January 19, 2025
IMG-20180204-WA0088
ಭಂಡಾರಿವಾರ್ತೆಯ ಮುಖ್ಯ ಸಂಪಾದಕರಾದ ಶ್ರೀ ಸಂದೇಶ್ ಕುಮಾರ್ ಬಂಗಾಡಿಯವರು ಇಂದು ನಮಗೆಲ್ಲಾಶುಭ-ಸಂದೇಶನೀಡಿದ್ದಾರೆ.
ಬೆಳ್ತಂಗಡಿ ತಾಲೂಕು ಇಂದಬೆಟ್ಟು ಗ್ರಾಮದ ಶ್ರೀ ಅನಂತರಾಮ ಬಂಗಾಡಿ ಯವರ ಪುತ್ರ ವ, ಉಡುಪಿ ಚಿಟ್ಪಾಡಿ ರಾಘವ ಭಂಡಾರಿಯವರ ಅಳಿಯನಾದ ಚಿ || ಸಂದೇಶ್ ಕುಮಾರ್ ಬಂಗಾಡಿಯವರ ನಿಶ್ಚಿತಾರ್ಥ ಕಾರ್ಯಕ್ರಮ ಮೂಡಿಗೆರೆ ತಾಲೂಕು ಗೋಣಿಬೀಡು ಹೋಬಳಿಯ ಜಿ.ಲಕ್ಷ್ಮೀಪುರ ಮಾಧು ಭಂಡಾರಿಯವರ ಪುತ್ರಿ ವ ರಾಘವೇಂದ್ರ ಭಂಡಾರಿಯವರ ಸೊಸೆ ಚಿ|| ಸೌ|| ಶುಭ ರೊಂದಿಗೆ ಗುರುಹಿರಿಯರ ಸಮ್ಮುಖದಲ್ಲಿ ದಿನಾಂಕ 04- 02-2018 ರ ಭಾನುವಾರ ವಧುವಿನ ಮನೆಯಾದ ಜಿ.ಲಕ್ಷ್ಮೀಪುರದಲ್ಲಿ  ನೆರವೇರಿತು.
ಈ ಶುಭಸಂದರ್ಭದಲ್ಲಿ ಜೋಡಿಹಕ್ಕಿಗಳು ಶೀಘ್ರದಲ್ಲಿ ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಲಿ,ಅವರ ಕನಸುಗಳು ಆದಷ್ಟು ಬೇಗ ನೆರವೇರಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತುಭಂಡಾರಿವಾರ್ತೆಹೃತ್ಪೂರ್ವಕವಾಗಿ ಶುಭ ಹಾರೈಸುತ್ತದೆ.
                                                                                                                                                                                     
-ಭಂಡಾರಿವಾರ್ತೆ.

Leave a Reply

Your email address will not be published. Required fields are marked *