January 18, 2025
Ravi Bidanuru3
ತ್ರಿಕಾ ಮಾಧ್ಯಮ ಮತ್ತು ದೃಶ್ಯ ಮಾಧ್ಯಮದಲ್ಲಿ ಹೆಸರು ಮಾಡಿ 2011 ರಲ್ಲಿ ನವದೆಹಲಿಯ ದಲಿತ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 2017 ನೇ ಸಾಲಿನ ಕರ್ನಾಟಕ ರಾಜ್ಯ ಮಾಧ್ಯಮ ಅಕಾಡೆಮಿ ಪ್ರಶಸ್ತಿಯನ್ನು ಪಡೆದ ಭಂಡಾರಿ ಸಮಾಜದ ಸ್ನೇಹಜೀವಿ ಶ್ರೀ ರವಿ ಬಿದನೂರು ಅವರಿಗೆ ಜುಲೈ 23 ರ ಸೋಮವಾರ ಹುಟ್ಟು ಹಬ್ಬದ ಸಂಭ್ರಮ.
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಗರದವರಾದ ಇವರು ಪೆರ್ಡೂರಿನ ಬೋಜ ಭಂಡಾರಿ ಮತ್ತು ಸೀತಮ್ಮ ದಂಪತಿಯ ಪುತ್ರ.ರವಿ ಬಿದನೂರರ ಪತ್ನಿ ಶ್ರೀಮತಿ ಕುಮುದಾ ರವಿ ಬಿದನೂರು. ಇವರು ಮೂಲತಃ ಉಡುಪಿಯ ಬನ್ನಂಜೆಯವರು‌.ಸಮೃದ್ಧಿ ಇವರ ಮುದ್ದಿನ ಮಗಳು.
ನಮ್ಮ ಭಂಡಾರಿವಾರ್ತೆ ಅಂತರ್ಜಾಲ ಪತ್ರಿಕೆಯ ರೂಪುರೇಷೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಶ್ರೀ ರವಿ ಬಿದನೂರರ ಸಲಹೆ ಸಹಕಾರ ಅನನ್ಯ.ಪತ್ರಿಕಾ ಮಾಧ್ಯಮದ ಆಳ ಅಗಲದ ಅರಿವಿದ್ದ ರವಿಯವರು ತಮ್ಮ ಅತ್ಯಮೂಲ್ಯ ಸಲಹೆ ಸೂಚನೆಗಳನ್ನಿತ್ತು ನಮ್ಮನ್ನು ಹುರಿದುಂಬಿಸಿದುದನ್ನು ನಾವು ಎಂದಿಗೂ ಕೃತಜ್ಞತಾಪೂರ್ವಕವಾಗಿ ಸ್ಮರಿಸುತ್ತೇವೆ.
ಭಂಡಾರಿವಾರ್ತೆಯು ತನ್ನ ಮೊದಲ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳಲು ಸಜ್ಜಾಗಿರುವ ಈ ಸುಸಂದರ್ಭದಲ್ಲಿ ರವಿ ಬಿದನೂರರು ನಮ್ಮ ಭಂಡಾರಿವಾರ್ತೆಗೆ ಲೇಖನಗಳನ್ನು ಬರೆದು ನಮ್ಮ ಪತ್ರಿಕೆಯ ಅಂದವನ್ನು ಇಮ್ಮಡಿಗೊಳಿಸಬೇಕೆಂದು ಅವರಲ್ಲಿ ವಿನಂತಿಸುತ್ತಾ,ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಅವರಿಗೆ ಭಗವಂತನು ಆಯುರಾರೋಗ್ಯವನ್ನು,ಐಶ್ವರ್ಯಗಳನ್ನು ದಯಪಾಲಿಸಲಿ,ಪತ್ರಿಕೋದ್ಯಮದಲ್ಲಿ ಅಪ್ರತಿಮ ಸಾಧನೆಗಳನ್ನು ಮಾಡಿ ಭಂಡಾರಿ ಸಮಾಜಕ್ಕೂ,ಕುಟುಂಬಕ್ಕೂ ಇನ್ನೂ ಹೆಚ್ಚಿನ ಗೌರವ ತಂದುಕೊಡಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿವಾರ್ತೆ ಹಾರ್ದಿಕವಾಗಿ ಶುಭ ಹಾರೈಸುತ್ತದೆ.
ಮತ್ತೊಮ್ಮೆ ಶ್ರೀ ರವಿ ಬಿದನೂರು ರವರಿಗೆ ಭಂಡಾರಿವಾರ್ತೆ ತಂಡದಿಂದ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.
Advt.
ವರದಿ: ಭಾಸ್ಕರ್ ಭಂಡಾರಿ ಶಿರಾಳಕೊಪ್ಪ.

Leave a Reply

Your email address will not be published. Required fields are marked *