ಪಾತೂರು ಅಂಚೆಯ ಬೊಳಿಂಜ,ಬಾಳೆಪುಣಿ,ನೂಜಿ ಭಂಡಾರಿ ಕುಟುಂಬಸ್ಥರ ನೂತನ ತರವಾಡು ಮನೆಯ ಗೃಹಪ್ರವೇಶ ಮತ್ತು ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಜೂನ್ 21 ರ ಗುರುವಾರ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿಸಲಾಯಿತು.
ಜೂನ್ 14 ರ ಗುರುವಾರ ಗೊನೆ ಮಹೂರ್ತದೊಂದಿಗೆ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡು, ಜೂನ್ 20 ರ ಬುಧವಾರ ಸಂಜೆ ಸಾಮೂಹಿಕ ಪ್ರಾರ್ಥನೆಯೊಂದಿಗೆ ಶಿಲ್ಪಿಗಳು ಮತ್ತು ಮೇಸ್ತ್ರಿಗಳಿಂದ ನೂತನ ತರವಾಡು ಮನೆಯ ಪರಿಗ್ರಹ,ಸ್ಥಳಶುದ್ಧಿ,ವಾಸ್ತು ಹೋಮ,ವಾಸ್ತು ಬಲಿ, ಪ್ರಾಕಾರ ಬಲಿ ಮೊದಲಾದ ಧಾರ್ಮಿಕ ಆಚರಣೆಯೊಂದಿಗೆ ಮೊದಲ್ಗೊಂಡು ಜೂನ್ 21 ರ ಗುರುವಾರ ಬೆಳಿಗ್ಗೆಯಿಂದ ಶ್ರೀ ಗಣಪತಿ ಹೋಮ,
ಶ್ರೀ ನಾಗತಂಬಿಲ, ಬ್ರಹ್ಮಕಲಶ ಪೂಜೆ,ಕಲಶಾಧಿವಾಸ ಹೋಮ ನಡೆದು ಶುಭ ಮುಹೂರ್ತದಲ್ಲಿ ನೂತನ ತರವಾಡು ಮನೆಯ ಗೃಹಪ್ರವೇಶ, ಶ್ರೀ ದೈವಗಳ ಪುನಃ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ಪೂಜಾ ತಂಬಿಲಗಳು, ಶ್ರೀ ಸತ್ಯ ನಾರಾಯಣ ಪೂಜೆಯ ನಂತರ ನೆರೆದಿದ್ದ ಭಕ್ತರಿಗೆ ಪ್ರಸಾದ ಭೋಜನ ವ್ಯವಸ್ಥೆ ಮಾಡಲಾಯಿತು.
ಸಂಜೆ 6 ಕ್ಕೆ ಭಂಡಾರ ತೆಗೆಯುವುದು,ಅನ್ನ ಸಂತರ್ಪಣೆಯೊಂದಿಗೆ “ದೈವಗಳ ನೇಮೋತ್ಸವ” ವಿಜೃಂಭಣೆಯಿಂದ ಸಂಪನ್ನಗೊಂಡಿತು. ನಂಬಿದ ದೈವಗಳ,ಇಷ್ಟ ದೇವಾನುದೇವತೆಗಳ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡು, ದೇವತಾ ಕಾರ್ಯಗಳನ್ನು ಸಾಂಗೋಪಾಂಗವಾಗಿ ನೆರವೇರಿಸಿ ಕೃತಾರ್ಥರಾದ ಕುಟುಂಬಿಕರಿಗೆ ಶ್ರೀ ದೇವರು ಸಕಲಷ್ಠೈಶ್ವರ್ಯಗಳನ್ನೂ ದಯಪಾಲಿಸಿ ಹರಸಲಿ ಎಂಬುದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಯ ಭಕ್ತಿಪೂರ್ವಕ ಶುಭ ಹಾರೈಕೆಗಳು.