January 18, 2025
Lakshman Karavali3

 

  ಬೆಂಗಳೂರು ಭಂಡಾರಿ ಸಮಾಜ ಸಂಘದ ಮಾಜಿ ಅಧ್ಯಕ್ಷ, ಭಂಡಾರಿ ಸಮಾಜದ ಹಿರಿಯರೂ, ಮಾರ್ಗದರ್ಶಕರೂ ಆಗಿರುವ ಶ್ರೀ ಲಕ್ಷ್ಮಣ ಕರಾವಳಿಯವರಿಗೆ ಜುಲೈ 28 ರ ಶನಿವಾರ ಹುಟ್ಟು ಹಬ್ಬದ ಸಂಭ್ರಮ.
ಉಡುಪಿಯ ಕಾಡಬೆಟ್ಟು ವೆಂಕಪ್ಪ ಭಂಡಾರಿ ಮತ್ತು ಗಿರಿಜಾ ವೆಂಕಪ್ಪ ಭಂಡಾರಿ ದಂಪತಿಯ ಪುತ್ರರಾಗಿರುವ ಇವರು ಪ್ರಸ್ತುತ ಬೆಂಗಳೂರಿನ ಮಾರತಹಳ್ಳಿಯಲ್ಲಿ ನೆಲೆಸಿದ್ದಾರೆ. ಬೆಂಗಳೂರಿನಲ್ಲಿ ದಶಕಗಳ ಹಿಂದೆ “ಕರಾವಳಿ ಇಂಟರ್ನೆಟ್ ಮತ್ತು ಕೇಬಲ್ ನೆಟ್ ವರ್ಕ್ ” ಎಂಬ ಉದ್ದಿಮೆ ಆರಂಭಿಸಿದ ಇವರು ಸಮಾಜ ಬಾಂಧವರಲ್ಲಿ “ಲಕ್ಷ್ಮಣ ಕರಾವಳಿ” ಎಂದೇ ಚಿರಪರಿಚಿತ. 
ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಟ್ರಸ್ಟಿಯಾಗಿಯೂ ಸೇವೆ ಸಲ್ಲಿಸಿರುವ ಶ್ರೀಯುತರು ಮಿತಭಾಷಿ. ತಮ್ಮ ಸರಳ ಮತ್ತು ಸಜ್ಜನಿಕೆ ಗುಣಗಳಿಂದ ಸಮಾಜ ಬಾಂಧವರಲ್ಲಿ ಮಾತ್ರವಲ್ಲದೆ ಎಲ್ಲಾ ವರ್ಗದ ಜನರ ಪ್ರೀತಿಗೆ ಪಾತ್ರರಾದವರು. ಭಂಡಾರಿ ಸಮಾಜದ ಮಕ್ಕಳ ವಿಧ್ಯಾಭ್ಯಾಸ, ಭಂಡಾರಿ ಸಮಾಜ ಬಂಧುಗಳ ಯಾವುದೇ ಸಮಸ್ಯೆಗಳಿಗೂ ಕೂಡಲೇ ಸ್ಪಂದಿಸುವ ಅವರ ಗುಣ ಅವರನ್ನು ಸಮಾಜದ ಕೆಲವೇ ಕೆಲವು ಮಹನೀಯರ ಸಾಲಿನಲ್ಲಿ ಸೇರುವಂತೆ ಮಾಡಿದೆ ಎಂದರೆ ತಪ್ಪಾಗಲಾರದು. 
ಇವರ ಪತ್ನಿ ಶ್ರೀಮತಿ ಸುಮತಿ ಲಕ್ಷ್ಮಣ ಕರಾವಳಿಯವರು ಸರ್ಕಾರಿ ವೈದ್ಯಾಧಿಕಾರಿ. ಪ್ರಸ್ತುತ ಅವರು ವೈಟ್ ಫೀಲ್ಡ್ ಸಿದ್ದಾಪುರದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹಿರಿಯ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಹಿರಿಯ ಪುತ್ರ ಶ್ರೀ ಹರ್ಷಿತ್ ಧಾರವಾಡದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಎಂ.ಬಿ.ಬಿ.ಎಸ್ ಅಭ್ಯಸಿಸುತ್ತಿದ್ದಾರೆ .ಇವರ ಕಿರಿಯ ಪುತ್ರ ಶ್ರೀ ಆದಿತ್ಯ  ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಯಾಗಿದ್ದಾರೆ.
ನಮ್ಮ ಮಹತ್ವಾಕಾಂಕ್ಷೆಯ ಯೋಜನೆ ಭಂಡಾರಿವಾರ್ತೆಯೊಂದಿಗೆ ಸದಾ ಬೆಂಬಲವಾಗಿ ನಿಂತಿರುವ ಲಕ್ಷ್ಮಣ ಕರಾವಳಿಯವರು ನಮ್ಮ ಹಲವು ಕಾರ್ಯಕ್ರಮಗಳಿಗೂ ಕೈಜೋಡಿಸಿದ್ದಾರೆ.ಆಲ್ಲದೆ ಭಂಡಾರಿವಾರ್ತೆಯ ಪ್ರಥಮ ವರ್ಷಾಚರಣೆಯ ಅಂಗವಾಗಿ ಏರ್ಪಡಿಸಿರುವ “ಸೆಲ್ಫೀ ಸ್ಪರ್ಧೆಯ “ ಪ್ರಾಯೋಜಕರಲ್ಲೊಬ್ಬರಾಗಿದ್ದಾರೆ.
ಐವತ್ತೆಂಟು ವಸಂತಗಳನ್ನು ಪೂರೈಸಿ ಐವತ್ತೊಂಬತ್ತಕ್ಕೆ ಕಾಲಿಡುತ್ತಿರುವ ಈ ಶುಭ ಸಂದರ್ಭದಲ್ಲಿ ಶ್ರೀ ದೇವರು ಅವರಿಗೆ ಆಯುರಾರೋಗ್ಯ ಭಾಗ್ಯವನ್ನಿತ್ತು ಆಶೀರ್ವದಿಸಲಿ. ಸುಖ ಶಾಂತಿ ನೆಮ್ಮದಿಯುತ ಜೀವನವನ್ನು ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹಾಗೂ ತಂಡ ಶುಭ ಹಾರೈಸುತ್ತದೆ. 
ವರದಿ: ಭಾಸ್ಕರ್ ಭಂಡಾರಿ ಶಿರಾಳಕೊಪ್ಪ.

Leave a Reply

Your email address will not be published. Required fields are marked *