January 18, 2025
Mahendra Phalguni 4
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಫಲ್ಗುಣಿಯ ಶ್ರೀ ಮಹೇಂದ್ರಕುಮಾರ್ ರವರಿಗೆ ಜೂನ್ 20 ರ ಬುಧವಾರ  ಹುಟ್ಟು ಹಬ್ಬದ ಸಂಭ್ರಮ.
ಮೂಡಿಗೆರೆ ಫಲ್ಗುಣಿಯ ಶ್ರೀ ಅಪ್ಪು ಭಂಡಾರಿ ಮತ್ತು ಶ್ರೀಮತಿ ಅಮ್ಮಣ್ಣಿ  ಭಂಡಾರಿ ದಂಪತಿಯ ಆರು ಜನ ಮಕ್ಕಳ ಪೈಕಿ ಮೂರನೆಯವರಾಗಿ ಜನಿಸಿದ ಇವರು ಬಿ.ಎ ಪದವಿ ಪೂರೈಸಿ ಬೆಂಗಳೂರಿನ ಸುಂಕದಕಟ್ಟೆಯಲ್ಲಿ ಶ್ರೀ ಗಜಾನನ ಎಂಟರ್ಪ್ರೈಸಸ್ ನ ಅಡಿಯಲ್ಲಿ “ಫಲ್ಗುಣಿ ಜಾಬ್ಸ್” ಎಂಬ ಉದ್ಯೋಗ ಮಾಹಿತಿ ಕೇಂದ್ರ ಆರಂಭಿಸಿ ಸಾವಿರಾರು ಉದ್ಯೋಗಾಸಕ್ತರಿಗೆ ನೆರವಾಗಿದ್ದಾರೆ.ಇವರ ಮಾರ್ಗದರ್ಶನದಲ್ಲಿ ಉದ್ಯೋಗ ಸೃಷ್ಟಿಸಿಕೊಂಡವರು ರಾಜ್ಯಾದ್ಯಂತ ಪಸರಿಸಿದ್ದು ಇವರ ಸಹಾಯವನ್ನು ಕೃತಜ್ಞತೆಯಿಂದ ನೆನೆಯುತ್ತಾರೆ.
ಫಲ್ಗುಣಿಯ ಜಗನ್ಮಾತೆ ಮಹಾಲಕ್ಷ್ಮಿ ಹಾಗು ಅಮ್ಮ ಪದ್ಮಾವತಿ ದೇವಿಯ ಪರಮಭಕ್ತರಾದ ಇವರು ಹೇಳುವ ಮಾತುಗಳು ಮತ್ತು ಲೆಕ್ಕಾಚಾರಗಳು ನುಡಿದಂತೆ ನೆಡೆದ ಅದೆಷ್ಟೋ ಉದಾಹರಣೆಗಳಿವೆ.ಕರ್ನಾಟಕ ರಾಜ್ಯ ಯುವ ಜಾಗೃತಿ ಮತದಾರರ ವೇದಿಕೆಯ ರಾಜ್ಯಾಧ್ಯಕ್ಷರಾಗಿರುವ ಮಹೇಂದ್ರ ಕುಮಾರ್ ರವರು ಯುವಸಮೂಹಕ್ಕೆ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಸದುದ್ದೇಶದಿಂದ ರಾಜ್ಯಾದ್ಯಂತ ಸಂಚರಿಸಿದ್ದಾರೆ.ಯಾವುದೇ ಪ್ರತಿಫಲಾಪೇಕ್ಷೆಗಳಿಲ್ಲದೇ ಈ ರೀತಿಯ ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಂಡಿರುವ ಇವರು ನಮ್ಮ ಭಂಡಾರಿ ಸಮಾಜದ ಹೆಮ್ಮೆ.
ಇವರು ಪೆಟ್ರೋಲ್ ಬೆಲೆ ಏರಿಕೆ ಬಗೆಗಿನ ಹೇಳಿಕೆಯು ಗೂಗಲ್ ನಲ್ಲಿ ಪ್ರಚಾರಗೊಂಡು ವಿಶ್ವದ ಗಣ್ಯರ ಗಮನ ಸೆಳೆದಿದ್ದು  ಸುಮಾರು ಒಂದು ಲಕ್ಷದ ಮೂವತ್ತೈದು ಸಾವಿರಕ್ಕೂಅಧಿಕ ಲೈಕ್ ಗಳು ಬಂದಿದೆ…
ಈ ಕೆಳಗಿನ ಗೂಗಲ್ ಲಿಂಕ್ ನಲ್ಲಿ ಹುಡುಕಿ
https// mahendra Kumar phalguni 
ಸಾಮಾಜಿಕ ಕ್ಷೇತ್ರದಲ್ಲಿ,ರಾಜಕೀಯ ಕ್ಷೇತ್ರದಲ್ಲಿ,ಧಾರ್ಮಿಕ ಕ್ಷೇತ್ರದಲ್ಲಿ ಎಲ್ಲಾ ಕಡೆಯೂ ಅಪಾರ ಅಭಿಮಾನಿಗಳನ್ನು,ಹಿತೈಷಿಗಳನ್ನು,ಆತ್ಮೀಯರನ್ನು ಹೊಂದಿರುವ ಇವರು ಅಜಾತಶತ್ರು ಎಂದರೆ ಅತಿಶಯೋಕ್ತಿಯೇನಲ್ಲ.ಇವರೆಲ್ಲರೂ ಇವರಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.
ಶ್ರೀ ಮಹೇಂದ್ರ ಕುಮಾರ್ ಫಲ್ಗುಣಿಯವರಿಗೆ ಹುಟ್ಟು ಹಬ್ಬದ ಈ ಶುಭ ಸಂದರ್ಭದಲ್ಲಿ ಭಗವಂತನು ಆಯುರಾರೋಗ್ಯ ಐಶ್ವರ್ಯಗಳನ್ನು ಕೊಟ್ಟು ಹರಸಲಿ,ಜಗನ್ಮಾತೆ ಮಹಾಲಕ್ಷ್ಮಿಮತ್ತು ಪದ್ಮಾವತಿ ದೇವಿ ಇವರಿಗೆ ಸಕಲ ಸನ್ಮಂಗಳವನ್ನುಂಟು ಮಾಡಿ ಅನುಗ್ರಹಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಶುಭ ಹಾರೈಸುತ್ತಾ, ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರುತ್ತದೆ.
ವರದಿ: ಭಾಸ್ಕರ್ ಭಂಡಾರಿ ಶಿರಾಳಕೊಪ್ಪ 

Leave a Reply

Your email address will not be published. Required fields are marked *