
ನಮ್ಮ ಸಮಾಜದ ಹೆಮ್ಮೆಯ ಬರಹಗಾರರು,ನಾಟಕ ರಚನಾಕಾರರು,ನಿರ್ದೇಶಕರು,ಹವ್ಯಾಸಿ ರಂಗಭೂಮಿ ಕಲಾವಿದರೂ ಆಗಿರುವ ಶ್ರೀ ದಿನಕರ ಭಂಡಾರಿ ಕಣಂಜಾರು ರವರ ಪತ್ನಿ ಶ್ರೀಮತಿ ದಿವ್ಯಾ ದಿನಕರ ಭಂಡಾರಿ ಕಣಂಜಾರು ತಮ್ಮ ಹುಟ್ಟು ಹಬ್ಬವನ್ನು ಉಡುಪಿ ತಾಲೂಕಿನ ಮೂಡುಬೆಳ್ಳೆಯ ತಮ್ಮ ಐಸಿರ ನಿಲಯದಲ್ಲಿ ಏಪ್ರಿಲ್ 17 ರ ಮಂಗಳವಾರ ಸಡಗರ ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ.

ಈ ಶುಭ ಸಂದರ್ಭದಲ್ಲಿ ಅವರಿಗೆ ಅವರ ಪತಿ,ಮಕ್ಕಳಾದ ಮಾಸ್ಟರ್ ದಿವಿಷ್,ಮಾಸ್ಟರ್ ದಿಷಾನ್,ತಾಯಿ ಸರೋಜಿನಿ ಭಂಡಾರಿ ನಿಟ್ಟೆ,ಅತ್ತೆ ಗುಲಾಬಿ ವೆಂಕಪ್ಪ ಭಂಡಾರಿ ಕಣಂಜಾರು,ತಂಗಿ ಶ್ರೀಮತಿ ಭವ್ಯ ಮಣಿ ಭಂಡಾರಿ ಕಳಸ ಮತ್ತು ಕುಟುಂಬಸ್ಥರು ಶುಭ ಕೋರಿದ್ದಾರೆ.

ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಶ್ರೀಮತಿ ದಿವ್ಯಾ ದಿನಕರ ಭಂಡಾರಿಯವರಿಗೆ ಭಗವಂತನು ಆಯುರಾರೋಗ್ಯ ಐಶ್ವರ್ಯಗಳನ್ನು ನೀಡಿ ಹರಸಿ ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು “ಭಂಡಾರಿವಾರ್ತೆ” ಶುಭ ಕೋರುತ್ತಾ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರುತ್ತದೆ.
— ಭಂಡಾರಿವಾರ್ತೆ.