November 22, 2024
33

ನಿನ್ನ ಬೆಚ್ಚನೆಯ ಗಭ‍೯ದೊಳಿರಲು ಅಮ್ಮ ;

ಬರಲಿಲ್ಲ ನನಗೆ ಏಕಾಂಗಿ ತನದ ಭಾವನೆ

ನಿನ್ನೂಧರವ ಭೇದಿಸಿ ಭೂಮಿಗೆ ಧುಮುಕಲು

ಬಾಯಿತುಂಬಾ ನಿನ್ನ ಅಮ್ಮ ಎನ್ನಲು ನಾನು ಕಾತರಳಾಗಿದ್ಧೆ.

ಮನೆಯೊಳಗೆ ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಓಡಾಡಬೇಕು,

ಅಪ್ಪನ ಹೆಗಲೇರಬೇಕು, ಅಜ್ಜನ ಕಥೆ  ಕೇಳಬೇಕು

 

ಮನೆ ಮನ ಬೆಳಗೊ ನಂದಾದೀಪವಾಗಬೇಕು

ನಿಮ್ಮೆಲ್ಲರ ಮುದ್ದಿನ ಕಂದಮ್ಮನಾಗಬೇಕು

ಸಾಯೋ ತನಕ ನಿಮ್ಮ ಉಸಿರಾಗಬೇಕು, 

ಎಂಬ ನೂರಾರು ಕನಸುಗಳನ್ನು 

ನಿನ್ನ ಗಭ೯ದೊಳಗಿದ್ಧು ಹೆಣೆದಿದ್ಧೆ.

 

ಆದರೆ ಅಮ್ಮ ಚಿವುಟಿ ಹಾಕಿದಿರಲ್ಲ  ನನ್ನ ಆಸೆಗಳನ್ನು, 

ಕನಸುಗಳನ್ನು….

ನಿಮ್ಮ ಉಸಿರಾಗೋ ನನ್ನ ಉಸಿರನ್ನೇ 

ನಿಲ್ಲಿಸಿಬಿಟ್ಟಿರಲ್ಲ….

“ಅಬಾಷ೯ನ್”ಎಂಬ ರಾಕ್ಷಸನಿಗೆ ನನ್ನ ಬಲಿಕೊಟ್ಟರಲ್ಲ

ಹೆಣ್ಣು ಮಗು ಎಂದು ತಿಳಿದು ನೀವು ಮಾಡಿದಿರಿ “ಭ್ರೂ‌ಣಹತ್ಯೆ”.

ಕೊನೆಗೊ ಗೆದ್ದಿತಲ್ಲ ಅಪ್ನನ ಹಠ,ನಿನ್ನ ತಾತ್ಸಾರ, 

ಅಜ್ಜಿ ಯ ನಿಷ್ಠುರಣೆ

ಹೆಣ್ಣೆಂದರೆ ಮೂಗು ಮುರಿಯುವ ಅಪ್ನನಿಗೇಕೆ

ತಿಳಿಯಲಿಲ್ಲ ತನ್ನನ್ನು ಹೆತ್ತವಳು ಹೆಣ್ಣೆಂದು

ಅಕ್ಕ , ಅಮ್ಮ , ಅತ್ತಿಗೆ, ಹೆಂಡತಿಯಾಗಿ, 

ಹೆಣ್ಣು ಬೇಕಿರುವಾಗ ಮಗಳಾಗಿ ನಾನು ಬರಬಾರದೇನು?

ನನಗೂ ಈ ಭೂಮಿಯಲ್ಲಿ ಬದುಕುವ ಹಕ್ಕಿಲ್ಲ ವೇನು?

ಅಮ್ಮಾ…. ನೀನು ಮನಸ್ಸು ಮಾಡಿದರೆ ನಾನು 

ಬದಕಬಹುದಿತ್ತೇನೋ…..?

ಆದರೆ ಮಗನ ಹಂಬಲದಿಂದ ನನ್ನ  ಬಲಿಕೊಟ್ಟೆಯಲ್ಲ.?.

ಆಗ ನಿನಗೂ ತಿಳಿಯಲಿಲ್ಲವೇ ನೀನು ಒಂದು

         “ಹೆಣ್ಣೆಂದು”?

ರಮ್ಯ ಶ್ರೀ ಪಾಲ್ ಭಂಡಾರಿ, ತೊಕ್ಕೊಟ್ಟು.

4 thoughts on “ಭ್ರೂಣದ ಕನಸು

Leave a Reply

Your email address will not be published. Required fields are marked *