January 18, 2025
CA-Sahana-s-Bhanadary
ಹೊಸದಿಲ್ಲಿಯ ದಿ ಇನ್ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ ಆಫ್ ಇಂಡಿಯಾ ಸಂಸ್ಥೆಯು ನಡೆಸಿದ ಸಿ . ಎ . ಅಂತಿಮ ಪರೀಕ್ಷೆಯಲ್ಲಿ ಕಾರ್ಕಳದ ಕು ॥ ಸಹನಾ ಎಸ್ ಭಂಡಾರಿ  ಉತ್ತೀರ್ಣ ರಾಗಿ ಭಂಡಾರಿ ಸಮಾಜದ ಗೌರವಕ್ಕೆ ಪಾತ್ರರಾಗಿದ್ದಾರೆ.  ಕಾರ್ಕಳ  ಕೆ.ಎಮ್ .ಇ.ಎಸ್‌ ಪ್ರಾಥಮಿಕ ಶಾಲೆಯಲ್ಲಿ  ಪ್ರಾಥಮಿಕ ಶಿಕ್ಷಣ ಪಡೆದು ಭುವನೇಂದ್ರ ಕಾಲೇಜು ಕಾರ್ಕಳದಲ್ಲಿ ಹೈಸ್ಕೂಲ್ ಮತ್ತು ಪದವಿ ಪೂರ್ವ  ಶಿಕ್ಷಣವನ್ನು ಮುಗಿಸಿ ಮೈಸೂರು ಯುನಿವರ್ಸಿಟಿಯ ವಾಣಿಜ್ಯ ವಿಭಾಗದಲ್ಲಿ ಡಿಸ್ಟಿಂಕ್ಷನ್ನಲ್ಲಿ ಉತ್ತೀರ್ಣರಾಗಿ  ಪದವಿ ಪಡೆದಿದ್ದಾರೆ. ಸಿ.ಎ.ಇನ್ಸ್ಟಿಟ್ಯೂಟ್ ಇಂದ್ರಾಳಿ ಉಡುಪಿಯಲ್ಲಿ  ಸಿ . ಎ . ಶಿಕ್ಷಣವನ್ನು  ಪಡೆದು ಉಡುಪಿಯ  Rao & Swamy Associate  ಸಂಸ್ಥೆಯಲ್ಲಿ ತರಬೇತಿ ಪಡೆದಿರುತ್ತಾರೆ.
 
ಇವರು ಕಂದಾಯ ಇಲಾಖೆಯ ನಿವೃತ್ತ ಅಧಿಕಾರಿ , ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಮತ್ತು ಸೇವಾ ಟ್ರಸ್ಟಿನ ಮಾಜಿ ಉಪಾಧ್ಯಕ್ಷ ,  ಕಾರ್ಕಳ ಭಂಡಾರಿ ಸಮಾಜ ಸಂಘದ ಮಾಜಿ ಅಧ್ಯಕ್ಷ ಹಾಗೂ ಸದಾ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ  ಶಶಿಧರ ಭಂಡಾರಿ ಕಾರ್ಕಳ ಮತ್ತು ಬಿ.ಎಸ್‌.ಎನ್ .ಎಲ್ .ಸಂಸ್ಥೆಯಲ್ಲಿ ಸ್ವಯಂ ನಿವೃತ್ತಿ ಪಡೆದ ಉಷಾ ಶಶಿಧರ್ ದಂಪತಿಯ ಸುಪುತ್ರಿ.
 
 
 
ಇವರ ಸಾಧನಗೆ  ಶುಭ ಹಾರೈಸುತ್ತಾ ಸಮಾಜದಲ್ಲಿ  ಇನ್ನಷ್ಟು ಸಾಧನೆ ಮಾಡಿ  ಭಂಡಾರಿ ಸಮಾಜದ ಗೌರವವನ್ನು ರಾಷ್ಟ್ರಮಟ್ಟದಲ್ಲಿ  ಗುರುತಿಸಿಕೊಳ್ಳಲು ಭಗವಂತನ ಅನುಗ್ರಹ ಸದಾ ಇರಲಿ ಎಂದು ಭಂಡಾರಿ ಕುಟುಂಬದ  ಮನೆ ಮನದ ಮಾತು ಭಂಡಾರಿ  ವಾರ್ತೆಯು ಬೇಡುತ್ತದೆ.
 
https://docs.google.com/forms/d/e/1FAIpQLScXMR1CTCV2DBhpZBaiJJqrrPjK_A6COapRslltUv-Aq3qe0Q/viewform?usp=sf_link
 
ಇವರ ಈ ಅಭೂತಪೂರ್ವ ಸಾಧನೆಗೆ ಶುಭ ಹಾರೈಸುವವರು ಈ ಕೆಳಗಿನ ಸಂಖ್ಯೆಗೆ ಸಂಪರ್ಕಿಸಬಹುದು.
ಸಂಪರ್ಕ ಸಂಖ್ಯೆ:
ಶಶಿಧರ್ ಭಂಡಾರಿ ಕಾರ್ಕಳ 
ದೂರವಾಣಿ ಸಂಖ್ಯೆ 
9845256774
 
– ಭಂಡಾರಿ ವಾರ್ತೆ

1 thought on “ಸಿ.ಎ. ಅಂತಿಮ ಹಂತದ ಪರೀಕ್ಷೆಯಲ್ಲಿ ಉತ್ತೀರ್ಣರಾದ ಕು ॥ ಸಹನಾ ಎಸ್‌ . ಭಂಡಾರಿ ಕಾರ್ಕಳ

Leave a Reply

Your email address will not be published. Required fields are marked *