ಕಪ್ಪಕ್ಕಿಯ ಅನ್ನ ಡಯಾಬಿಟಿಸ್ ಕಾಯಿಲೆ ಇರುವವರಿಗೆ ಬಹಳ ಒಳ್ಳೆಯದು
ಸಕ್ಕರೆ ಕಾಯಿಲೆ ಇರುವವರು ಕಪ್ಪು ಅಕ್ಕಿ ಅನ್ನ ತಿನ್ನುವುದರಿಂದ ಲಾಭ ಪಡೆದುಕೊಳ್ಳ ಬಹುದು. ಅದು ಹೇಗೆಂದು ವೈದ್ಯರು ತಿಳಿಸಿಕೊಡುತ್ತಾರೆ ನೋಡಿ.
ಮನುಷ್ಯ ಎಷ್ಟೇ ಶ್ರೀಮಂತನಾದರೂ ಹೊಟ್ಟೆಗೆ ತಿನ್ನುವುದು ಅನ್ನ. ಶ್ರೀಮಂತನಾಗುತ್ತಾ ಸ್ಟೇಟಸ್ ಚೇಂಜ್ ಆಗುತ್ತದೆ ಹೊರತು ಹೊಟ್ಟೆ ಹಸಿವು ಬೇರೆ ರೂಪ ಪಡೆದುಕೊಳ್ಳುವುದಿಲ್ಲ. ತಿನ್ನುವ ಅನ್ನ ತಯಾರು ಮಾಡುವ ಅಕ್ಕಿಯ ಗುಣಮಟ್ಟ ಬದಲಾವಣೆಯೊಂದಿಗೆ ಮಾರುಕಟ್ಟೆಯಲ್ಲಿ ಸಿಗುವ ಬೇರೆ ಬೇರೆ ಅಕ್ಕಿ ಕೊಂಡುಕೊಳ್ಳಬಹುದು.
ಆದರೆ ಎಷ್ಟೇ ಗುಣಮಟ್ಟದ ಅಕ್ಕಿ ತಂದು ತಿಂದರೂ ಸಹ ಅದನ್ನು ಅರಗಿಸಿಕೊಳ್ಳುವ ಸರಿ ಯಾದ ಜೀರ್ಣಶಕ್ತಿ ಪಡೆದಿರಬೇಕು ಅಷ್ಟೇ. ಅನ್ನದ ಬಗ್ಗೆ ಏಕೆ ಇಷ್ಟು ಹೇಳುತ್ತಿದ್ದೇವೆ ಎಂದರೆ ಇಂದು ಬಹುತೇಕ ಜನರ ಒಂದು ನಂಬಿಕೆ ಎಂದರೆ ಅದು ಅನ್ನ ತಿನ್ನುವುದರಿಂದ ಶುಗರ್ ಬರುತ್ತದೆ ಮತ್ತು ಹೆಚ್ಚಾಗುತ್ತದೆ ಎನ್ನುವುದು. ಹಾಗಾಗಿ ನಾವು ಈ ಲೇಖನದಲ್ಲಿ ಕಪ್ಪು ಅಕ್ಕಿಯ ಅನ್ನದ ಬಗ್ಗೆ ಮಾತನಾಡಲು ಹೊರಟಿದ್ದೇವೆ….
ಕಪ್ಪು ಅಕ್ಕಿ
ಕಪ್ಪು ಅಕ್ಕಿಯನ್ನು ನೇರಳೆ ಅಕ್ಕಿ ಎಂದು ಕೂಡ ಕರೆಯುತ್ತಾರೆ. ಏಕೆಂದರೆ ಇದು ಅನ್ನ ತಯಾರಾದ ಮೇಲೆ ನೇರಳೆ ಬಣ್ಣದಲ್ಲಿ ಕಾಣುತ್ತದೆ. ಇದು ನಿಮ್ಮಮಧುಮೇಹ ಸಮಸ್ಯೆಗೆ ಒಳ್ಳೆಯದು ಎಂದು ತಿಳಿದು ಬಂದಿದೆ. ಆರೋಗ್ಯ ತಜ್ಞರಾದ ಮತ್ತು ಫಿಸಿಕೋ ಡಯಟ್ ಕ್ಲಿನಿಕ್ ಸಂಸ್ಥಾಪಕರಾದ ವಿ ಚಾ ಇದನ್ನು ಸಂಪೂರ್ಣವಾಗಿ ಈ ಕೆಳಗಿನಂತೆ ವಿವರಿಸಿದ್ದಾರೆ.
ಟೈಪ್ 2 ಡಯಾಬಿಟಿಸ್ ಪರಿಹಾರವಾಗುತ್ತದೆ
- ಕಪ್ಪು ಅಕ್ಕಿ ತನ್ನಲ್ಲಿ ಮೆಗ್ನೀಷಿಯಂ ಮತ್ತು ನಾರಿನ ಅಂಶದ ಪ್ರಮಾಣವನ್ನು ಹೆಚ್ಚಾಗಿ ಒಳ ಗೊಂ ಡಿದೆ. ಇದು ನಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುವಲ್ಲಿ ಕೆಲಸ ಮಾಡುತ್ತದೆ ಮತ್ತು ನಮ್ಮ ದೇಹದಲ್ಲಿರುವ ಇನ್ಸುಲಿನ್ ಸರಿಯಾಗಿ ಉಪಯೋಗವಾಗುವಂತೆ ನೋಡಿಕೊಳ್ಳುತ್ತದೆ.
- ಅಷ್ಟೇ ಅಲ್ಲದೆ ಇದರಲ್ಲಿ ವಿಟಮಿನ್ ಅಂಶಗಳು, ಪ್ರೋಟೀನ್ ಮತ್ತು ಖನಿಜಾಂಶಗಳು ಹೆಚ್ಚಿಗೆ ಇರಲಿದ್ದು, ಬಿಳಿ ಬಣ್ಣದ ಅಕ್ಕಿಗೆ ಹೋಲಿಸಿದರೆ ಒಳ್ಳೆಯದು ಎಂದು ತೋರುತ್ತದೆ. ಅಷ್ಟೇ ಅಲ್ಲದೆ ಹೃದಯದ ಕಾಯಿಲೆಗಳನ್ನು ಇದು ದೂರ ಮಾಡುವುದರಿಂದ ಮಧುಮೇಹ ಸಮಸ್ಯೆ ಇರುವವರಿಗೆ ಇದು ಫಲದಾಯಕವಾಗಿದೆ.
ಬೊಜ್ಜು ನಿವಾರಣೆಯಲ್ಲಿ ಸಹಕಾರಿ
- ತುಂಬಾ ಜನರಿಗೆ ಇಂದು ಬೊಜ್ಜಿನ ಸಮಸ್ಯೆ ವಿಪರೀತವಾಗಿ ಕಾಣುತ್ತಿದೆ. ಅಂತಹವರು ಕಪ್ಪು ಅಕ್ಕಿಯಿಂದ ತಯಾರು ಮಾಡುವ ಅನ್ನವನ್ನು ಸೇವನೆ ಮಾಡುವುದರಿಂದ ಅವರ ದೇಹಕ್ಕೆ ನಾರಿನ ಅಂಶ ಮತ್ತು ಪ್ರೋಟಿನ್ ಅಂಶ ಹೆಚ್ಚಾಗಿ ಸಿಗುತ್ತದೆ.
- ಇದರಲ್ಲಿ ಕಾರ್ಬೋಹೈಡ್ರೇಟ್ ತುಂಬಾ ಕಡಿಮೆ ಇದೆ ಎಂದು ಹೇಳಬಹುದು. ನಿಮ್ಮ ಹೊಟ್ಟೆ ಹಸಿವಿನ ನಿಯಂತ್ರಣದಲ್ಲಿ ಇದು ಸಹಾಯ ಮಾಡುವ ಜೊತೆಗೆ ನಿಮ್ಮನ್ನು ದೀರ್ಘಕಾಲ ಹೊಟ್ಟೆ ತುಂಬುವಂತೆ ಮಾಡುತ್ತದೆ. ಜೊತೆಗೆ ಬೊಜ್ಜಿನ ಸಮಸ್ಯೆಯ ವಿರುದ್ಧ ನಿಮಗೆ ರಕ್ಷಣೆ ಸಹ ನೀಡುತ್ತದೆ.
ಉರಿಯೂತ ನಿವಾರಣೆ ಮಾಡುತ್ತದೆ
- ಆಂಟಿ ಆಕ್ಸಿಡೆಂಟ್ ಪ್ರಮಾಣ ಹೆಚ್ಚಾಗಿರುವ ಕಪ್ಪು ಅಕ್ಕಿಯಿಂದ ತಯಾರು ಮಾಡುವ ಅನ್ನವನ್ನು ತಿನ್ನುವುದರಿಂದ ನಮ್ಮ ದೇಹದಲ್ಲಿ ಫ್ರೀ ರಾಡಿಕಲ್ ಅಂಶಗಳ ವಿರುದ್ಧ ಇದು ಕೆಲಸ ಮಾಡುತ್ತದೆ ಮತ್ತು ಸಕ್ಕರೆ ಕಾಯಿಲೆ ಇರುವವರಿಗೆದೇಹದಲ್ಲಿ ಜೀವಕೋಶಗಳ ಹಾನಿ ಉಂಟಾಗದಂತೆ ತಡೆಯುತ್ತದೆ.
- ಇದರಲ್ಲಿ ನಾರಿನ ಅಂಶ ಅಪಾರ ಪ್ರಮಾಣದಲ್ಲಿ ಕಂಡುಬಂದಿದ್ದು, ಆಹಾರ ಸೇವನೆ ಮಾಡಿದ ತಕ್ಷಣ ರಕ್ತದಲ್ಲಿ ಗ್ಲುಕೋಸ್ ಇದ್ದಕ್ಕಿದ್ದಂತೆ ಏರಿಕೆಯಾಗುವ ಸಾಧ್ಯತೆ ಇರುವುದಿಲ್ಲ.
ಕೊನೆಯ ಮಾತು
- ವೈದ್ಯರಾದ ವಿ ಚಾ ಹೇಳುವ ಹಾಗೆ ಸಕ್ಕರೆ ಕಾಯಿಲೆ ಇರುವವರಿಗೆ ಆಹಾರದ ಡಯಟ್ ಬಹಳ ಮುಖ್ಯ. ತಾವು ತಿನ್ನುವ ಆಹಾರದಲ್ಲಿ ದೇಹಕ್ಕೆ ಸಮರ್ಪಕವಾದ ಪ್ರಮಾಣದಲ್ಲಿ ಬೇಕಾಗಿರುವಂತಹ ಎಲ್ಲಾ ಬಗೆಯ ಪ್ರೋಟೀನ್, ಆರೋಗ್ಯಕರ ಕೊಬ್ಬು, ಮತ್ತು ವಿಟಮಿನ್ ಅಂಶಗಳು ಜೊತೆಗೆ ಪೌಷ್ಟಿ ಕಾಂಶಗಳು ಸಿಗುವಂತೆ ನೋಡಿಕೊಂಡು ಆಹಾರ ಸೇವನೆ ಮಾಡಬೇಕು.
- ಕಪ್ಪು ಅಕ್ಕಿಯನ್ನು ನಿಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿಕೊಂಡರೆ ಗ್ಲೈಸಿಮಿಕ್ ಸೂಚ್ಯಂಕ ನಿಯಂತ್ರ ಣಕ್ಕೆ ಬರುತ್ತದೆ ಮತ್ತು ಸಕ್ಕರೆ ಪ್ರಮಾಣ ಅತ್ಯುತ್ತಮವಾಗಿ ನಿರ್ವಹಣೆ ಆಗುತ್ತದೆ.
ಸಂಗ್ರಹ : ಎಸ್.ಬಿ ನೆಲ್ಯಾಡಿ
ಮೂಲ: ವಿ ಕೆ