January 18, 2025
grahana 1

        

         ವಿಲಂಬಿನಾಮ ಸಂವತ್ಸರದ ಆಷಾಡ ಶುದ್ಧ ಪೂರ್ಣಿಮೆ ದಿನಾಂಕ 27-07-2018 ರಂದು ಚಂದ್ರನಿಗೆ ಕೇತು ಗ್ರಹಣ.
         ಖಗ್ರಾಸವಾದ ಈ ಗ್ರಹಣದಲ್ಲಿ ಜಗತ್ತಿಗೆ ಹಾನಿಕಾರಕ ಪ್ರಕೃತಿ ವಿಕೋಪಗಳು ತಾಂಡವವಾಡುವ ಸ್ಥಿತಿ ಇದೆ. ಈ ಗ್ರಹಣ ಉತ್ತರಾಷಾಡ ಹಾಗೂ ಶ್ರವಣ ನಕ್ಷತ್ರಗಳಿಗೆ ಹಾಗೂ ಮಕರರಾಶಿಯವರಿಗೆ ಭಾರಿ ಅರಿಷ್ಠಪ್ರದವಾಗಿದೆ. ಕುಂಭ ಮಿಥುನ ಸಿಂಹ ರಾಶಿಯವರಿಗೆ ದೋಷವಿದ್ದು, ಈ ಗ್ರಹಣಕಾಲದಲ್ಲಿ ಸೂಕ್ತ ಶಾಂತಿ ಕರ್ಮಗಳನ್ನು ಮಾಡಿಸಬೇಕು ಈ ದಿನ ಮಧ್ಯಾಹ್ನ 2 ಗಂಟೆ 53 ನಿಮಿಷದಿಂದ ಭೋಜನ ಮಾಡಬಾರದು. ಮಕ್ಕಳಿಗೆ ವೃದ್ದರಿಗೆ, ರೋಗಿಗಳಿಗೆ ರಾತ್ರಿ 8:30 ರೊಳಗೆ ಆಹಾರ ಕೊಡಬಹುದು.

        ರಾತ್ರಿ 11:53 ಕ್ಕೆ ಗ್ರಹಣ ಸ್ಪರ್ಶ, ಬೆಳಿಗ್ಗೆ 3:48 ಕ್ಕೆ ಗ್ರಹಣ ಮೋಕ್ಷ ಈ ಗ್ರಹಣದಲ್ಲಿ ಮೀನ, ತುಲಾ, ವೃಶ್ಚಿಕ ರಾಶಿಯವರಿಗೆ ಶುಭ ಫಲ. ವೃಷಭ, ಕನ್ಯಾ, ಧನು ರಾಶಿಯವರಿಗೆ ಮಿಶ್ರ ಫಲ. ಕರ್ಕ, ಮಕರ ರಾಶಿಯವರಿಗೆ ಅಶುಭ ಫಲ ಜಾಸ್ತಿ ಇದೆ.

       ಅಶುಭ ಫಲವಿರುವ ರಾಶಿಯವರು ಬೆಳ್ಳಿ ತಗಡಿನಲ್ಲಿ ಚಂದ್ರ ಹಾಗೂ ಕೇತುವಿನ ಪ್ರತಿಮೆಯ ಚಿತ್ರ ಬಿಡಿಸಿ ಅದನ್ನು ಪೂಜಿಸಿ ಶಿವಾಲಯದ ಹುಂಡಿಗೆ ಸಮರ್ಪಿಸಿ ರುದ್ರಾಭಿಷೇಕ ಮಾಡಿಸಿರಿ.

 

ಈ ಗ್ರಹಣದ ದುಷ್ಪರಿಣಾಮಗಳು:
      ರಾಷ್ಟ್ರ ನಾಯಕರಿಗೆ ಭಾರೀ ಅರಿಷ್ಠವಿದೆ. ಮಂತ್ರಿ ಮಂಡಲದಲ್ಲಿ ಒಡಕು ಹೆಚ್ಚು, ದೇಶದ ಆರ್ಥಿಕ ಸ್ಥಿತಿಗೆ ತೊಂದರೆ, ಎಲ್ಲಾ ವಸ್ತುಗಳ ಬೆಲೆ ಜಾಸ್ತಿಯಾಗಿ ಜನರಿಗೆ ತೊಂದರೆಯಾಗುತ್ತದೆ. ಮುಸ್ಲಿಂ ರಾಷ್ಟ್ರ ಮತ್ತು ಭಾರತಕ್ಕೆ ಯುಧ್ಧ ಸನ್ನಿವೇಶವು ಸಂಭವ, ಪೆಟ್ರೋಲ್ ಹಾಗೂ ಉಳಿದ ತೈಲಗಳಿಗೆ ಬೆಲೆ ಹೆಚ್ಚಾಗುತ್ತದೆ. ಬೆಲ್ಲ ಸಕ್ಕರೆ ಹಾಗೂ ದ್ವಿದಳ ಧಾನ್ಯಗಳಿಗೆ ಬೆಲೆ ತೇಜಿಯಾಗಿ ಜನರ ಜೀವನ ಅಸ್ತವ್ಯಸ್ತವಾಗಲಿದೆ. ಕರ್ನಾಟಕದಲ್ಲಿ ಸಮ್ಮಿಶ್ರ ಸರಕಾರಕ್ಕೆ ತೊಂದರೆ, ಮುಖ್ಯಮಂತ್ರಿಯವರು ಹತಾಶರಾಗುತ್ತಾರೆ.
ಬೆಳ್ಳಿ ಬಂಗಾರ ಕಂಚು ಖಾದಿಬಟ್ಟೆ ಇತ್ಯಾದಿಗಳಿಗೆ ಬೆಲೆ ಏರಿಕೆ, ಮಳೆಯಿಂದ ತೊಂದರೆಗಳು ಬರಲಿದೆ. ಆಗಾಗ ಅಪಘಾತಗಳ ಸುದ್ದಿ ಕೇಳಬೇಕಾಗುತ್ತದೆ. ಹೆಚ್ಚಾಗಿ ಮುಂದಿನ 6 ತಿಂಗಳೊಳಗೆ ಬಾರಿ ಅಗ್ನಿ ಅನಾಹುತ, ರೈಲು, ವಿಮಾನ, ಬಸ್ಸುಗಳ ಅಪಘಾತದಿಂದ ಜನರಿಗೆ ಹಾನಿಯುಂಟಾಗಲಿದೆ.
ದೇಶದ ಪ್ರಮುಖ ವ್ಯಕ್ತಿಯ ಅಗಲಿಕೆಯಾಗುತ್ತದೆ. ಮಹಿಳಾ ರಾಜಕಾರಣಿಗೆ ಮರಣ ಭಯವಿದೆ. ಮೋದಿಯವರಿಗೆ ಅಪಾಯಕರ ಸನ್ನಿವೇಶ ಸಂಭವ, ಕೆಲವು ರಾಜ್ಯಗಳಲ್ಲಿ ಬಿಜೆಪಿಯ ಬಲ ಗುಂದಲಿದೆ. ಪ್ರಾದೇಶಿಕ ಪಕ್ಷಗಳು ಸಂಘಟಿತವಾದರೂ ಚುನಾವಣೆಯಲ್ಲಿ ನೆಲಕಚ್ಚಲಿದೆ. ಈ ಗ್ರಹಣದಿಂದ ಚೀನಾ, ಜಪಾನ್, ಅಮೇರಿಕಾ, ಮುಸ್ಲಿಂ ರಾಷ್ಟ್ರಗಳಿಗೆ ಭಾರಿ ಹಾನಿಯಾಗುತ್ತದೆ.

 

✍ : ಕೆ ಅನಂತರಾಮ ಬಂಗಾಡಿ
(ಜ್ಯೋತಿಷ್ಯರು ಮತ್ತು ಸಾಹಿತಿ)
ಮೊ: +91 94492 07447

 

Leave a Reply

Your email address will not be published. Required fields are marked *