರಿಗೇನೂ ಕೊರತೆ ಇಲ್ಲ.., ಸಾಮಾಜಿಕ, ರಾಜಕೀಯ, ಧಾರ್ಮಿಕ, ಸಿನಿಮಾ ಕ್ಷೇತ್ರವೂ ಇದಕ್ಕೆ ಹೊರತಾಗಿಲ್ಲ.. ಇಲ್ಲಿಯವರೆಗೆ ಯಾವುದೇ ಪ್ರಚಾರ ಪಡೆಯದ.. ಅದನ್ನು ಬಯಸದ ಅನೇಕ ಸಾಧಕರು ಭಂಡಾರಿ ಸಮುದಾಯದ ಕಿರೀಟಪ್ರಾಯವಾಗಿದ್ದಾರೆ… ಮನೆಯಲ್ಲಿ ಗಂಜಿಗೆ ಗತಿ ಇಲ್ಲದಿದ್ದರೂ.. ತಮ್ಮಲ್ಲಿನ ಪ್ರತಿಭೆಯನ್ನೆ ಓರೆಗಲ್ಲಿಗೆ ಹಚ್ಚಿ ಸಾಧನಾ ಶಿಖರವೇರಿದ ಸಾಧಕರಿಗೂ ಕೊರತೆ ಇಲ್ಲ.. ಆದರಲ್ಲಿ ಪ್ರಚಾರ ಬಯಸದೆ ದೂರ ಉಳಿದವರು ಹಲವರಾದರೆ.. ಇನ್ನು ಪ್ರಚಾರವೇ ಸಿಗದೆ ತೆರೆಮರೆಯಲ್ಲಿ ಉಳಿದವರು ಅನೇಕರು. ಇನ್ನು ನಮ್ಮ ವತ್ತಿ ಬದುಕಿನ ಕೀಳರಿಮೆಯ ನಡುವೆಯೂ ಅದನ್ನೆ ಬಂಡವಾಳ ಮಾಡಿಕೊಂಡು .. ವೃತ್ತಿಕೌಶಲ್ಯದ ಮೂಲಕ ವಿಶ್ವದ ಗಮನಸೆಳೆದವರೂ ನಮ್ಮಲ್ಲಿದ್ದಾರೆ ಎನ್ನಲು ಹೆಮ್ಮೆಯಾಗುತ್ತದೆ.. ಕೀಳರಿಮೆಯನ್ನು ತೊಡೆದು ಹಾಕಿ.. ಅದೇ ದಾರಿಯಲ್ಲೇ ಸಾಗುತ್ತಿರುವ ಸಂಖ್ಯೆ ಕೂಡ ಹೆಚ್ಚುತ್ತಿದ್ದು.. ಭಂಡಾರಿಗಳ ಪ್ರಗತಿಯ ಮುನ್ನೋಟದ ಚಿತ್ರಣ ಕಣ್ಣಮುಂದೆ ಹಾಯುವಂತೆ ಮಾಡಿದೆ..  ಇದು ಸ್ವಾಗತಾರ್ಹ ಮಾತ್ರವಲ್ಲ.. ಭಂಡಾರಿ ಸಮುದಾಯದ  ಏಳಿಗೆ ಮತ್ತು ಸಾಂಸ್ಕೃತಿಕ ಬೆಳವಣಿಗೆ ದೃಷ್ಠಿಯಿಂದ ಗಮನಾರ್ಹ ಕೂಡ.

ಮೇಲಿನ ಮುನ್ನುಡಿಯನ್ನು ದಾಖಲಿಸಲು ಕಾರಣ ಇಷ್ಟೇ.. ಅಕ್ಷರರೂಪದ ಮೂಲಕ ಭಂಡಾರಿ ಸಾಧಕರ ಪರಿಚಯ ಮತ್ತು ಪ್ರತಿಭೆಗಳ ಅನಾವರಣ ಮಾಡುವುದು ಭಂಡಾರಿವಾರ್ತೆಯ ಆಶಯ.. ತಮ್ಮ ಸಾಧನೆ ಮೂಲಕ ವಿವಿಧ ಕ್ಷೇತ್ರದಲ್ಲಿ ಗುರುತಿಸಿಕೊಂಡ ನಮ್ಮವರನ್ನು  ಮತ್ತು ಚಿಪ್ಪಿನೊಳಗೆ ಮುಚ್ಚಿ ಕುಳಿತ ಪ್ರತಿಭಾ ಮುತ್ತುಗಳನ್ನು ಹೊರತೆಗೆದು ಹೊರಪ್ರಪಂಚಕ್ಕೆ ಅನಾವರಣಗೊಳಿಸುವ ವಿಶೇಷ ಲೇಖನ ಮಾಲೆ “ಚಿಪ್ಪಿನೊಳಗಿಸ ಭಂಡಾರಿ ಮುತ್ತು” ನಿರಂತರವಾಗಿ ಭಂಡಾರಿವಾರ್ತೆಯಲ್ಲಿ ಮೂಡಿಬರಲಿದೆ.. ಅಂತಹ ಸಾಧಕರು ಮತ್ತು ಪ್ರತಿಭಾವಂತರ ಬಗ್ಗೆ ಭಂಡಾರಿವಾರ್ತೆಗೆ ಮಾಹಿತಿ ನೀಡುವುದರ ಮೂಲಕ ಭಂಡಾರಿ ಬಂಧುಗಳು ಕೈಜೋಡಿಸುವ ಅವಕಾಶವಿದೆ.. .. ಅದರ ಅಗತ್ಯ ಕೂಡ ಇದೆ..  ನಮ್ಮವರಿಗಾಗಿ ನಮ್ಮ ಸ್ಪಂದನೆ.. ಇದು ಭಂಡಾರಿವಾರ್ತೆಯ ಕಾಳಜಿ..
ಹೊಸತನದ ಬರವಣಿಗೆಯಲ್ಲಿ ಮೂಡಿ ಬರುವ ಲೇಖನ ಮಾಲೆ “ಚಿಪ್ಪಿನೊಳಗಿನ ಭಂಡಾರಿ ಮುತ್ತು”  ಶೀಘ್ರದಲ್ಲಿ ನಿಮ್ಮ ಮುಂದೆ…
 
ಸಂಪಾದಕೀಯ ಬಳಗ
ಭಂಡಾರಿವಾರ್ತೆ

0 thoughts on “ಭಂಡಾರಿವಾರ್ತೆಯ ಬಹುನಿರೀಕ್ಷಿತ ಲೇಖನಮಾಲೆ “ಚಿಪ್ಪಿನೊಳಗಿನ ಭಂಡಾರಿ ಮುತ್ತು” ಗಾಗಿ ಹೀಗೊಂದು ಅರ್ಥಪೂರ್ಣ ಮುನ್ನುಡಿ

  1. ಭಂಡಾರಿ ಸಾಗರದಿಂದ ಹಲವಾರು ಮುತ್ತುಗಳನ್ನು ಹೆಕ್ಕಿ ತೆಗೆಯುವ
    ಸಾಮರ್ಥ್ಯವನ್ನು ಭಗವಂತನು ನಿಮಗೆಲ್ಲಾ ದಯಪಾಲಿಸಲಿ….

Leave a Reply

Your email address will not be published. Required fields are marked *