January 18, 2025

ಸುದ್ದಿ

      ಭಂಡಾರಿ ಸೇವಾಸಮಿತಿ ಮುಂಬೈಇದರ 64ನೇವಾರ್ಷಿಕ ಮಹಾಸಭೆಜುಲೈ 23ರಂದುಸಯಾನ್ ಪಶ್ಚಿಮದಸ್ವಾಮಿ ನಿತ್ಯಾನಂದಸಭಾಗೃಹದಲ್ಲಿ ನಡೆಯಿತು. ದೀಪ ಪ್ರಜ್ವಲಿಸಿಕುಲದೇವರಾದ ಕಚ್ಚೂರುಶ್ರೀ ನಾಗೇಶ್ವರದೇವರಿಗೆ...
      ಭಂಡಾರಿ ಸಮುದಾಯ ತನ್ನದೇ ಇತಿಹಾಸವನ್ನು ದಾಖಲಿಸಿದೆ ಮಾತ್ರವಲ್ಲ ತನ್ನ ಶ್ರೀಮಂತಿಕೆಯನ್ನು ಸಾರುತ್ತಲೇ ಬಂದಿದೆ.. ಆದರೆ ಸಂಖ್ಯಾದೃಷ್ಠಿಯತ್ತ ಕಣ್ಣು...
“ಭಂಡಾರಿ ವಾರ್ತೆ” ಎಂಬ ಹೆಸರಿನಲ್ಲಿ ಪ್ರಾರಂಭಿಸಿರುವ ಅಂತರ್ಜಾಲ ಪತ್ರಿಕೆ EPaper ಮುಂದೆ ಭಂಡಾರಿ ಸಮಾಜದ ಅತಿಶ್ರೇಷ್ಠ ಮಾಧ್ಯಮವಾಗಬೇಕೆಂಬ ದೂರದರ್ಶಿತ್ವ ಮತ್ತು ಅಭಿಲಾಷೆಯನ್ನು ಪತ್ರಿಕೆಯ ಸಂಪಾದಕೀಯ ಮಂಡಳಿ ಹೊಂದಿದೆ. ದಿನಂಪ್ರತಿ ಸಮಾಜದ ಎಲ್ಲ ಮನೆಗಳಲ್ಲಿ ನಡೆಯುವ ಸಿಹಿ ಕಹಿ ಘಟನೆಗಳು ಮತ್ತು ಸಮಾರಂಭಗಳ ಸುದ್ದಿ ಸಮಾಜದ ಎಲ್ಲ ಮನೆಗಳಿಗೆ ತಲುಪಬೇಕೆಂಬ ಆಶಯದಿಂದ ಆರಂಭಿಸಲಾಗಿದೆ. ಅದೇ ರೀತಿ ಭಂಡಾರಿ ಪ್ರತಿಭಾನ್ವಿತರ ಪ್ರತಿಭೆಯ ಅನಾವರಣ, ಸಾಧಕರ ಜೀವನ ಚರಿತ್ರೆ ಮುಂತಾದ ಸಾಹಿತ್ಯ,ಕಲೆ ಮತ್ತು ಸಿನಿಮಾ ಮುಂತಾದ ಸಂಚಿಕೆಯನ್ನು ಪ್ರಸಾರ ಮಾಡಲಿದೆ. ಮುಂದಿನ ದಿನಗಳಲ್ಲಿ VISION 2020 ಯ ಕನಸನ್ನು ನನಸು ಮಾಡಲು ಅಂದರೆ ಭಂಡಾರಿ ಸಮಾಜ ಸ್ವಾವಲಂಬಿ ಬದುಕು ನಿರ್ಮಿಸಲು ಬೇಕಾದ ಎಲ್ಲ ಕಾರ್ಯಗಳ ಮಾಹಿತಿಯನ್ನು ಸಂಪಾದಕೀಯ  ಲೇಖನದಲ್ಲಿ ನೀಡಲಾಗುವುದು. ಭಂಡಾರಿ ವಾರ್ತೆ ಎಂಬುದು ಕೇವಲ ವಾರ್ತಾ ಪತ್ರಿಕೆಯಲ್ಲ ಇದು ಭಂಡಾರಿ ಸಮಾಜದ ಉಜ್ವಲ ಭವಿಷ್ಯ ನಿರ್ಮಾಣಕ್ಕಾಗಿ ದೂರದೃಷ್ಟಿ ಪರಿಕಲ್ಪನೆ ನೀಡಿ ಎಚ್ಚರಿಸುವ ಕಾರ್ಯ ಮಾಡುತ್ತದೆ. ಕ್ಷೌರಿಕರ ಸಮಸ್ಯೆಗಳಿಗೆ ಪರಿಹಾರ ನೀಡುವ ಮತ್ತು ವೃತ್ತಿ ತರಬೇತಿಗೆ ಉತ್ತೇಜನ ಸೇರಿದಂತೆ ಪ್ರಮುಖ ಮಾಹಿತಿಯನ್ನು ಪತ್ರಿಕೆ ನೀಡಲಿದೆ.ಜಾಗತಿಕ ಉದ್ಯಮಗಳ ಬೆಳವಣಿಗೆ ಮತ್ತು ಏಳುಬೀಳುಗಳು ಕ್ಷೌರಿಕರ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಮಾಹಿತಿ ನೀಡುವ ಪತ್ರಿಕೆಯಾಗಲಿದೆ. ಭಂಡಾರಿ ಯುವಕರ ನಿರುದ್ಯೋಗ ಸಮಸ್ಯೆ ತಡೆಯಲು ಕೈಗೊಳ್ಳಬೇಕಾದ ಕ್ರಮಗಳು ಮತ್ತು ಹಾಗೆಯೇ ಬೆಳೆಯುತ್ತಿರುವ ಶ್ರಮಿಕ ವರ್ಗಬೇಧದಿಂದ ಹೆಚ್ಚುತ್ತಿರುವ ಅವಿವಾಹಿತರ ಸಮಸ್ಯೆಯಿಂದ ಮುಕ್ತಿ ಪಡೆಯಲು ಸಮಾಜಕ್ಕೆ ಅಗತ್ಯ ಸಲಹೆ ನೀಡಲು ಪತ್ರಿಕೆ ಮಾಧ್ಯಮವಾಗಲಿದೆ. ✍ ಪ್ರಕಾಶ್ ಭಂಡಾರಿ ಕಟ್ಲಾ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಭಂಡಾರಿ ವಾರ್ತೆ  
ಭಂಡಾರಿವಾರ್ತೆ: ಶಿರಾಳಕೊಪ್ಪ:  2017-18ನೇ ಸಾಲಿನ ಜವಾಹರಲಾಲ್ನೆಹರೂ ವಸತಿ ಶಾಲೆಗೆ ನೆಡೆದಅರ್ಹತಾ ಪರೀಕ್ಷೆಯಲ್ಲಿ ಮಾಸ್ಟರ್ ಸಾತ್ವಿಕ್ ಭಂಡಾರಿ ಅತೀ ಹೆಚ್ಚಿನ ಅಂಕಪಡೆದು ಉತ್ತೀರ್ಣರಾಗಿ, ಪ್ರವೇಶ...