September 20, 2024

         ಲ್ಲಾ ಅಧ್ಯಾತ್ಮ ಸಾರವನ್ನು ಹೊತ್ತ ಗ್ರಂಥವೇ ಭಗವದ್ಗೀತೆ. ಇದರ ಆಳವಾದ ಅಧ್ಯಯನವನ್ನು ಮಾಡಿದರೆ ಭಾರತೀಯ ತತ್ವಶಾಸ್ತ್ರದ ಸಮಗ್ರ ದರ್ಶನ ನಮಗೆ ಆಗುತ್ತದೆ. ನಮ್ಮ ಹಿರಿಯರು ಭಗವದ್ಗೀತೆಗೆ ಅತ್ಯಂತ ಶ್ರೇಷ್ಠ ಗ್ರಂಥ ಎಂದು ಹೇಳಿರುತ್ತಾರೆ. ಕಾರಣ ಜನಸಾಮಾನ್ಯರನ್ನು ಕೂಡ ತಲುಪುವಂತಹ ಪವಿತ್ರ ಗ್ರಂಥ. ಇದಕ್ಕೆ ಸರಿಸಮಾನ ಆದಂತಹ ಗ್ರಂಥ ಇನ್ನೊಂದಿಲ್ಲ.

ಭಗವದ್ಗೀತೆಯಲ್ಲಿ ನಾವು ನೋಡಬೇಕಾದ ಮುಖ ಇತಿಹಾಸವಲ್ಲ ಬದಲಿಗೆ ಮನಃಶಾಸ್ತ್ರ ಮತ್ತು ಅಧ್ಯಾತ್ಮ. ನಮ್ಮ ಜೀವನದ ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯ ರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮ ದಾರಿ ತಪ್ಪಿಸುವ ಕೌರವರು ಇದ್ದಾರೆ, ಎಚ್ಚರಿಸುವ ಪಾಂಡವರು ಇದ್ದಾರೆ.

ನಮ್ಮ ನಿರಂತರ ಜೀವನದಲ್ಲಿ ಪಾಂಡವರಂತಹ ಗುಣಗಳನ್ನು ಸೋತು ಕೌರವರಂತಹ ದುರ್ಗುಣಗಳ ಗೆಲ್ಲುವಂತಹ ಸಂಭವವೇ ಹೆಚ್ಚು.

ಗೀತೆ ಒಂದು ಜಾತಿಗೆ ಅಥವಾ ಮತಕ್ಕೆ ಸಂಬಂಧ ಪಟ್ಟದ್ದಲ್ಲ. ಇದು ಮಾನವನ ಜೀವನ ಮೌಲ್ಯವನ್ನು ಎತ್ತಿಹಿಡಿಯುವ ಕೈಗನ್ನಡಿ. ಇಂತಹ ಕೃತಿಯ ಪಠಣವನ್ನು ನಾವು ರೂಢಿಮಾಡಿಕೊಳ್ಳೋಣ. ಧರ್ಮದ ನಡೆ ನಮ್ಮದು ಆಗಿರಲಿ.

ಭಗವದ್ಗೀತೆಯಲ್ಲಿ 18 ಅಧ್ಯಾಯಗಳಿವೆ. ಭಾರತೀಯ ತತ್ವಶಾಸ್ತ್ರದ ಅತ್ಯಂತ ಮಹತ್ವದ ಸಂಖ್ಯೆ 18. ಮಹಾಭಾರತದ ಯುದ್ಧ ನಡೆದದ್ದು 18 ದಿನ. ಯುದ್ಧದಲ್ಲಿ ಪಾಲ್ಗೊಂಡಿದ್ದು 18 ಅಕ್ಷೋಹಿನಿಸೈನ್ಯ.

18 ಅಧ್ಯಾಯಗಳ ಹೆಸರುಗಳು.

  1. ಅರ್ಜುನ ವಿಷಾದಯೋಗ
  2. ಸಾಂಖ್ಯಯೋಗ
  3. ಕರ್ಮಯೋಗ
  4. ಜ್ಞಾನಯೋಗ
  5. ಸಂನ್ಯಾಸಯೋಗ
  6. ಆತ್ಮಸಂಯಮಯೋಗ
  7. ಜ್ಞಾನವಿಜ್ಞಾನಯೋಗ
  8. ಅಕ್ಷರಬ್ರಹ್ಮಯೋಗ
  9. ರಾಜವಿದ್ಯಾರಾಜಗುಹ್ಯಯೋಗ
  10. ವಿಭೂತಿಯೋಗ
  11. ವಿಶ್ವರೂಪಯೋಗ
  12. ಭಕ್ತಿಯೋಗ
  13. ಕ್ಷೇತ್ರಕ್ಷೇತ್ರಜ್ಞಯೋಗ
  14. ಗುಣತ್ರಯವಿಭಾಗಯೋಗ
  15. ಪುರುಷೋತ್ತಮಯೋಗ
  16. ದೈವಾಸುರಸಂಪದ್ವಿಭಾಗಯೋಗ
  17. ಶ್ರದ್ಧಾತ್ರಯವಿಭಾಗಯೋಗ
  18. ಮೋಕ್ಷಸಂನ್ಯಾಸಯೋಗ.

 

ನಿರುಪಮ ರಾಯಿ

 

 

Leave a Reply

Your email address will not be published. Required fields are marked *