January 18, 2025
Praveen Bhandary Bantwala3

 

ಬಂಟ್ವಾಳ ತಾಲೂಕು ಪಾಣೆಮಂಗಳೂರು ನ್ಯಾಯಿಲ ಶ್ರೀ ಉಮೇಶ್ ಭಂಡಾರಿ ಮತ್ತು ಶ್ರೀಮತಿ ಗುಲಾಬಿ ಉಮೇಶ್ ಭಂಡಾರಿ ದಂಪತಿಯ ಪುತ್ರ ಪ್ರವೀಣ್ ಭಂಡಾರಿಯವರು ತಮ್ಮ ಮೂವತ್ತನೇ ವಷ೯ದ ಹುಟ್ಟು ಹಬ್ಬವನ್ನು ಅಗಸ್ಟ್ 26 ರ ಭಾನುವಾರ ಬಂಧುಮಿತ್ರರು,ಹಿತೈಷಿಗಳ ಸಮ್ಮುಖದಲ್ಲಿ ಸರಳವಾಗಿ ಆಚರಿಸಿಕೊಂಡರು.


ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ಮುಡಿ ಸೇವೆಯಾದ ಹರಕೆ ಮಂಡೆ ಅಂಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇವರು ಭಂಡಾರಿ ಸಮಾಜ ಭಾಂದವರಿಗೆ ಅಗತ್ಯ ಸಂದರ್ಭಗಳಲ್ಲಿ ಸಮಾಜ ಸೇವೆ ಮಾಡುವ ಮುಖಾಂತರ ತಮ್ಮನ್ನು ತಾವು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ.


ಹುಟ್ಟು ಹಬ್ಬದ ಸುಸಂದರ್ಭದಲ್ಲಿ ಭಗವಂತನು ಅವರಿಗೆ ಆರೋಗ್ಯ ,ಆಯುಷ್ಯ , ಐಶ್ವರ್ಯ ,ಸುಖ ಶಾಂತಿಯನ್ನು ಕರುಣಿಸಿ,ನೆಮ್ಮದಿಯ ಬದುಕನ್ನು ದಯಪಾಲಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಶುಭ ಹಾರೈಸುತ್ತದೆ.

-ಭಂಡಾರಿವಾರ್ತೆ.

Leave a Reply

Your email address will not be published. Required fields are marked *