January 18, 2025
Bhandary Kitchen copy

ಬೇಕಾಗುವ ಸಾಮಾಗ್ರಿಗಳು
ಕ್ಯಾರೆಟ್-1/4 ಕಿ ಲೋ
ಹಾಲು-1/2ಲೀಟರ್
ತುಪ್ಪ- 100ಗ್ರಾಂ
ಸಕ್ಕರೆ-100ಗ್ರಾಂ
ದ್ರಾಕ್ಷಿ,ಗೋಡಂಬಿ,ಪಿಸ್ತಾ,ಬಾದಾಮಿ-1ಕಪ್

ಮಾಡುವ ವಿದಾನ:
ಕ್ಯಾರಟ್ ನ್ನು ಚೆನ್ನಾಗಿ ತೊಳೆದು ತುರಿದುಕೊಳ್ಳಬೇಕು. ಒಂದು ಬಾಣಲೆಗೆ ಸ್ವಲ್ಪ ತುಪ್ಪ ಹಾಕಿ ಅದಕ್ಕೆ ಗೋಡಂಬಿ,ಬಾದಾಮಿ ,ತುರಿದ ಕ್ಯಾರೆಟ್ ಮತ್ತು ಸ್ವಲ್ಪ ಹಾಲು  ಹಾಕಿ  ಬೇಯಿಸಿಕೊಳ್ಳಬೇಕು. ಬೇಯಿಸಿದ ಕ್ಯಾರೆಟ್ ನ್ನು ರುಬ್ಬಿಕೊಳ್ಳಬೇಕು. ಒಂದು ಪಾತ್ರೆಗೆ ತುಪ್ಪ ಹಾಕಿ ಅದು ಬಿಸಿಯಾದ ನಂತರ ಅದಕ್ಕೆ ರುಬ್ಬಿದ ಕ್ಯಾರೆಟ್,ಹಾಲು ಹಾಗೂ ಸಕ್ಕರೆ ಹಾಕಿ ಚೆನ್ನಾಗಿ ಕುದಿಸಬೇಕು, ಕೊನೆಯಲ್ಲಿ ದ್ರಾಕ್ಷಿ, ಗೋಂಡಂಬಿ,ಬಾದಮಿ.ಪಿಸ್ತಾವನ್ನು ತುಪ್ಪದಲ್ಲಿ ಹುರಿದು ಕುದಿಸಿದ ಪಾಯಸಕ್ಕೆ ಹಾಕಿದರೆ, ಕ್ಯಾರೆಟ್ ಪಾಯಸ ಸವಿಯಲು ಸಿದ್ದ.

ಪ್ರತಿಭಾ ಭಂಡಾರಿ ಹರಿಹರಪುರ

Leave a Reply

Your email address will not be published. Required fields are marked *