
ಚರ್ಮದ ಅಸಹಜ ಕಪ್ಪಾಗುವಿಕೆ ಅಥವಾ ಅತಿಯಾದ ವರ್ಣ ದ್ರವ್ಯ ನಿರ್ದಿಷ್ಟ ಜಾಗದಲ್ಲಿ ಉಂಟಾಗುವ ಸಮಸ್ಯೆ. ಈ ಸಮಸ್ಯೆ ಸೂರ್ಯನ ಗಾಢ ಕಿರಣ,ಹಾರ್ಮೋನುಗಳ ಏರಿಳಿತ, ಮೊಡವೆ ಅಥವಾ ಸುಟ್ಟ ಗಾಯಗಳಿಂದ ಉಂಟಾಗುತ್ತದೆ.


ಅದ್ಭುತ ಆಂಟಿ ಬ್ಯಾಕ್ಟೀರಿಯಾ ಶಕ್ತಿ ಹೊಂದಿರುವ ನಿಂಬೆ ಚರ್ಮದ ಕಪ್ಪು ಕಲೆಗಳನ್ನು ಹೋಗಲಾಡಿಸುವಲ್ಲಿ ಸಹಾಯ ಮಾಡಲಿದೆ. ನಿಂಬೆ ಹಣ್ಣಿನ ರಸವನ್ನು ಹಾಗೆಯೇ ಬಳಸುವುದರಿಂದ ಅಥವಾ ಮೊಸರಿನ ಜೊತೆ ಮಿಶ್ರಣ ಮಾಡಿಕೊಂಡು ಕಪ್ಪು ಕಲೆ ಇರುವ ಪ್ರದೇಶಗಳಿಗೆ ಹಚ್ಚಿಕೊಂಡು 10/15 ನಿಮಿಷಗಳ ಬಳಿಕ ತೊಳೆದುಕೊಳ್ಳುವುದರಿಂದ ಶೀಘ್ರ ನೈಸರ್ಗಿಕ ವರ್ಣವನ್ನು ಪಡೆಯಬಹುದು.

ಅಲೋವೆರಾ ಚರ್ಮದ ಸಮಸ್ಯೆಗಳಿಗೆ ಅತ್ಯುತ್ತಮ ನೈಸರ್ಗಿಕ ಪರಿಹಾರ. ಅತಿಯಾದ ಕಲೆ ಇರುವ ಪ್ರದೇಶಕ್ಕೆ ತಾಜಾ ಅಲೋವೆರಾ ಜೆಲ್ ಹಚ್ಚಿದರೆ ಕಪ್ಪು ಕಲೆಗಳಿಂದ ಶೀಘ್ರ ಪರಿಹಾರ ಕಾಣಬಹುದು.

ಅವಕಾಡೋ ಚರ್ಮಕ್ಕೆ ಉತ್ತಮವಾದ ಬಿ6 ಮತ್ತು ವಿಟಮಿನ್ ಎ ನೀಡಲು ಸಹಕಾರಿಯಾಗಿದೆ. ಇದರಲ್ಲಿರುವ ಲುಟೀನ್ ಎಂಬ ಅಂಶ ನೈಸರ್ಗಿಕ ಉರಿಯೂತವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಆವಕಾಡೊದ ಪೇಸ್ಟ್ ನ್ನು ಕಲೆಗಳಿರುವ ಜಾಗಕ್ಕೆ ಹಚ್ಚಿಕೊಳ್ಳುತ್ತ ಬಂದರೆ ಗಾಢ ವರ್ಣದ ಕಲೆಗಳಿಂದ ಮುಕ್ತಿ ಕಾಣಬಹುದು.

ತೆಂಗಿನ ಎಣ್ಣೆ ವಿಟಮಿನ್ ಇ ಮತ್ತು ಸಿ ಹಾಗೂ ಲಾರಿಕ್ ಆಮ್ಲವನ್ನು ಒಳಗೊಂಡಿದೆ. ಹೀಗಾಗಿ ರಾತ್ರಿ ಮಲಗೋ ಮುನ್ನ ತೆಂಗಿನೆಣ್ಣೆಯನ್ನು ಚರ್ಮಕ್ಕೆ ಹಚ್ಚಿಕೊಂಡು ಬೆಳಗ್ಗೆ ಮುಖ ತೊಳೆದುಕೊಂಡರೆ ಶೀಘ್ರ ಕಪ್ಪು ಕಲೆಗಳಿಗೆ ಪರಿಹಾರ ಕಾಣಬಹುದು.

ವರ್ಣದ್ರವ್ಯದ ಸಮಸ್ಯೆಯಿರುವವರು ದಿನನಿತ್ಯ ಬಳಸೋ ಸಕ್ಕರೆಯಿಂದಲೂ ಪರಿಹಾರ ಕಾಣಬಹುದು. ¼ ಕಪ್ ಸಕ್ಕರೆಗೆ ½ ಕಪ್ ಬಾದಾಮಿ ಎಣ್ಣೆ ಮತ್ತು 1 ಚಮಚ ನಿಂಬೆ ರಸವನ್ನು ಸೇರಿಸಿ ಸ್ಕ್ರಬ್ ತರ ಬಳಸಿಕೊಂಡರೆ ಶೀಘ್ರ ಪರಿಹಾರ ಕಾಣಬಹುದು.
ಕಪ್ಪು ವರ್ಣದ ಚರ್ಮಗಳಿಗೆ ಆಲೂಗೆಡ್ಡೆ ರಸವು ಅತ್ಯುತ್ತಮ ಮನೆಮದ್ದು. ಆಲೂಗಡ್ಡೆಯ ರಸವನ್ನು ನೇರವಾಗಿ ಅಥವಾ ಆಲೂಗೆಡ್ಡೆಯ ಚೂರುಗಳನ್ನು ಕಲೆ ಇರುವ ಜಾಗಕ್ಕೆ ಉಜ್ಜುತ್ತ ಬಂದರೆ ಶೀಘ್ರ ನೈಸರ್ಗಿಕ ಬಣ್ಣವನ್ನು ಪಡೆಯಬಹುದು
.

ಅರಿಶಿನವು ಪ್ರಕೃತಿಯ ಪುರಾತನ ನೈಸರ್ಗಿಕ ಪರಿಹಾರಗಳಲ್ಲೊಂದು. ಅರಿಶಿನ ಪುಡಿಯನ್ನು ಮೊಸರಿನೊಂದಿಗೆ ಸೇರಿಸಿಕೊಂಡು ಚರ್ಮದ ಭಾಗಗಳಿಗೆ ಹಚ್ಚಿ 15/20 ನಿಮಿಷಗಳ ನಂತರ ತೊಳೆದರೆ ಉತ್ತಮ ಫಲಿತಾಂಶ ಪಡೆಯಬಹುದು.

ಹತ್ತಿಯುಂಡೆಯನ್ನು ಬಳಸಿಕೊಂಡು ಕಲೆಯಿರುವ ಪ್ರದೇಶಗಳಿಗೆ ಹಚ್ಚಿಕೊಂಡು 10 ನಿಮಿಷಗಳ ಬಳಿಕ ತೊಳೆದುಕೊಂಡರೆ ಉತ್ತಮ.

ಬೇಕಿಂಗ್ ಸೋಡಾವನ್ನು ಕಾಂತಿಯುಕ್ತ ಚರ್ಮಕ್ಕಾಗಿ ಬಳಸಿಕೊಳ್ಳಬಹುದು. ನೀರು ಹಾಗೂ ಬೇಕಿಂಗ್ ಸೋಡಾದ ಮಿಶ್ರಣವನ್ನು ಕಲೆ ಇರುವ ಜಾಗಕ್ಕೆ ಹಚ್ಚಿಕೊಂಡು 15 ನಿಮಿಷಗಳ ಬಳಿಕ ತೊಳೆದುಕೊಂಡರೆ ಶೀಘ್ರ ಪರಿಹಾರ ಕಾಣಬಹುದು.

ನೈಸರ್ಗಿಕ ಚರ್ಮದ ಹೊಳಪಿಗೆ ಮೊಸರು ಅತ್ಯುತ್ತಮ ಮದ್ದು. ಇದರ ಲ್ಯಾಕ್ಟಿಕ್ ಆಮ್ಲದ ಶಕ್ತಿ ಚರ್ಮವನ್ನು ಹೊಳಪು ಮಾಡಲು ಸಹಾಯ ಮಾಡುತ್ತದೆ. ಇದನ್ನ ನೇರವಾಗಿಯೂ ಬಳಸಬಹುದು ಅಥವಾ ಇತರ ಪದಾರ್ಥಗಳೊಂದಿಗೆ ಮಿಶ್ರಣ ಮಾಡಿಕೊಂಡೂ ಬಳಸಬಹುದು.
✍: ವಿದ್ಯಾ ಪ್ರಕಾಶ್ ಭಂಡಾರಿ