January 18, 2025
PicsArt_09-07-01.58.19
      ತ್ತೀಚಿನ ದಿನಗಳಲ್ಲಿ ಕೆಲಸದ ಒತ್ತಡ,  ಜೀವನ ನಿರ್ವಹಣೆ ಜಂಜಾಟಗಳ ನಡುವೆ ಯಾವುದಾದರೊಂದು ಸಾಮಾಜಿಕ ಕ್ಷೇತ್ರ ಸೇವೆಯಲ್ಲಿ  ತಮ್ಮನ್ನು ತಾವು  ತೊಡಗಿಸಿಕೊಂಡು ಕಾರ್ಯ ನಿರ್ವಹಿಸುವುದು ಎಂದರೆ ಅದೊಂದು ಕ್ಲಿಷ್ಟಕರ ಸಂಗತಿ.  ಅಂತಹುದರಲ್ಲಿ ಸ್ವ ಅಪೇಕ್ಷೆ ಯಿಂದ ತೊಡಗಿಸಿಕೊಂಡು ಕೆಲಸ ಮಾಡಿದರೆಂದರೆ, ಅದೊಂದು ಹೆಮ್ಮೆಯ ವಿಷಯವೇ ಸರಿ. ಜನ ಸೇವೆಯೇ ಜನಾರ್ದನ ಸೇವೆ ಎಂಬ ನಾಣ್ನುಡಿಯಂತೆ ಭಗವಂತನು ತನ್ನ ಸೇವೆಗಾಗಿ ನೇಮಿಸಲ್ಪಟ್ಟ ವ್ಯಕ್ತಿ  “ಸಮಾಜ ಸೇವಕ“. ಈ ಪಟ್ಟವನ್ನು ಪಡೆದುಕೊಂಡು ತನ್ನದೇ ಆದ ಕಾರ್ಯವೈಖರಿಯಲ್ಲಿ  ಸಮರ್ಪಕವಾಗಿ ಕಾರ್ಯ ನಿರ್ವಹಿಸಿ ದಂತಹ  ವ್ಯಕ್ತಿಯೇ ನಮ್ಮ ಅನೂಪ್ ಕುಮಾರ್ ಕಕ್ಕೆಪದವು.
 

 

      ಇವರು ಬಂಟ್ವಾಳ ತಾಲೂಕಿನ ಕಕ್ಕೆಪದವು ಪುಣ್ಕೆದಡಿ ಎಂಬಲ್ಲಿನ ಶ್ರೀ ಗೋಪಾಲ ಭಂಡಾರಿ ಮತ್ತು ಬೇಬಿ  ಭಂಡಾರಿ ಎಂಬ ದಂಪತಿಗಳ ಪುತ್ರ. ಇಬ್ಬರು ಸಹೋದರಿಯರನ್ನು ಹೊಂದಿದ ಇವರು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ತಮ್ಮ ಸ್ವ ಸ್ಥಳದಲ್ಲಿ  ಮುಗಿಸಿ ನಂತರ  ಬೆಳ್ತಂಗಡಿ ತಾಲೂಕು ವೇಣೂರಿನ ಗೋಳಿಯಂಗಡಿಯಲ್ಲಿ  ತಮ್ಮ ತಾಂತ್ರಿಕ ವಿದ್ಯಾಭ್ಯಾಸವನ್ನು ಮುಗಿಸಿದರು . ನಂತರ ಬೆಂಗಳೂರಿನ  ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸಕ್ಕೆ ಸೇರಿ  ತಮ್ಮ ಜೀವನ ನಿರ್ವಹಣೆಗಾಗಿ  ಬೆಂಗಳೂರಿನಲ್ಲಿ ನೆಲೆಯೂರಿದ ಇವರು 2007 ರಿಂದ ಭಂಡಾರಿ ಸಮಾಜ ಸಂಘ ಬೆಂಗಳೂರು ಇದರಲ್ಲಿ ಕಾರ್ಯಕರ್ತರಾಗಿ ದುಡಿಯುತ್ತಾ ಬಂದಿದ್ದಾರೆ. ತಮ್ಮದೇ ಆದ ವಿಶಿಷ್ಟ ಶೈಲಿ, ಚುರುಕಾದ ಲವಲವಿಕೆಯ ಕಾರ್ಯ ವೈಖರಿಯಲ್ಲಿ  ಜನ ಮನಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

      ಭಂಡಾರಿ ಸಮಾಜದ ಪ್ರಮುಖ ಸ್ಥಳಗಳಲ್ಲಿ ನಡೆಯುವಂತಹ ಅನ್ನದಾನ ಕಾರ್ಯಕ್ರಮದಲ್ಲಿ  ಸ್ವಯಂಸೇವಕರಾಗಲು ಇವರು ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದರು. ಅಲ್ಲದೆ ಇವರು ತಮ್ಮ ಕಕ್ಕೆಪದವು ಗ್ರಾಮದಲ್ಲಿ ಜೈ ತುಳುನಾಡು ಎಂಬ ಸಂಘವನ್ನು ಸ್ಥಾಪಿಸಿ ಪ್ರತಿ ವರ್ಷ ಅದರಲ್ಲಿ ವಿಭಿನ್ನ ಸಾಮಾಜಿಕ  ಕಾರ್ಯಕ್ರಮಗಳನ್ನು ನಡೆಸಿ ಸಾರ್ವಜನಿಕ ವಲಯದಲ್ಲಿಯೂ ಸಹ ಗುರುತಿಸಿಕೊಂಡಿದ್ದರು. ದೈಹಿಕ ಶ್ರಮವಲ್ಲದೆ, ಸವಲತ್ತಿನೊಂದಿಗೆ ತಮ್ಮವರನ್ನು ಸಮಾಜ ಸೇವೆಗೆ ಕರೆತರುವುದರಲ್ಲಿ ನಿಸ್ಸೀಮರು. ಇವರು ಮೂರು ವರುಷಗಳ ಹಿಂದೆ ಗೃಹಸ್ಥರಾದ ಬಳಿಕವೂ  ತಮ್ಮ ಸೇವೆಯನ್ನು ಮುಂದುವರೆಸಿದ್ದರು ಭಂಡಾರಿ ಸಮಾಜ ಸೇವಕ ರಾದ ಅನೂಪ್ ಕುಮಾರ್ ರವರು ದುಡಿಯುವ ಕೈಗಳಿಗೆ ಚ್ಯೆತನ್ಯದಾಯಕರಾಗಿದ್ದರು. ಇಂತಹ ಒಬ್ಬ ವ್ಯಕ್ತಿ ಈಗ ನಮ್ಮನ್ನು ಅಗಲಿದ್ದಾರೆ ಎನ್ನುವುದು ವಿಷಾದದ  ಸಂಗತಿ. ಯುವ ಪೀಳಿಗೆಗೆ  ಪ್ರೋತ್ಸಾಹ ನೀಡುವಂತಹ ಇವರ ಎಲ್ಲ ಕಾರ್ಯ ಚಟುವಟಿಕೆಗಳನ್ನು ನಮ್ಮ ಭಂಡಾರಿ ವಾರ್ತೆ ತಂಡ ಶ್ಲಾಘಿಸುತ್ತದೆ.

 
ರಾಜಶೇಖರ್ ದಾಸರಹಳ್ಳಿ

4 thoughts on “ಭಂಡಾರಿ ಸಮಾಜ ಸೇವಕ – ದಿ! ಅನೂಪ್ ಭಂಡಾರಿ

  1. ಒಳ್ಳೆಯವರು ಬಹಳ ದಿನ ಬದುಕುವುದಿಲ್ಲ ಎನ್ನುವುದಕ್ಕೆ ಅನೂಪ್ ಇನ್ನೊಂದು ನಿದರ್ಶನ. ಅನೂಪ್ ಗೆ ಅನೂಪನೇ ಸಾಟಿ. ನಾಗೇಶ್ವರನ ಸೇವೆಯಲ್ಲಿ ಅವರ ನಂಬಿಕೆ ಮತ್ತು ಬದ್ಧತೆಯಲ್ಲಿ ಎರಡು ಮಾತಿಲ್ಲ. ಅನೂಪ್ ನ ಹೆಸರು ಎಲ್ಲಾ ಭಂಡಾರಿ ಸ್ವಯಂ ಸೇವಕರಿಗೆ ಸ್ಪೂರ್ತಿ ಯಾಗಲಿ. ಮತ್ತೆ ನಮ್ಮ ಭಂಡಾರಿ ಬಳಗದಲ್ಲಿ ಹುಟ್ಟಿ ನಾಗೇಶ್ವರನ ಸೇವೆಗೆ ಓಡೋಡಿ ಬಾ ಅನೂಪ್.

  2. ಅನೂಪ್ ಭಂಡಾರಿಯವರ ಸೇವಾ ಮನೋಭಾವ ನಮಗೆಲ್ಲ ಸ್ಪೂರ್ತಿಯಾಗಲಿ.ನಮ್ಮ ಸಮಾಜ ಸೇವಾ ಕಾರ್ಯಗಳಲ್ಲಿ ಅವರನ್ನು ಸದಾ ಸ್ಮರಿಸೋಣ….

  3. ಅನೂಪ್ ಭಂಡಾರಿ ನಂತಹ ಸಮಾಜ ಸೇವಕ ನಮ್ಮ ಭಂಡಾರಿ ಸಮಾಜದಲ್ಲಿ ಇನ್ನೊಬ್ಬ ಸಿಗಲಿಕ್ಕಿಲ್ಲ

  4. Dear All,

    A tiny stint, we did come closer, thanks to ” Bhandary Samaja” , i was stunned with Mr. Anoop’s application of himself, while on executing the section of his choice & assigned, on community service.
    Being not so familiar with activities on our ” Varshikotsava” at Kachhuru, he was of great help and guide to me.
    My entire family respects him for his support to us.

    He is not with us today, its been almost 18 months. We miss you dear “Anoop”.

Leave a Reply

Your email address will not be published. Required fields are marked *