January 18, 2025
bhandaryvivaha
ಭಾರತೀಯರಿಗೆ ವಿವಾಹ ಎನ್ನುವುದು ಜೀವನದ  ಪ್ರಮುಖ ಚರ್ಯಗಳಲ್ಲಿ ಒಂದು. ಮದುವೆ ಸ್ವರ್ಗದಲ್ಲಿ ನಿಶ್ಚಯವಾಗುತ್ತದೆ ಎಂಬ ನಂಬಿಕೆ ಭಾರತೀಯರದ್ದು, ಆದರೆ ಸ್ವರ್ಗದಲ್ಲಿ ನಿಶ್ಚಯವಾಗುವ ಬಾಳಸಂಗಾತಿಯನ್ನು ಹುಡುಕುವುದು ಕಷ್ಟಕರ ಸಂಗತಿಯಾಗಿರುವುದು ಎಲ್ಲರ ಅನುಭವಕ್ಕೆ ಬಂದಿರಬಹುದು. ಇದಕ್ಕೊಂದು ಮಾಧ್ಯಮವಂತೂ ಬೇಕೆ ಬೇಕು. ಅತಿ ಕಡಿಮೆ ಜನಸಂಖ್ಯೆ ಹೊಂದಿರುವ ತುಳುನಾಡಿನ ಭಂಡಾರಿ ಜನಾಂಗದಲ್ಲಿ ಲಿಂಗಾನುಪಾತದಲ್ಲೇನೂ ವ್ಯತ್ಯಾಸವಿಲ್ಲ. ಆದರೂ ಮದುವೆ ಸಂಬಂಧ ಹುಡುಕಾಟ ಕಷ್ಟವೆನಿಸಿದೆ. ಹೆಣ್ಣು ಮತ್ತು ಗಂಡು ಎರಡು ಲಿಂಗ ಬೇಧ, ವರ್ಗ ಭೇದವಿಲ್ಲದೇ ಮದುವೆ ಸಂಬಂಧ ಬೆಸೆಯುವಲ್ಲಿ ಸಮಸ್ಯೆ  ಎದುರಿಸುತ್ತಿದ್ದಾರೆ.                                                                                                          
ಭಂಡಾರಿ ಸಮಾಜದಲ್ಲಿ ಹಿಂದೆ ದಲ್ಲಾಳಿ ಮತ್ತು ಸಂಬಂಧಿಗಳ ಮದುವೆ ಸಮಾರಂಭ ಬಿಟ್ಟರೆ ಬೇರೆ ಮದುವೆ ಸಂಬಂಧ ಬೆಳೆಸಲು ಮಾಧ್ಯಮವೇ ಇರಲಿಲ್ಲ. ನಂತರ ದ ದಿನಗಳಲ್ಲಿ ಜಾತಿ ಸಂಘಗಳ ಸ್ಥಾಪನೆಯಾಗಿ‌ ಕಚ್ಚೂರಿನಲ್ಲಿ ದೇವಸ್ಥಾನ ನಿರ್ಮಿಸಿದ ಕಾರಣ ವರ್ಷಕ್ಕೊಮ್ಮೆ ನಡೆಯುವ ಉತ್ಸವ ಕೂಡಾ ಮದುವೆ ಸಂಬಂಧ ಬೆಳೆಸುವ ಮಾಧ್ಯಮವಾಯಿತು. ಇಂದು ಜಾಗತೀಕರಣ ದ ಪ್ರಭಾವದಿಂದ ಭಂಡಾರಿ ಬಂಧುಗಳು ಜಗತ್ತಿನೆಲ್ಲೆಡೆ ಪಸರಿಸಿದ್ದು ಸಮಾಜದೊಂದಿಗೆ ಬೆಸೆಯಲು ವಿನೂತನ ಮಾಧ್ಯಮಕ್ಕಾಗಿ ಹಂಬಲಿಸುತ್ತಿದ್ದಾರೆ. ತಂತ್ರಜ್ಞಾನ ಬೆಳೆದಂತೆ ಮ್ಯಾಟ್ರಿಮೊನಿಯಲ್ ವೆಬ್ಸೈಟ್ಗಳು, ಸಾಮಾಜಿಕ ಜಾಲತಾಣಗಳು ಕೂಡಾ ಮಾಧ್ಯಮವಾಗಿ ಕೆಲಸ ಮಾಡುತ್ತಿದೆ. 
                                                                                                                           
ಶ್ರೀಯುತ ಪ್ರಕಾಶ್ ಭಂಡಾರಿ ಕಟ್ಲಾ ಇವರು  7ವರ್ಷಗಳ ಹಿಂದೆ ಮೊದಲಬಾರಿಗೆ www.bhandaryvivaha.com ವೆಬ್ಸೈಟ್ ತೆರೆದು ಬಹುದೊಡ್ಡ ಮಾಧ್ಯಮವನ್ನು ಭಂಡಾರಿ ಸಮಾಜದ ಮುಂದಿಟ್ಟಿದ್ದರು. ಉಚಿತ ಸೇವೆ ನೀಡುವುದರೊಂದಿಗೆ ನೂರಾರು ಜೋಡಿಗಳು ಸಪ್ತಪಧಿ ತುಳಿಯುವುದಕ್ಕೆ ಕಾರಣಿಕರ್ತರಾದರು. ಈ ವೆಬ್ಸೈಟ್ ಕಾರಣಾಂತರಗಳಿಂದ ಎರಡು ವರ್ಷ ಸ್ಥಗಿತಗೊಂಡಿತ್ತು. ಇಂದು ಗಣೇಶ ಚತುರ್ಥಿಯ ಶುಭದಿನದಂದು ಮತ್ತೊಮ್ಮೆ ಹೊಸತನದೊಂದಿಗೆ ಭಂಡಾರಿ ಸಮಾಜ ಭಾಂದವರಿಗಾಗಿ ಅರ್ಪಣೆಯಾಗುತ್ತಿದೆ. 
ಈ ಲಿಂಕ್ ಕ್ಲಿಕ್ ಮಾಡುವುದರ ಮೂಲಕ ಪ್ರತಿ ಸಮಾಜಭಾಂದವರ ಮೂಲಕ ಅನಾವರಣ ಮಾಡಲು ಉದ್ದೇಶಿಸಲಾಗಿದೆ. ತಾವು ಈ ವೆಬ್ಸೈಟ್ ಮೂಲಕ ನಿಮ್ಮ ವಿವರಗಳನ್ನು ತುಂಬಿ ಸೂಕ್ತ ಮದುವೆ ಸಂಬಂಧಕ್ಕಾಗಿ ಅರ್ಜಿ ಸಲ್ಲಿಸಿ. ನಿಮ್ಮ / ನಿಮ್ಮ ಸಂಬಂಧಿಗಳ ವಿವರಗಳುಳ್ಳ ಪ್ರೋಪೈಲ್ ರಚಿಸಲು ಅವಕಾಶ ಕಲ್ಪಿಸಲಾಗಿದೆ. ವೆಬ್ಸೈಟ್ ನಲ್ಲಿ ನೀಡಿರುವ ಸೂಚನೆಯಂತೆ ನಿಮ್ಮ ವಿವರಗಳನ್ನು ತುಂಬಿ ನೋಂದಾವಣಿ ಮಾಡಿಕೊಳ್ಳಿ . ಯಾವುದೇ ಅನುಮಾನ, ತಾಂತ್ರಿಕ ತೊಂದರೆ ಕಂಡುಬಂದಲ್ಲಿ ನಮ್ಮ ತಾಂತ್ರಿಕ ಮುಖ್ಯಸ್ಥರನ್ನು ಸಂಪರ್ಕಿಸಿ : 9591994646

                                                                   

How to use

  • ಮೊದಲಿಗೆ ನೋಂದಾವಣಿ ಮಾಡಿಕೊಂಡು ನಿಮ್ಮ ಖಾತೆ ರಚಿಸಿ
  • ನಿಮ್ಮ ಈಮೇಲ್ ಐಡಿಯನ್ನು ಪರಿಶೀಲಿಸಿ
  • ಖಾಲಿ ಬಿಟ್ಟ ಸ್ಥಾನವನ್ನು ತುಂಬಿ ಪ್ರೊಫೈಲ್ ರಚಿಸಿ ಮತ್ತು ಅನುಮೋದನೆ ಪಡೆದುಕೊಳ್ಳಿ
  • ನಿಮಗೆ ಸೂಕ್ತವಾದ ಪ್ರೊಫೈಲ್ ಹುಡುಕಿ ಅದರಲ್ಲಿ ನಮೂದಿಸಲಾಗಿರುವ ದೂರವಾಣಿ ಸಂಖ್ಯೆ ಮೂಲಕ ಸದಸ್ಯರನ್ನು ನೇರವಾಗಿ ಸಂಪರ್ಕಿಸಬಹುದು ಅಥವಾ ಸಂದೇಶವನ್ನು ಕಳುಹಿಸಬಹುದು
  • ಭಂಡಾರಿ ವಿವಾಹ ವೇದಿಕೆ ಆನ್ ಲೈನ್ ಸೇವೆಯನ್ನು ಮಾತ್ರ ಒದಗಿಸಲಿದ್ದು ಯಾವುದೇ ಕಚೇರಿಯನ್ನು ಹೊಂದಿಲ್ಲ.
  • ತಪ್ಪು ಮಾಹಿತಿ ನೀಡಿರುವ ಯಾವುದೇ ಪ್ರೊಫೈಲ್ ಕಂಡುಬಂದಲ್ಲಿ ನಮಗೆ ಮಾಹಿತಿ ನೀಡಿ
  • ಈ ತಾಣದ ಮೂಲಕ ಸೂಕ್ತವಾದ ಪ್ರೊಫೈಲ್ ಸಿಕ್ಕಿದಲ್ಲಿ ನಮಗೆ ತಿಳಿಸಿ
  • ನಿಮ್ಮ ಯಾವುದೇ ಸಲಹೆ, ಸೂಚನೆಗಳಿಗೆ ಸ್ವಾಗತ
  • ಒಂದು ಖಾತೆಯ ಅಡಿಯಲ್ಲಿ ಅನೇಕ ಪ್ರೊಫೈಲ್ ಗಳನ್ನು ರಚಿಸಲು ಅವಕಾಶವಿದೆ. (ಉದಾ: ಪೋಷಕರು ತಮ್ಮ ಮಕ್ಕಳ ಹೆಸರಲ್ಲಿ ಖಾತೆ ತೆರೆಯಬಹುದು)

  1. Register and create an account
  2. Verify your email ID
  3. Create a profile by filling all the fields and wait for approval
  4. Once approved, find a suitable profile and you can contact the member directly or send the message.
  5. Bhandary Vivaha provides only online service and does not have any office space.
  6. In case you find any profiles with incorrect data please notify us.
  7. Please inform us if you get your life partner from this portal.
  8. Any suggestions are always welcome.
  9. Create multiple profiles under one account. Ex: Parents want to create their children profiles.                                                                                                                                           *ಸದಸ್ಯತ್ವ ಶುಲ್ಕ ಉಚಿತ ( Promo offer) 
   *ಯಾವುದೇ ಕಚೇರಿ ಇರುವುದಿಲ್ಲ.
   *ಮಧ್ಯವರ್ತಿಗಳು ಇರುವುದಿಲ್ಲ.                                                                                         
ಹೆಚ್ಷಿನ ವಿವರಗಳಿಗೆ ವೆಬ್ಸೈಟ್ ನಲ್ಲಿ ನೀಡಿರುವ ಸಂಪರ್ಕ ವಿವರಗಳೊಂದಿಗೆ ಸಂಪರ್ಕಿಸಿ                                                                                                                         
“ಮದುವೆಗೆ ತಯಾರಾಗಿರುವ ಹುಡುಗ ಅಥವಾ ಹುಡುಗಿಯರು ನಿಮಗೆ ಅನುರೂಪವಾದ ಜೋಡಿಯನ್ನು ಭಂಡಾರಿ ವಿವಾಹ ವೆಬ್ಸೈಟ್ ನಲ್ಲಿ ನೀವು ಕಂಡುಕೊಳ್ಳಬಹುದು. ಅತೀ ಹೆಚ್ಚಿನ ಸಂಖ್ಯೆಯಲ್ಲಿ ಮದುವೆಯ ಹೊಸ್ತಿಲಲ್ಲಿರುವ ಹುಡುಗ,ಹುಡುಗಿಯರು ಮತ್ತು ಪೋಷಕರು ಈ ವೆಬ್ಸೈಟ್ ನ ಸದುಪಯೋಗವನ್ನು ಪಡೆದುಕೊಂಡರೆ ನನ್ನ ಶ್ರಮ ಸಾರ್ಥಕ.”

ಪ್ರಕಾಶ್ ಭಂಡಾರಿ ಕಟ್ಲಾ.
ಕಾರ್ಯ ನಿರ್ವಾಹಕರು.
9916013694(ಕರೆಗಳಿಗೆ ಮಾತ್ರ)
9845125214(ವಾಟ್ಸಪ್)

Leave a Reply

Your email address will not be published. Required fields are marked *