November 21, 2024
WhatsApp Image 2022-05-23 at 10.09.34 PM

ಭೂಗೋಲದ ಗೋಳು

ಮುಖ್ಯವಾಗಿ ಭೂಗೋಲವು ನೀರು,ನೆಲ,ಗಾಳಿ, ಬದುಕುಗಳಿಂದ ಕೂಡಿರುತ್ತದೆ.ಭೂಗೋಲವನ್ನು ಇಳಾ,ಪೃಥ್ವಿ, ಭೂಮಿ ,ಧರಾ,ಧರಣಿ, ಭೂಮಂಡಲ, ಭೂಲೋಕ,    ವಿಶ್ವ, ಭುವನ,ಪ್ರಪಂಚ ಇತ್ಯಾದಿ ಇತ್ಯಾದಿ ಹೆಸರುಗಳಿಂದ ಕರೆಯುತ್ತಾರೆ.

  ಒಂದಾನೊಂದು ಕಾಲದಲ್ಲಿ ಈ ಭೂಗೋಲವು ಪೂರ್ತಿ ಯಾಗಿ ನೀರಿನಿಂದಲೇ ತುಂಬಿತ್ತು.ಅದೇ ಈಗ ಕರೆಯುವ ಸಾಗರದಿಂದಲೇ ಆವೃತವಾಗಿತ್ತು.ಈಗ ಕಾಣುವಂತೆ ಮಣ್ಣು,ನೆಲ,ಮರುಭೂಮಿ,ಬೆಟ್ಟಗುಡ್ಡ,ಪರ್ವತಗಳು, ಗಿಡಮರಗಳು,ಬಳ್ಳಿಗಳು ಮತ್ತು ಬದುಕು ಇರಲಿಲ್ಲ.ಇವೆಲ್ಲವೂ ಸಾಗರದ ಒಳಗೆ ಇತ್ತು.ಈಗ ಇವುಗಳು ಸಾಗರದಲ್ಲೂಇದೆ.ನೆಲದಲ್ಲೂ ಇದೆ.ಸಾಗರ ಮತ್ತು ನೆಲಗಳಿಂದ ಗಾಳಿ ಬಿಡುಗಡೆ ಆಗುತ್ತದೆ.ಪ್ರಥ್ವಿ ಪೂರ್ತಿ ನೀರಿಂದಲೇ ಮುಳುಗಿದ್ದರಿಂದ ಕಡಲು ಸಾಗರಗಳಲ್ಲಿ
 ಅಲೆಗಳು (WAVES) ಅಂದು ಇರಲಿಲ್ಲ. ಬೃಹ್ಮಾಂಡದಲ್ಲಿ ಸಹಜವಾಗಿಯೇ ಇದ್ದ ನೈಸರ್ಗಿಕ ಸ್ವಾಭಾವಿಕ, ನೈಜವಾಗಿ ಹುಟ್ಟಿ ಬಂದಿರುವ ಸೂರ್ಯ, ಚಂದ್ರ,ಹಾಗೂ ಇತರ ಹೆಸರುಗಳಲ್ಲಿ ಕರೆಯುವ ಇತರ ಗೃಹಗಳಂತೆ ಈ ಭೂಗೋಲವೂ ಪ್ರಕೃತಿ ಸಿದ್ಧವಾಗಿದೆ. ಯಾವುದೇ ಧೂಮಕೇತುವಿನಿಂದ ನಿರ್ಮಾಣ ಆಗಿಲ್ಲ. ಪೃಕೃತಿ ಮಾತೆಯ ಕೊಡುಗೆ ಆಗಿತ್ತು.ಅಲ್ಲದೆ ಭೂಗೋಲದ ಸಂಶೋಧನೆ ಅಧ್ಯಯನ ಸಾಧ್ಯವಿಲ್ಲ. ಅಂದು ಆ ಕಾಲದಲ್ಲಿ ಸಮುದ್ರ ಸಾಗರವು ಯಥೇಚ್ಛವಾಗಿ ಗಾಳಿಯನ್ನು ಬಿಡುಗಡೆ ಮಾಡುತ್ತಿತ್ತು.ವಾತಾವರಣದಲ್ಲಿ ವಾಯುಮಂಡಲ(Atmosphere)ದಲ್ಲಿ ಒಂದೆಡೆ ಸಂಗ್ರಹವಾಗುತ್ತಿತ್ತು.ಸೂರ್ಯನ ಬಿಸಿಲಿನ ಶಾಖದಿಂದ ಅದು ಮಂಜುಗಡ್ಡೆಯಾಗಿ ರೂಪಾಂತರಗೊಳ್ಳುತ್ತಿತ್ತು.ಈಗಿನ ಶೀತಕ ಯಂತ್ರ(refrigerator)ದಲ್ಲಿ ಸಂಗ್ರಹವಾಗುವಂತೆ.ನಂತರದಲ್ಲಿ ಸಮುದ್ರದ ಗಾಳಿ ಮತ್ತು ಸೂರ್ಯನಿಂದಲೇ ಮಳೆ ಬರುತ್ತಿತ್ತು.ಕಡಲು ಅಕ್ಷಯ ಪಾತ್ರೆಯಂತೆ.ಮಳೆ ನೀರು ಸಮುದ್ರ ಸೇರುತ್ತಿತ್ತು.ಮಳೆ ನೀರು ಬಂದಷ್ಟು ಅದ ನ್ನು ಸಾಗರವು ತನ್ನಲ್ಲಿ ತುಂಬಿಸುತ್ತಿತ್ತು.ತನ್ನ ಸಾಮ್ರಾಜ್ಯದ ಲ್ಲಿ ಎಲ್ಲಾ ಬಗೆಯ ಚಲಚರ ಪ್ರಾಣಿ,ಗಿಡ ಮರ ಬಳ್ಳಿ,ಬೆಟ್ಟಗುಡ್ಡ ಪರ್ವತ,ಹೊಳೆ ನದಿ,ಬ್ಯಾಕ್ಟೀರಿಯಾ,ಹಾವು ಇತ್ಯಾದಿ ಗಳನ್ನು ಸಾಕುತ್ತಾ ಸಮೃದ್ಧವಾಗಿತ್ತು.ಮಳೆ ನೀರು ತುಂಬಿ ದಷ್ಟು  ಸಾಗರವು(Ocean)ಸಂಭ್ರಮಿಸುತ್ತಿತ್ತು.ಅದು ನೀಲ ಪ್ರಪಂಚವಾಗಿತ್ತು.ನಂತರದ ಕಾಲದಲ್ಲಿ ನೀರಿನ ಭೂಗೋಲ ದಲ್ಲಿ ನಂಬಲಾರದ ಬೆಳವಣಿಗೆಗಳು ನಡೆಯುತ್ತದೆ.

  ಪ್ರಾಕೃತಿಕವಾಗಿ ಹುಟ್ಟಿದ್ದ ಸಾಗರ ಎಂಬ ಭೂಮಿಯಡಿಯಲ್ಲಿ ಬೆಳೆಯುತ್ತಿದ್ದ ಪರ್ವತಗಳು ಬೆಳೆಯುತ್ತಾ ಬೆಳೆಯುತ್ತಾ ಸಾಗರದ ಮೇಲೆ ಕಾಣಲಾರಂಭಿಸುವುದು.ತಲೆ ಎತ್ತಿ ವಾಯುಮಂಡಲವನ್ನು ವೀಕ್ಷಿಸಲು ಆರಂಭಿಸುತ್ತದೆ.ಅವುಗಳಲ್ಲಿ ಬೆಳೆದಿದ್ದ ಗಿಡ ಮರ ಬಳ್ಳಿ,ಜಲಚರ ಜೀವಜಂತುಗಳು ಕೂಡಾ ಹೊಸ ನೆಲವನ್ನು ಕಾಣುತ್ತವೆ.ಅವುಗಳು ಜೀವನ ಮರಣದಲ್ಲಿ ಹೋರಾಡುತ್ತವೆ.ಕೆಲವು ಸಾಯುತ್ತವೆ.ಕೆಲವು ಬದುಕು ತ್ತವೆ.ಕಾಲಗಳು ಉರುಳಿದಂತೆ ನೆಲ ಎಂಬ ಭೂಮಿಯ ಸೃಷ್ಟಿ ಆಗುತ್ತದೆ.ಇಲ್ಲಿ ನೆಲ ಭೂಮಿಯ ಸ್ವರೂಪವು ಅಸ್ತಿತ್ವಕ್ಕೆ ಬರುತ್ತದೆ. ಜೀವ ಜಂತುಗಳು ವಿಕಾಸ ಹೊಂದುತ್ತಾ ಬದಲಾವಣೆ ಹೊಂದುತ್ತಾ ಅಭಿವೃದ್ಧಿಗೊಳ್ಳುತ್ತದೆ. ಕಾಲಗಳು ಉರುಳಿದಂತೆ ಇಂತಹ ನೆಲ  ಭೂಮಿಗಳ  ಸಂಖ್ಯೆಗಳು ಹೆಚ್ಚಾಗುತ್ತದೆ.ವಿಸ್ತಾರವಾಗಿ ನೆಲ ಭೂಮಿಯ ಸೃಷ್ಟಿ ಆಗುತ್ತದೆ. ಅದು ಎಲ್ಲಿಯವರೆಗೆ ವಿಸ್ತಾರ ಆಯಿತೆಂದರೆ  ನೀಲಿ ಗೃಹ(ಸಾಗರ ಭೂಮಿ) ದ 29 ಭಾಗವು ನೆಲ ಭೂಮಿಯಾಗಿ ಸೃಷ್ಟಿ ಆಗುತ್ತದೆ. ಉಳಿದ 71 ಭಾಗವು ಸಾಗರ ಭೂಮಿಯಾಗಿ ಉಳಿಯುತ್ತದೆ.
  ಸಾಗರ ಭೂಮಿಯ ನಕಲು ಪ್ರತಿಯು ನೆಲ ಭೂಮಿಯ ರೂಪದಲ್ಲಿ ಹೊರ ಹೊಮ್ಮುತ್ತದೆ.

  ಅಂದು ಆ ಕಾಲದಲ್ಲಿ ಆಳದ ಗೋಲಾಕಾರದ ಸಾಗರದೊಳಗೆ ಬದುಕುತ್ತಿದ್ದ ಈಗಿನ ಮಾನವ ರೂಪವನ್ನು ಹೋಲುವ ಜೀವಿಗಳು ಹೊಸದಾಗಿ ಸೃಷ್ಟಿಯಾದ ನೆಲಭೂಮಿಗೆ ಬರುತ್ತವೆ.ಜೀವನ್ಮರಣದಲ್ಲಿ ಹೋರಾಡುತ್ತಾ ಸಾಯುತ್ತಾ ಬದುಕುತ್ತಾ ಇರುತ್ತವೆ.ಕೊನೆಗೆ ವಿಕಸನ ಹೊಂದುತ್ತಾ ಈಗಿನ ಮಾನವ ರೂಪಕ್ಕೆ ಬರುತ್ತವೆ.ಆ ಜೀವಿಗಳೇ ಈಗ ಕಾಣುತ್ತಿರುವ ಎಲಿಯಾನ್ಸ್(ALIENS)ಆಗಿರಬಹುದು.ಇವು ಯಾವುದೇ ಗ್ರಹಗಳಿಂದ ಬಂದಿಲ್ಲ.ಬದಲಾಗಿ ಭೂಮಿ ಯ ಆಳದ ಸಾಗರದಿಂದ ಬಂದಿವೆ.ಈಗ ನೆಲ ಪ್ರಪಂಚದಲ್ಲಿಬದುಕುತ್ತಿರುವ ನಾವೆಲ್ಲರೂ ಅಂದು ಎಲಿಯಾನ್ಸ್ ಆಗಿ ನಂತರದಲ್ಲಿ ಮಾನವರಾಗಿರಬಹುದು.

  ಭೂಗೋಲದ 29 ರಷ್ಟು ಪಾಲನ್ನು ನಾವು ನೆಲ ಮಣ್ಣುಭೂಮಿ ಎಂದು ಕರೆದರೂ ಅದರ ಸ್ವರೂಪವು ಕೊಲ್ಲಿ,ದ್ವೀಪ,ಪರ್ಯಾಯ ದ್ವೀಪ,ಅಂತರ್ದ್ವೀಪ,ಖಾರಿ ,ಸರೋವರ, ಇತ್ಯಾದಿಗಳಿಂದ ಕೂಡಿದೆ.ಭೂಗೋಲದ ಸಾಗರ ಭೂಮಿಯ 29 ರಷ್ಟು ಭಾಗವು ಸಮುದ್ರ ಮಟ್ಟದಿಂದ ಮೇಲೆ ಬಂದು ತಮ್ಮದೇ ಸಾಮ್ರಾಜ್ಯ ಎಂದು ಅಹಂ ಪ್ರದರ್ಶಿಸಿದರೂ ಇದರ ಪಂಚಾಂಗವು ಸಾಗರ ಭೂಮಿ ಸಾಮ್ರಾಜ್ಯದ ಆಳದಲ್ಲೇ ಇದೆ.ಸಾಗರದ ಉಪ್ಪು ನೀರು ನೆಲಭೂಮಿಯ ಅಡಿಯಲ್ಲಿದೆ.ಇದನ್ನು ತನ್ನ ಅಧೀನಕ್ಕೆ ತಂದು ಮುಳುಗಿ ಸಿ ಆದಿ ಮೂಲದ ಸ್ವರೂಪವನ್ನು ಪಡೆಯಲು ನಿರಂತರ ಹೋರಾಟ ಮಾಡುತ್ತಲೇ ಇದೆ.ಆಗಾಗ್ಗೆ ಭೂಕಂಪ,ಜ್ವಾಲಾಮುಖಿ,ಪ್ರಲಯದಂತಹ ಸುನಾಮಿಗಳನ್ನು ಸೃಷ್ಟಿಸಿ ಈ ನೆಲಭೂಮಿಯ ಪ್ರದೇಶವನ್ನು ಸಿಡಿಸಿ ಕರಗಿಸಿ ವಿಶಾಲವಾದ ಸಾಗರಭೂಮಿಯಲ್ಲಿ ವಿಲೀನ ಮಾಡಲು ಹಾತೊರೆಯುವ ಕೆಲಸವನ್ನು ಮಾಡುತ್ತಲೇ ಇದೆ.ತಾನು ಕಳೆದುಕೊಂಡ ಭಾಗವನ್ನು ಪಡೆಯುವವರೆಗೂ ಅದು ತನ್ನ ಪ್ರಯತ್ನವನ್ನು ಮಾಡುತ್ತಲೇ ಇರುತ್ತದೆ.ಸಣ್ಣಪುಟ್ಟ ದ್ವೀಪಗಳು ಕರಗಿ ತನ್ನ ತಕ್ಕೆಗೆ ಈಗಾಗಲೇ ಸೇರಿಸಿಕೊಂಡಿದೆ.ಅದೇ ರೀತಿ ಸಣ್ಣಪುಟ್ಟ ದ್ವೀಪಗಳು ಮೇಲೆ ಹುಟ್ಟಿ ಬಂದಿದೆ.

   ವಾಯುಮಂಡಲದಿಂದ ಬೀಳುವ ನೀರನ್ನು ಭೂಮಿಯು ಯಾವ ಮಾತ್ರಕ್ಕೂ ಆವಿ ಆಗಲು ಬಿಡುವುದಿಲ್ಲ.ಅದು ನೆಲಭೂಮಿ ಆಗಿರಬಹುದು ಅಥವಾ ಸಾಗರಭೂಮಿ ಆಗಿರಬಹುದು.ನೀರು ಎಂಬುದು ತನ್ನ ಉತ್ಪನ್ನ ಎಂದು ಒಂದು ಬಿಂದು ನೀರನ್ನೂ ಕೂಡಾ ವಾಪಸ್ ಪಡೆಯಲು ಯಾರಿಂದಲೂ ಸಾಧ್ಯವಿಲ್ಲ.ಅದು ಮಣ್ಣಿನ ಅಡಿಗೆ ಹೋಗಬಹುದು.ಅಥವಾ ಹೊಳೆ,ನದಿ,ಸರೋವರ, ಸಮುದ್ರಕ್ಕೆ ಸಂದಾಯವಾಗಬೇಕು.ಸಾಗರಭೂಮಿ ಮತ್ತು ನೆಲಭೂಮಿಯಿಂದಲೇ ಗಾಳಿ ಬಿಡುಗಡೆ ಆಗಿ ವಾಯುಮಂಡಲದಲ್ಲಿ ಶೇಖರಣೆ ಆಗಿ ಪುನಃ ಅವುಗಳಿಂದಲೇ ಮತ್ತು ಸೂರ್ಯನ ಸಹಕಾರದಿಂದ ಮಳೆ ಸುರಿಯುತ್ತದೆ.

  ಸಮುದ್ರದ ಮೇಲ್ಮೈಯಲ್ಲಿ ನೀರಿನ ಸೆಳೆತ ಕೆಳಕ್ಕೆ ವೇಗ ವಾಗಿ ಜೋರಾಗಿ ಇದ್ದರೂ ಅದು ಕೆಲವು ದೂರದವರೆಗೆ ಮಾತ್ರ ಇರುತ್ತದೆ.ಬಳಿಕ ಆಳದಿಂದ ನೀರಿನ ಒತ್ತಡವು ಮೇಲ್ಮುಖವಾಗಿ ಇರುತ್ತದೆ.ಅದರಿಂದಲೇ ಸಾಗರದ ಮೇಲ್ಮೈಯಲ್ಲಿ ಕಿನಾರೆಯಲ್ಲಿ ಅಲೆಗಳು ಬರುತ್ತಲೇ ಇರುತ್ತದೆ.ನೆಲಭೂಮಿಯ ಸರೋವರಗಳಲ್ಲಿ ನೀರು ಯಾವಾಗಲೂ ನೀರು ತುಂಬಿರುತ್ತದೆ. ಈ ನೀರು ಸಮುದ್ರದ್ದೇ ಆಗಿರುತ್ತದೆ.ಸಮುದ್ರದ ಉಪ್ಪು ನೀರಿನ ಉಪ್ಪು ಅಂಶವನ್ನು ಮಣ್ಣು ನೆಲವು ಸೋಸಿ ಫಿಲ್ಟರ್ ಮಾಡಿ ಕಳಿಸಿಕೊಡುತ್ತದೆ.ನೆಲಭೂಮಿಯ ಎತ್ತರದ ಪರ್ವತಗಳ ಪ್ರದೇಶಗಳಲ್ಲೂ ಬಾವಿ ,ಬೋರ್ವೆಲ್ ನಿರ್ಮಿಸಿದಾಗಲೂ ನಮಗೆ ನೀರು ಸಿಗುತ್ತದೆ.ಆ ನೀರು ಕೂಡಾ ಸಮುದ್ರದ ಉಪ್ಪು ನೀರೇ ಫಿಲ್ಟರ್ ಆಗಿ ನಮಗೆ ಸಿಗುತ್ತದೆ.ಪರ್ವತಗಳ ಅಡಿಪಾಯವು ಸಮುದ್ರದ ಅಡಿಯಲ್ಲಿದೆ.ಸಾಗರದಲ್ಲಿ ನೀರು ಮೇಲ್ಮುಖವಾಗಿ ಹೊರ ಬರಲು ಕಾಯುತ್ತಿರುತ್ತದೆ.ತಾನು ಕಳೆದುಕೊಂಡಿರುವ ಪ್ರದೇಶವನ್ನು ತನ್ನ ತಕ್ಕೆಗೆ ಎಳೆಯಲು ಕಾದಿರುವುದು.
ಅದೇಕೆ ನೆಲಭೂಮಿಲ್ಲಿರುವ ಮರುಭೂಮಿ ಕೂಡಾ ಸಾಗರ ಭೂಮಿಂದಲೇ ಸಮುದ್ರ ಮಟ್ಟದಿಂದ ಮೇಲೆ ಬಂದಿದೆ. ಇದರ ತಳಭಾಗದಲ್ಲೂ ಸಾಗರ ಹರಡಿದೆ.ಇಲ್ಲೂ ನೀರು ಮೇಲ್ಮುಖವಾಗಿ ಮೇಲೆ ಬರಲು ಆತುರದಲ್ಲಿರುತ್ತದೆ. ಇಲ್ಲೂ ತುಂಬಾ ಆಳದವೆರೆಗೆ ಬೋರ್ವೆಲ್ ತೋಡಿದರೆ ನೀರು ಸಿಗುತ್ತದೆ.ಭೂಗೋಲದ ತಳಭಾಗವು ಸೆಂಟ್ ಪರ್ಸೆಂಟ್ ನೀರಿನಿಂದಲೇ ತುಂಬಿದೆ.ಭೂಗೋಲದ ಮೇಲ್ಮೈನ 29 ಭಾಗವು ಸಮುದ್ರದ ಮಟ್ಟಕ್ಕಿಂತ ಮೇಲೆ ಇದ್ದ ಪರಿಣಾಮವಾಗಿ ಅಲ್ಲಿ ನೆಲಭೂಮಿಯ ಸೃಷ್ಟಿ ಆಗಿದೆ.

   ಅಂದು ಭೂಗೋಲವು ಪೂರ್ತಿಯಾಗಿ ನೆಲಭೂಮಿ ಆಗಿ ಇರಲಿಲ್ಲ.ಬದಲಾಗಿ ಸಾಗರಭೂಮಿಯಾಗಿ ನೀರಿನಿಂದ ತುಂಬಿತ್ತು. ಸಾಗರಭೂಮಿಯ 29 ಭಾಗವು ಎತ್ತರಕ್ಕೆ ಬೆಳೆದು ನೆಲಮಣ್ಣು ಭೂಮಿಯಾಗಿ ಪರಿವರ್ತನೆ ಹೊಂದಿ ಬಿಡುತ್ತದೆ.ಸಾಗರದ ಒಳಗಿನ ಎಲ್ಲಾ ಚಿತ್ರಣಗಳು ನೆಲ ಭೂಮಿ ಮೇಲೆ ಇರುತ್ತದೆ.ಸಾಗರ ಭೂಮಿಯಲ್ಲೂ ಮತ್ತು ನೆಲಭೂಮಿಯಲ್ಲೂ ಆಕ್ಸಿಜನ್ ಉತ್ಪತ್ತಿ ಆಗುತ್ತದೆ.ಸಾಗರ ದೊಳಗಿನ ಅಧ್ಯಯನ ಸಂಶೋಧನೆ ಈವರೆಗೆ ಬರೇ 5% ಮಾತ್ರ ನಡೆದಿದೆ.ಇನ್ನೂ ಅಧ್ಯಯನ ನಿಗೂಢವಾಗಿ ಉಳಿದಿದೆ.

  ನೆಲ ಎಂಬ ಭೂಮಿಯಲ್ಲಿ ಮಾನವನು ತನ್ನ ಸ್ವಾರ್ಥಕ್ಕಾಗಿ ನೆಲದಲ್ಲಿ ವಿವಿಧ ರೀತಿಯಲ್ಲಿ ಅತ್ಯಾಚಾರ ಎಸಗುತ್ತಿದ್ದಾನೆ. ಕಾಡು ಗುಡ್ಡ ಪರ್ವತಗಳ ನಾಶ,ಗಣಿಗಾರಿಕೆ,ಸ್ಪೋಟಕ ವಸ್ತುಗಳ ಬಳಕೆ ಇತ್ಯಾದಿಗಳಿಂದ ನೆಲಭೂಮಿಯು ನಾಶ ವಾಗುತ್ತಿದೆ.ಮಾನವನು ನೆಲಭೂಮಿಯನ್ನು ನಾಶ ಮಾಡಿದ್ದು ಅಲ್ಲದೆ ಸಾಗರಭೂಮಿಯನ್ನೂ ನಾಶ ಮಾಡಲು ಹೊರಟಿದ್ದಾನೆ.ಕಸಕಡ್ಡಿಗಳನ್ನು ನೆಲಭೂಮಿಯಲ್ಲಿ ಹಾಕು ವುದಲ್ಲದೆ ಸಾಗರ ಭೂಮಿಯಲ್ಲೂ ಹಾಕುತ್ತಾ ಇದ್ದಾನೆ. ಅಲ್ಲದೆ ರಾಕೇಟ್,ಉಪಗ್ರಹ,ಏರ್ ಸ್ಪೇಸ್ ಕ್ರಾಫ್ಟ್ ಇತ್ಯಾದಿ ಗಳನ್ನೂ ಸಾಗರದಲ್ಲಿ ಒಂದೇ ಸಮನೆ ಹಾಕುತ್ತಲೇ ಇದ್ದಾನೆ. ಇದರಿಂದ ನೆಲಭೂಮಿ|ಸಾಗರಭೂಮಿಯಲ್ಲಿ ಗಾಳಿ ಬಿಡುಗಡೆ ಆಗಲು ತಡೆ ಉಂಟಾಗುತ್ತದೆ.ಇದರ ಪರಿಣಾಮವಾಗಿ ಕಾಲದಿಂದ ಕಾಲಕ್ಕೆ ಮಳೆ ಪ್ರಮಾಣ ಕಡಿಮೆ ಆಗುತ್ತದೆ.ಇದರಿಂದ ಸಾಗರದಲ್ಲಿ ಇನ್ನಷ್ಟು ದ್ವೀಪಗಳು ಮೇಲೆ ಕಾಣಲು ಬರಬಹುದು.

    ಸಂಶೋಧಕರ ಸಂಶೋಧನಾ ಕೆಲಸಗಳನ್ನು ಸಾಗರ ಭೂಮಿಯು ಅವರ ಮೇಲೆ ಮುನಿಸಿಕೊಂಡು ಇದೆ.ತನ್ನ ಇಡೀ ಸಾಮ್ರಾಜ್ಯ ಭೂಗೋಲದ ಅವಸಾನಕ್ಕೆ ಈ ಮಾನವ ನೇ ನೇರ ಹೊಣೆ ಎಂದು ಕಾಯುತ್ತಿದೆ.ಇಡೀ ಭೂಗೋಲದ ಅಧಿಪತ್ಯವನ್ನು ಹಿಡಿದೇ ಹಿಡಿಯುತ್ತೇನೆ ಎಂಬ ಭರವಸೆಯನ್ನು ಪಠಿಸುತ್ತಾ ಇದೆ.ತನ್ನ ಆದಿಮೂಲದ ನಕ್ಷೆಯನ್ನು ಕೈಗೆತ್ತಿ ಕೊಳ್ಳುವೆ ಎನ್ನುತ್ತಿದೆ.ಈಗ ತನ್ನ ಕೈಯಲ್ಲಿ ಇರುವ ಸಾಗರ ಭೂಮಿಯೊಳಗೆ ತನ್ನದೇ ಆದ ನೆಲ ಭೂಮಿಯನ್ನು ಸೇರಿಸಿ ಶಾಂತ ರೀತಿಯಲ್ಲಿ ಇರುವೆನು ಎಂದು ಶಪತ ಹಾಕುತ್ತಾ ಇದೆ.ಸಾಗರ ಭೂಮಿಗೆ ನಾವಿರುವ ನೆಲ ಭೂಮಿ ಯು ವಿಲೀನ ಆಯಿತೆಂದರೆ ನಂತರದಲ್ಲಿ ಸಾಗರದಲ್ಲಿ ಅಲೆಗಳು ಇಲ್ಲ.ಯಾವುದೇ ಹೊರ ಪ್ರಪಂಚವೇ ಇಲ್ಲ. ಎಲ್ಲಾ ಸಾಗರದೊಳಗೆ ಇರುತ್ತದೆ.ಸ್ವತಂತ್ರ ಪ್ರಪಂಚ. ಸ್ವಚ್ಛವಾದ ಗಾಳಿ ಬಿಡುಗಡೆ ಮಾಡಿ ಮೋಡ ಬರಿಸಿ ಮಳೆ ಯನ್ನು ಸುರಿಸಿದರೆ ಆಯಿತು.ನೆಲಭೂಮಿ ಇದ್ದರೆ ತಾನೇ ಮಾನವನು ಗ್ರಹಗಳ ಅನ್ವೇಷಣೆ ಮಾಡೋದು.ಅವನೂ ಸಾಗರದೊಳಗೆ ಎಲಿಯಾನ್ಸ್ ಆಗಿ ಇತರ ಕೋಟ್ಯಾಂತರ ಜೀವಿಗಳೊಡನೆ ಬದುಕುತ್ತಾನೆ.

  ಮುಂದಿನ ಕಾಲದಲ್ಲಿ ಸಾಗರ ಭೂಮಿಯು ಭೂಕಂಪ, ಜ್ವಾಲಾಮುಖಿ,ಪ್ರಲಯದಂತಹ ಪ್ರಬಲವಾದ ನೈಸರ್ಗಿಕ ವಿಪತ್ತುಗಳನ್ನು ಸೃಷ್ಟಿಸಿ ನೆಲಭೂಮಿಯನ್ನು ಸಿಡಿಸಿ,ಕರಗಿಸಿ ತನ್ನ ಸಾಗರಭೂಮಿ ಎಂಬ ಸಾಮ್ರಾಜ್ಯದಲ್ಲಿ ವಿಲೀನ ಮಾಡುವುದು ಖಂಡಿತ.ಮಾನವನ ಹಿಡಿತ ಇಲ್ಲದ ಲಂಗು ಲಗಾಮು ಇಲ್ಲದ ಧೋರಣೆಯನ್ನು ಸಾಗರಭೂಮಿ ಸಹಿಸುವುದಿಲ್ಲ.ನನ್ನ ಮಣ್ಣಿನಲ್ಲಿ ಇದ್ದು ನನ್ನ ಕುರಿತು ಅಧ್ಯಯನ ಸಂಶೋಧನೆ ಮಾಡಲು ಆಗದೆ ಈಗ ಬೇರೆ ಗ್ರಹಗಳತ್ತ  ಮೇಲೆ ಧಾಳಿ ಮಾಡುವ ಮಾನವನ ಸಾಹಸಕ್ಕೆ ಭೂಗೋಲ ಅಪಹಾಸ್ಯ ಮಾಡುತ್ತಿದೆ.ಮಾನವನ ದುಸ್ಸಾಹಾಸಕ್ಕೆ ಮುನಿದಿದೆ. ದುಸ್ಸಾಹಾಸ ಮುರಿಯಲು ಕಾಯುತ್ತಾ ಇದೆ.

  ಮೇಲಿನ ಷಡ್ಯಂತ್ರ ವರ್ಕೌಟ್ ಆಗದೆ ಇದ್ದರೆ ಭೂಗೋಲಕ್ಕೆ ಮಳೆಯನ್ನೇ ಸುರಿಯದಂತೆ ಮಾಡುವ ತಿರುಗು ಬಾಣ ಸಾಗರಭೂಮಿಯದ್ದು.ಅದರ ಪರಿಣಾಮವಾಗಿ ಸಾಗರ ಬತ್ತಿ ಹೋಗುತ್ತದೆ.ನೆಲಭೂಮಿಯಲ್ಲಿ ನೀರಿಗಾಗಿ ಹಾಹಾಕಾರ.ಭೂಗೋಲದ ಎಲ್ಲೆಡೆ ದ್ವೀಪಗಳು ಜನಿಸುತ್ತದೆ.ನೆಲ ಭೂಮಿಯು ವಿಸ್ತಾರವಾಗುತ್ತದೆ.ಸಾಗರದ ವಿಸ್ತರಣೆ ಕ್ಷೀಣಿಸುತ್ತದೆ.ಸಾಗರದ ಕಂದಕಗಳು ಗೋಚರಿಸುತ್ತದೆ. ಕ್ರಮೇಣವಾಗಿ ಸಾಗರವು ಬತ್ತಿ ಹೋಗುತ್ತದೆ. ಭೂಗೋಲದಲ್ಲಿ ಬದುಕು ಇರುವುದಿಲ್ಲ.ಕೊನೆಗೆ ಅಂತ್ಯದಲ್ಲಿ ಭೂಗೋಲದ ರೂಪವು ಇತರ ಗೃಹಗಳಂತೆ.ಖಾಲಿ ಖಾಲಿ ಮರುಭೂಮಿಯಂತೆ.

✍️  ಐ.ಕೆ.ಗೋವಿಂದ ಭಂಡಾರಿ (ನಿವೃತ್ತ ಬ್ಯಾಂಕ್ ಮ್ಯಾನೇಜರ್)

“ದೇವರ್ದಯ” , ಕಾರ್ಕಳ

ಮೊಬೈಲ್ ಸಂಖ್ಯೆ : 9632562679

Leave a Reply

Your email address will not be published. Required fields are marked *