January 19, 2025
Pawan Bhandary Kuriyala1
Advt.
Advt.
advt.

ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದ ಶ್ರೀ ಪವನ್ ಕುಮಾರ್ ಭಂಡಾರಿ ತಮ್ಮ ಮೂವತ್ತೆರಡನೇ ವರ್ಷದ ಹುಟ್ಟು ಹಬ್ಬವನ್ನು ಜುಲೈ 14 ರ ಶನಿವಾರ ಆಚರಿಸಿಕೊಳ್ಳುತ್ತಿದ್ದಾರೆ.


ಬಂಟ್ವಾಳ ತಾಲೂಕಿನ ಭಾರತೀಯ ಜನತಾ ಪಕ್ಷದ ಧುರೀಣರಲ್ಲೊಬ್ಬರಾದ ಶ್ರೀ ಜಗದೀಶ್ ಭಂಡಾರಿ ಮತ್ತು ಶ್ರೀಮತಿ ಮೋಹಿನಿ ಜಗದೀಶ್ ಭಂಡಾರಿ ದಂಪತಿಯ ಪುತ್ರರಾದ ಇವರು ಕೊಂಕಣ ರೈಲ್ವೆಯ ಪೋಲಿಸ್ ಇಲಾಖೆಯಲ್ಲಿ ಉದ್ಯೋಗದಲ್ಲಿದ್ದು ಪ್ರಸ್ತುತ ಗೋವಾದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.


ಹುಟ್ಟು ಹಬ್ಬದ ಈ ಸುಸಂದರ್ಭದಲ್ಲಿ ಅವರಿಗೆ ಅವರ ತಂದೆ, ತಾಯಿ, ಪತ್ನಿ ಶ್ರೀಮತಿ ಅಕ್ಷತಾ ಪವನ್ ಕುಮಾರ್,ಮಗಳು ಬೇಬಿ ತನಿಷ್ಕಾ,ತಮ್ಮ ಶ್ರೀ ಪ್ರಣಾಮ್ ಕುಮಾರ್ ಭಂಡಾರಿ ಮತ್ತು ಕುಟುಂಬಸ್ಥರು,ಆತ್ಮೀಯರು,ಸ್ನೇಹಿತರು,ಸಹೋದ್ಯೋಗಿಗಳು ಶುಭ ಹಾರೈಸುತ್ತಿದ್ದಾರೆ.


ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಪವನ್ ಕುಮಾರ್ ರವರಿಗೆ ಭಗವಂತನು ಸಕಲ ಸಂಪತ್ತನ್ನಿತ್ತು ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಶುಭ ಹಾರೈಸುತ್ತಾ, ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರುತ್ತದೆ.

Advt.
Advt.

 

 

 

 

 

 

 

-ವರದಿ : ಭಾಸ್ಕರ ಭಂಡಾರಿ ಶಿರಾಳಕೊಪ್ಪ

Leave a Reply

Your email address will not be published. Required fields are marked *