
ಮಂಗಳೂರು ಕೈಕಂಬದ ಶ್ರೀ ವಾಮನ್.ಬಿ.ಕೆ.ಪೊಳಲಿ ಮತ್ತು ಶ್ರೀಮತಿ ಗುಲಾಬಿ.ವಿ.ಪೊಳಲಿ ದಂಪತಿಯ ಪುತ್ರ “ಶ್ರೀ ಅಭಿಷೇಕ್.ವಿ.ಪೊಳಲಿ” ಯವರು ಫೆಬ್ರವರಿ 25,2019 ರ ಸೋಮವಾರ ತಮ್ಮ ಹುಟ್ಟು ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ.

ಪುತ್ತೂರು ತುಳುಕೂಟದ ಅಧ್ಯಕ್ಷರೂ, ಪೂವರಿ ತುಳು ಮಾಸಪತ್ರಿಕೆಯ ಪ್ರಧಾನ ಸಂಪಾದಕರೂ, ತುಳು ಸಾಹಿತಿಯೂ ಆಗಿರುವ ಶ್ರೀಯುತ ವಿಜಯ್ ಕುಮಾರ್ ಹೆಬ್ಬಾರಬೈಲು ರವರ ಸಹೋದರಿ ಶ್ರೀಮತಿ ಗುಲಾಬಿಯವರ ಪುತ್ರನಾಗಿರುವ ಅಭಿಷೇಕ್ ಮಂಗಳೂರು ಕುಪ್ಪೆಪದವು ನಲ್ಲಿರುವ ಮೆರಿನ್ ಇನ್ಸ್ಟಿಟ್ಯೂಟ್ ನಲ್ಲಿ ಮೆರಿನ್ ಇಂಜಿನಿಯರ್ ವಿಭಾಗದಲ್ಲಿ ಬಿ.ಇ. ವ್ಯಾಸಂಗ ಮಾಡುತ್ತಿದ್ದಾರೆ.

ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಅಭಿಷೇಕ್ ಗೆ ಅವರ ತಂದೆ, ತಾಯಿ, ಧಾರವಾಡದಲ್ಲಿರುವ ಅಕ್ಕ ಶ್ರೀಮತಿ ಧನ್ಯ ಪ್ರಸಾದ್, ಭಾವ ಶ್ರೀ ಪ್ರಸಾದ್ ಬಸ್ರೂರು, ಮಾವ ಶ್ರೀ ವಿಜಯ್ ಕುಮಾರ್ ಹೆಬ್ಬಾರಬೈಲು, ಅತ್ತೆ ಶ್ರೀಮತಿ ಗಾಯತ್ರಿ.ವಿ.ಹೆಬ್ಬಾರಬೈಲು, ಯಶಸ್.ವಿ.ಹೆಬ್ಬಾರಬೈಲು, ಅಮೃತ್.ವಿ.ಹೆಬ್ಬಾರಬೈಲು, ಕುಟುಂಬಸ್ಥರು ಹಾಗೂ ಸ್ನೇಹಿತರು ಶುಭ ಕೋರುತ್ತಿದ್ದಾರೆ.
ಹುಟ್ಟು ಹಬ್ಬದ ಸಡಗರದಲ್ಲಿರುವ ಅಭಿಷೇಕ್ ರಿಗೆ ಭಗವಂತನು ಆಯುರಾರೋಗ್ಯ ಭಾಗ್ಯವನ್ನಿತ್ತು ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹಾರ್ದಿಕವಾಗಿ ಶುಭ ಹಾರೈಸುತ್ತದೆ.
“ಭಂಡಾರಿವಾರ್ತೆ.”