ಧ್ಯಾನ-11 ಪರಸ್ಪರ ಅಗತ್ಯಗಳನ್ನು ಆಧರಿಸಿದ ಸಂಬಂಧ ಯಾವಾಗಲೂ ಘರ್ಷಣೆಯನ್ನೇ ತರುತ್ತದೆ. ನಾವು ಪರಸ್ಪರ ಎಷ್ಟೇ ಅವಲಂಬಿತರಾಗಿದ್ದರೂ...
ಆಧ್ಯಾತ್ಮ
ಧ್ಯಾನ – 10 ನಿಮ್ಮ ಧರ್ಮ, ದೇವರು ಎಲ್ಲವೂ ಸತ್ಯದಿಂದ ತಪ್ಪಿಸಿಕೊಳ್ಳಲೆಂದೇ ಇರುವ ಮಾರ್ಗಗಳು. ಧರ್ಮವೆಂಬುದು ಇಲ್ಲ. ಕ್ರೌರ್ಯದಿಂದ,...
( ಧ್ಯಾನ-9) ನಾನು ಒಳ್ಳೆಯವನಾಗಬೇಕೆಂಬ ಉದ್ದೇಶವಿದ್ದರೆ ಅದರಿಂದ ಒಳಿತು ಹುಟ್ಟುತ್ತದೆಯೇ? ಒಳ್ಳೆಯವನಾಗಬೇಕೆಂಬ ಅಪೇಕ್ಷೆಯೇ ಒಂದು...
ಧ್ಯಾನ-8 ನಮ್ಮ ಅಧಿಕಾರ ,ಸ್ಥಾನ, ಮಾನ,ಸಂಪತ್ತು, ಆಸೆಗಳ ಪೂರೈಕೆಗಾಗಿ ನಡೆಸುವ ಹೋರಾಟ ಇತ್ಯಾದಿಗಳೆಲ್ಲ “ನಾನು” ಎಂಬುದರ...
ಜಿಡ್ಡು ಪ್ರವಚನ ಧ್ಯಾನ -7 ನಮಗೆ ತಿಳಿದಿರುವಂತೆ ನಮ್ಮ ಬದುಕು ಏನಾದರೂ ‘ಆಗುವ ‘ಕ್ರಿಯೆಯೇ ಆಗಿರುತ್ತದೆ....
(ಧ್ಯಾನ– 4) ಒಂದು ಪರಂಪರೆಯನ್ನು ಕಡಿದುಕೊಂಡು ಇನ್ನೊಂದು ಪರಂಪರೆಗೆ ಬದ್ಧರಾಗುವುದು, ಒಬ್ಬ ನಾಯಕನನ್ನು ಬಿಟ್ಟು ಇನ್ನೊಬ್ಬನನ್ನು ಹಿಂಬಾಲಿಸುವುದು ಇವೆಲ್ಲ ತೋರಿಕೆಯ ಭಂಗಿಗಳು. ಅಧಿಕಾರದ (ಪೂರ್ವಗ್ರಹ) ಬಗ್ಗೆ ಇಡಿಯಾದ ಎಚ್ಚರವನ್ನು ಪಡೆಯಬೇಕೆಂದಿದ್ದರೆ,ಅಧಿಕಾರ ನಮ್ಮೊಳಗೆ ಹೇಗೆ ಇದೆ ಎಂದು ಅರಿಯಬೇಕೆಂದಿದ್ದರೆ, ಖಚಿತತೆಯ ಆಸೆಯನ್ನು ಮೀರಬೇಕೆಂದಿದ್ದರೆ,ಆಗ ನಮಗೆ ಅಗಾಧವಾದ ಎಚ್ಚರ ಮತ್ತು ಒಳನೋಟ ಬೇಕಾಗುತ್ತದೆ. ಇದು ಸಾಧ್ಯವಾಗಬೇಕಾದರೆ ನಾವು ಇನ್ನು ಎಂದೋ,ನಮ್ಮ ಬದುಕಿನ ಕೊನೆಗೆ ಅಲ್ಲ,’ ಈಗಲೇ, ಇಂದೇ,ಮೊದಲಿಗೇ ಬಿಡುಗಡೆಯನ್ನು ಪಡೆಯಬೇಕಾಗುತ್ತದೆ‘. ನಾವು ಮನಸ್ಸಿನ ತುಂಬ ಆಸೆಗಳನ್ನಿಟ್ಟುಕೊಂಡು, ಭಯಗಳನ್ನು ತುಂಬಿಕೊಂಡು ಕೇಳುತ್ತೇವೆ. ಬೆಳಕು ಕಂಡಿರುವ ವ್ಯಕ್ತಿ ಯಾರು ಎಂದು ಹುಡುಕುತ್ತೇವೆ. ಅಂಥವರಿಂದ ಬೆಳಕು ಪಡೆಯಲು ಬಯಸುತ್ತೇವೆ. ಆದರೆ ಅರ್ಥಮಾಡಿಕೊಳ್ಳುವುದಕ್ಕೆ ಬೇಕಾದ ನಿಷ್ಕ್ರಿಯ ಎಚ್ಚರ ನಮ್ಮಲ್ಲಿರುವುದಿಲ್ಲ. ಮುಕ್ತನಾಗಿರುವ ವ್ಯಕ್ತಿ ನಮ್ಮ ಆಸೆಗಳನ್ನು ಪೂರೈಸುವಂತೆ ಕಂಡರೆ ಆತನನ್ನು ಒಪ್ಪಿಕೊಳ್ಳುತ್ತೇವೆ. ಇಲ್ಲದಿದ್ದರೆ ಮತ್ತೊಬ್ಬ ವ್ಯಕ್ತಿ ಎಲ್ಲಿದ್ದಾನೆ ಎಂದು ಹುಡುಕಲು ತೊಡಗುತ್ತೇವೆ. ನಮ್ಮಲ್ಲಿ ಬಹಳ ಜನಕ್ಕೆ ಬೇರೆ ಬೇರೆ ಹಂತಗಳ ತೃಪ್ತಿ ಬೇಕಾಗಿರುತ್ತದೆ. ಮುಕ್ತಾತ್ಮನನ್ನು ಹುಡುಕುವುದು ಕಂಡುಕೊಳ್ಳುವುದು ಮುಖ್ಯವಲ್ಲ. ನಿಮ್ಮನ್ನು ನೀವು ಅರ್ಥಮಾಡಿಕೊಳ್ಳುವುದೇ ಮುಖ್ಯವಾದದ್ದು.ಈ ಲೋಕದ ಅಥವಾ ಪರಲೋಕದ ಯಾವ ಅಧಿಕಾರವೂ ನಿಮಗೆ ನಿಮ್ಮ ಬಗ್ಗೆ ತಿಳಿವಳಿಕೆಯನ್ನು ಕೊಡಲಾರದು. ನಿಮ್ಮ ಬಗ್ಗೆ ನೀವು ತಿಳಿಯದಿದ್ದರೆ ಮೌಢ್ಯದಿಂದ ,ದುಃಖದಿಂದ ಬಿಡುಗಡೆಯೂ ದೊರೆಯಲಾರದು. ನಮ್ಮನ್ನು ನಾವು ತಿಳಿಯುವುದು ಬಹಳ ಶ್ರಮದ ಕೆಲಸ. ನಮಗೆ ಯಾವಾಗಲೂ ಸುಲಭವಾದ ದಾರಿ ಬೇಕು, ಭ್ರಮೆಯ ದಾರಿ ಬೇಕು.ಅದ್ದರಿಂದ ನಮ್ಮ ಬದುಕಿಗೆ ಒಂದು ವಿನ್ಯಾಸವನ್ನು, ಆಕಾರವನ್ನು ಒದಗಿಸಿಕೊಡುವ ಅಧಿಕಾರವನ್ನು (ಪದ್ಧತಿಯ ಹಿಡಿತವಿರುವ ಮನಸ್ಸು) ಸೃಷ್ಟಿಸಿಕೊಳ್ಳುತ್ತೇವೆ. ಈ ಅಧಿಕಾರ ಸಾಮೂಹಿಕ ಸ್ವರೂಪದ್ದಾಗಿರಬಹುದು, ರಾಜ್ಯಾಧಿಕಾರದಂತೆ, ವೈಯುಕ್ತಿಕ ಸ್ವರೂಪದ್ದಾಗಿರಬಹುದು. ಒಡೆಯ, ರಕ್ಷಕ, ಗುರು, ಎಂಬಂತೆ. ಯಾವುದೇ ಬಗೆಯ ಅಧಿಕಾರ ನಮ್ಮನ್ನು ಕುರುಡು ಮಾಡುತ್ತದೆ, ಆಲೋಚನೆ ಮಾಡುವುದನ್ನು ತಪ್ಪಿಸುತ್ತದೆ. ನಮ್ಮಲ್ಲಿ ಬಹುಪಾಲು ಜನಕ್ಕೆ ಆಲೋಚನೆ ಬಹಳ ನೋವಿನ ಕೆಲಸವಾದ್ದರಿಂದ ನಮ್ಮನ್ನು ನಾವು ಸುಮ್ಮನೆ ಅಧಿಕಾರಕ್ಕೆ ಒಪ್ಪಿಸಿಕೊಂಡು ಬಿಡುತ್ತೇವೆ. ಸ್ವಯಂ ಅರಿವಿಲ್ಲದವನಲ್ಲಿ ಒಪ್ಪಿಸಿಕೊಳ್ಳುವುದರಿಂದ, ಅಧಿಕಾರ ಹೊಂದಿರುವವನನ್ನು ಮಾತ್ರವಲ್ಲದೆ ಹಿಂಬಾಲಕರನ್ನು ಭ್ರಷ್ಟಗೊಳಿಸುತ್ತದೆ. ಜ್ಞಾನ ಮತ್ತು ಅನುಭವದ ಅಧಿಕಾರ, ಅದು ಒಡೆಯನ್ನಲ್ಲಿರಲಿ, ಒಡೆಯನ ಪ್ರತಿನಿಧಿಯಲ್ಲಿರಲಿ, ಗುರುವಿನಲ್ಲಿ, ಅಥವಾ ಪೂಜಾರಿಯಲ್ಲಿರಲಿ, ವಿಕೃತವಾದದ್ದು. ನಿಮ್ಮ ನಿಮ್ಮ ಸ್ವಂತ ಬದುಕು, ನಿಮ್ಮ ಸ್ವಂತ ಅರಿವು ಇಲ್ಲಿ ಮುಖ್ಯ. ಅಧಿಕಾರಯುತ ವ್ಯಕ್ತಿಗಳು ನಿಮ್ಮನ್ನು ಅರಿವಿನಿಂದ ದೂರ ದೂರ ಒಯ್ಯುತ್ತಾರೆ ನಿಮ್ಮನ್ನು… ನಾವು ಬೇರೆಯವರನ್ನು ಒಪ್ಪಿಕೊಳುವುದ ಏಕೆ ? ಇನ್ನೊಬ್ಬರ ಅಧಿಕಾರವನ್ನು, ಜ್ಞಾನವನ್ನು ಒಪ್ಪಿ ಹಿಂಬಾಲಿಸುತ್ತೇವೆ, ಆನಂತರ ಅದರ ಬಗ್ಗೆ ಅನುಮಾನಪಡುತ್ತೇವೆ. ಅಧಿಕಾರಕ್ಕಾಗಿ ನಡೆಸುವ ಹುಡುಕಾಟದ ಜೊತೆಜೊತೆಗೆ ಭ್ರಮನಿರಸನವೋ ಆಗುತ್ತಿರುತ್ತದೆ. ಇದು ಬಹಳ ನೋವಿನ ಅನುಭವ. ನಾವು ಒಮ್ಮೆ ಒಪ್ಪಿಕೊಂಡ ಅಧಿಕಾರವನ್ನು, ನಾಯಕನನ್ನು, ಗುರುವನ್ನು ನಿಂದಿಸುತ್ತೇವೆ, ಆದರೆ ನಮ್ಮೊಳಗೆ ಇದ್ದು ನಮ್ಮ ವರ್ತನೆಗೆ ಕಾರಣವಾಗಿರುವ ಅಧಿಕಾರದ ಹಂಬಲವನ್ನು ಪರಿಶೀಲಿಸಿಕೊಳ್ಳುವುದೇ ಇಲ್ಲ. ಈ ಹಂಬಲವನ್ನು ಒಮ್ಮೆ ಅರ್ಥಮಾಡಿಕೊಂಡರೆ ಸಂಶಯದ ಮಹತ್ವ ನಮಗೆ ತಿಳಿಯುತ್ತದೆ. ಹಳೆಯ ಜ್ಞಾನವೆಂಬ ಅಧಿಕಾರ ಅಥವಾ ಮೌಢ್ಯದಿಂದ ಮುಕ್ತವಾಗಿ ನಮ್ಮನ್ನು ನಾವು ಕಂಡುಕೊಂಡಾಗ ದುಃಖದಿಂದ ಬಿಡುಗಡೆ ದೊರೆಯುತ್ತದೆ… (ಮುಂದುವರಿಯುತ್ತದೆ) ಮೂಲ: ಜಿಡ್ಡು ಕೃಷ್ಣಮೂರ್ತಿ ಪುಸ್ತಕಗಳು...
ತುಲುನಾಡಲ್ಲಿ “ನಾಗಗ್ ತನು ಮಯಿಪರೆ ಉಂಡು” (ನಾಗನ ಕಲ್ಲಿಗೆ ತಂಪು ಅಭಿಷೇಕ ಮಾಡಬೇಕು)ಅಂತಾರೆ ಕೆಲವರು. ಇನ್ನು ಕೆಲವರು“ನಾಗನಿಗೆ ಪೇರ್...
ಸವ್ಯಕಾಲಸರ್ಪದೋಷ ಮತ್ತು ಅಪಸವ್ಯಕಾಲಸರ್ಪದೋಷ ಅಗ್ರಭಾಗದಲ್ಲಿ ರಾಹು, ಅಧೋ ಭಾಗದಲ್ಲಿ ಕೇತುವಿದ್ದು, ಮಧ್ಯದಲ್ಲಿ 6 ಗ್ರಹಗಳು ಇದ್ದರೆ ಅದು ಸವ್ಯಸರ್ಪಕಾಲ...
ಜಿಡ್ಡು ಪ್ರವಚನ (ಧ್ಯಾನ-3) ವಿವೇಕವೆಂದರೆ ಏನು?, ಎಂಬುದನ್ನು ಪ್ರತಿಯೊಬ್ಬರೂ ತಾವೇ ಕಂಡುಕೊಳ್ಳಬೇಕು. ವಿವೇಕವೆಂಬುದು ಜ್ಞಾನದ ಫಲಿತಾಂಶವಲ್ಲ. ಜ್ಞಾನ ಮತ್ತು ವಿವೇಕ ಒಟ್ಟಿಗೆ ಇರುವುದು ಸಾಧ್ಯವಿಲ್ಲತನ್ನನ್ನು ತಾನು ತಿಳಿದ ಪ್ರಬುದ್ಧತೆಯಿಂದ ವಿವೇಕ ಬರುತ್ತದೆ. ತನ್ನನ್ನು ತಾನು ತಿಳಿಯದ ವ್ಯವಸ್ಥೆಯು ಇರುವುದಿಲ್ಲ. ವ್ಯವಸ್ಥೆ ಇಲ್ಲವಾದಾಗ ಒಳಿತೂ ಇರುವುದಿಲ್ಲ. ಸ್ವತಂತ್ರರಾಗಬೇಕಾದರೆ ಅಧಿಕಾರವೆಂದರೆ ಏನು ಎಂದು ಚೆನ್ನಾಗಿ ಪರಿಶೀಲನೆ ಮಾಡಬೇಕು. ಅಧಿಕಾರವೆಂಬ ಅಸಹ್ಯವನ್ನು ಪೂರ್ತಿಯಾಗಿ ಸುಲಿದುಹಾಕಿ ಅದರ ಅಸ್ಥಿಪಂಜರದ ಸ್ವರೂಪ ಹೇಗಿದೆ ಎಂದು ನೋಡಬೇಕು. ಹೀಗೆ ಮಾಡುವುದಕ್ಕೆ ದೈಹಿಕ ಶಕ್ತಿಯೂ ಬೇಕು, ಮಾನಸಿಕ ಶಕ್ತಿಯೂ ಬೇಕು. ಆದರೆ ನಿಮ್ಮೊಳಗೆ ಸಂಘರ್ಷವಿರುವಾಗ, ಶಕ್ತಿ ನಷ್ಟವಾಗುತ್ತಿರುತ್ತದೆ, ನಾಶವಾಗುತ್ತಿರುತ್ತದೆ…ಸಂಘರ್ಷವೆಂದರೇನು,ಹೇಗಿದೆ,ಯಾಕಿದೆ ಎಂದು ಇಡಿಯಾಗಿ ತಿಳಿದುಕೊಂಡಾಗ ಸಂಘರ್ಷಕೊನೆಗೊಳ್ಳುತ್ತದೆ.ಅನಂತರ ನಾವು ಮನೆಯನ್ನು ಕೆಡವಿಹಾಕುವ ಕೆಲಸಕ್ಕೆ ತೊಡಗಬಹುದು.ಅದು ಶತಮಾನಗಳ ಕಾಲ ದುಡಿದು ಕಟ್ಟಿಕೊಂಡಿರುವ ಅರ್ಥವಿಲ್ಲದ ಮನೆ. ...
ಜಿಡ್ಡು ಪ್ರವಚನ (ಧ್ಯಾನ-2) ಕೇಳುವುದರಂತೆ ಕಲಿಯುವುದು ಕೂಡ ಬಹಳ ಕಷ್ಟ ಎಂದು ತೋರುತ್ತದೆ. ನಮ್ಮ ಮನಸ್ಸು ಸ್ವತಂತ್ರವಲ್ಲ.ಆದುದರಿಂದ ನಾವು ಏನನ್ನೂ ಕೇಳಿಸಿಕೊಳ್ಳವುದೇ ಇಲ್ಲ. ನಮಗೆ ಈಗಾಗಲೇ ಗೊತ್ತಿರುವ ಸಂಗತಿಗಳು ಕಿವಿಯನ್ನು ತುಂಬಿರುತ್ತವೆ. ಆದ್ದರಿಂದಲೇ ಕೇಳಿಸಿಕೊಳ್ಳುವುದು ಅತ್ಯಂತ ಕಷ್ಟವಾದ್ದು. ನಮ್ಮ ಇಡೀ ಶಕ್ತಿ ಸಾಮರ್ಥ್ಯ, ಜೀವವನ್ನೆಲ್ಲ ಒಳಗೊಂಡು ಕೇಳಿಸಿಕೊಳ್ಳಲು ಸಾಧ್ಯವಾಗುವುದಾದರೆ ಆಗ ಕೇಳಿಸಿಕೊಳ್ಳುವ ಕ್ರಿಯೆಯೇ ನಮಗೆ ಬಿಡುಗಡೆಯನ್ನೂ ತರುತ್ತದೆ. ನಿಮ್ಮನ್ನು ಇಡಿಯಾಗಿ ಗಣಿತಕ್ಕೆ ಒಪ್ಪಿಸಿಕೊಂಡಾಗ ಮಾತ್ರ ಕಲಿಯುವುದಕ್ಕೆ ಸಾಧ್ಯವಾಗುತ್ತದೆ. ಆದರೆ ನಿಮ್ಮಲ್ಲಿ ವಿರೋಧಗಳಿದ್ದರೆ,ನಿಮಗೆ ಕಲಿಯಲು ಇಷ್ಟವಿಲ್ಲದೆ ಬಲವಂತವಾಗಿ ಕಲಿಯುತ್ತಿದ್ದರೆ,ಆಗ ಕಲಿಯುವುದು ಸಾಧ್ಯವಾಗುವುದಿಲ್ಲ, ಕೇವಲ ವಿಷಯ ಸಂಗ್ರಹವಷ್ಟೇ ಆಗಿರುತ್ತದೆ.ಕಲಿಯುವುದೆಂದರೆ ಅಸಂಖ್ಯಾತ ಪಾತ್ರಗಳಿರುವ ಕಾದಂಬರಿಯನ್ನು ಓದಿ ಅಂಥ ಕಾದಂಬರಿಯನ್ನು ಓದುವುದಕ್ಕೆ ನಿಮ್ಮ ಪೂರಾಣ ಗಮನ ಅಗತ್ಯ. ಗಮನ ಚೆದುರಿದರೆ ಕಾದಂಬರಿ ತಿಳಿಯುವುದೇ ಇಲ್ಲ. ನೀವು ಎಲೆಯ ಬಗ್ಗೆ ಕಲಿಯಬೇಕೆಂದಿದ್ದರೆ ಎಲೆಯನ್ನು ತೀವ್ರವಾಗಿ ಗಮನಕೊಟ್ಟು ನೋಡಬೇಕು....