ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟಿ ಬಿ.ವಿ.ರಾಧ ಅವರು ಬಾನುವಾರ ಬೆಳಗಿನ ಜಾವ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 69 ವಯಸ್ಸಾಗಿದ್ದ ಬಿ.ವಿ.ರಾಧರವರು ಅನಾರೋಗ್ಯದಿಂದ ಬಳಲುತ್ತಿದ್ದು ಶನಿವಾರ ಮಧ್ಯಾಹ್ನ 3 ಘಂಟೆಗೆ ಕಲ್ಯಾಣನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಇಂದು ಬೆಳಗಿನ ಜಾವ 3:30 ರ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೆ ಹೃದಯಾಘಾತ ಕೊನೆಯುಸಿರೆಳೆದರು.
ಆಗಷ್ಟ್ 1948 ರಲ್ಲಿ ಬಡ ರೈತ ಕಟುಂಬದಲ್ಲಿ ಜನಿಸಿದ ಬಿ.ವಿ.ರಾಧರವರು, 1964 ರಲ್ಲಿ ಕನ್ನಡದ “ನವಕೋಟಿ ನಾರಯಣ” ಎಂಬ ಚಲನಚಿತ್ರದಲ್ಲಿ ಪೊಷಕ ನಟಿಯಾಗಿ ನಟಿಸುವ ಮೂಲಕ ಚಿತ್ರರಂಗಕ್ಕೆ ಪಾದರ್ಪಣೆಗೈದರು. ಇವರು ಕನ್ನಡ, ತೆಲುಗು, ತಮಿಳು, ಮಲಯಾಳಂ, ತುಳು ಭಾಷೆಗಳಲ್ಲಿ 300 ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ.
ಬಿ.ವಿ.ರಾಧರವರ ಪತಿ ಹಿರಿಯ ನಟ ಹಾಗೂ ನಿರ್ದೇಶಕ ಕೆ.ಎಸ್.ಎಲ್.ಸ್ವಾಮಿ ಯವರು 20 ಅಕ್ಟೋಬರ್ 2015 ರಂದು ನಿಧನರಾಗಿದ್ದರು. ಇವರಿಬ್ಬರು ದೇಹದಾನಕ್ಕೆ ಇಚ್ಛಿಸಿದ್ದರು. ಇವರಿಚ್ಛೆಯಂತೆ ರಾಮಯ್ಯ ಆಸ್ಪತ್ರೆಗೆ ದೇಹದಾನ ಮಾಡಲಾಯಿತು.
- ಭಂಡಾರಿ ವಾರ್ತೆ