ಮಂಗಳೂರಿನ ಸುರತ್ಕಲ್ ಸೂರಿಂಜೆಯ ಶ್ರೀ ವಾಮನ ಭಂಡಾರಿ ಮತ್ತು ಪುಷ್ಪಾ ದಂಪತಿಗಳ ಪುತ್ರಿ, ವೃತ್ತಿಯಲ್ಲಿ ಶಿಕ್ಷಕಿ ಮತ್ತು ಹವ್ಯಾಸಿ ಲೇಖಕಿಯಾಗಿರುವ ಕು. ಸುಪ್ರೀತಾ ಭಂಡಾರಿಯವರು ದಿನಾಂಕ 13ನೇ ನಂವೆಂಬರ್ 2019 ರಂದು ಬುಧವಾರ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.
ಈ ಶುಭ ಸಂದರ್ಭದಲ್ಲಿ ತಂದೆ, ತಾಯಿ, ಅಣ್ಣ ಅಶೋಕ್ ಭಂಡಾರಿ ಮತ್ತು ಬಂಧುಮಿತ್ರರು ಶುಭಾಶಯ ಕೋರುತ್ತಿದ್ದಾರೆ.
ಭಂಡಾರಿ ವಾರ್ತೆಗೆ ಹಲವಾರು ಲೇಖನ ಮತ್ತು ಕವನಗಳನ್ನು ಬರೆದಿರುವ ಇವರು ಭಂಡಾರಿವಾರ್ತೆ ಓದುಗರಿಗೆ ಚಿರಪರಿಚಿತರಾಗಿದ್ದಾರೆ. ಈ ಶುಭ ಸಂದರ್ಭದಲ್ಲಿ ಭಂಡಾರಿ ಕುಟುಂಬಗಳ ಮನೆ ಮನದ ಮಾತು ಭಂಡಾರಿ ವಾರ್ತೆಯು ಕು.ಸುಪ್ರೀತಾರವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರುತ್ತಾ ಇವರ ಮುಂದಿನ ದಿನಗಳು ಸುಖಮಯವಾಗಿರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತದೆ.
-ಭಂಡಾರಿ ವಾರ್ತೆ