ಬೇಸಿಗೆ ಸಂದರ್ಭದಲ್ಲಿ ಗರ್ಭಿಣಿಯರು ಆರೋಗ್ಯ ಕಾಪಾಡಿಕೊಳ್ಳಲು ಪಾಲಿಸಬೇಕಾದ ಉಪಯುಕ್ತ ಸಲಹೆಗಳು.
ಬೇಸಿಗೆ ಎಂದ ಕೂಡಲೇ ನೆನಪಾಗುವುದು ಉರಿ ಬಿಸಿಲು, ಬೇಸಿಗೆ ಸಂದರ್ಭದಲ್ಲಿ ಸಾಮಾನ್ಯ ಜನರೇ ತಾಪಮಾನ ತಡೆಯಲಾರದೆ ಒದ್ದಾಡುವುದುಂಟು. ಇನ್ನು ಗರ್ಭಿಣಿಯರ ಪಾಡು… ಹೇಳತೀರದು. ಈ ಸಂದರ್ಭದಲ್ಲಿ ಗರ್ಭಿಣಿಯರು ತಮ್ಮ ಆರೋಗ್ಯ ಕಾಳಜಿಯ ಜೊತೆಗೆ ತಮ್ಮ ದೇಹದ ತಾಪಮಾನ ಸರಿಯಾಗಿ ಕಾಯ್ದುಕೊಳ್ಳುವುದೂ ಮುಖ್ಯವಾಗುತ್ತದೆ.
ಬೇಸಿಗೆ ಎಂದ ಕೂಡಲೇ ನೆನಪಾಗುವುದು ಉರಿ ಬಿಸಿಲು, ಬೇಸಿಗೆ ಸಂದರ್ಭದಲ್ಲಿ ಸಾಮಾನ್ಯ ಜನರೇ ತಾಪಮಾನ ತಡೆಯಲಾರದೆ ಒದ್ದಾಡುವುದುಂಟು. ಇನ್ನು ಗರ್ಭಿಣಿಯರ ಪಾಡು… ಹೇಳತೀರದು. ಈ ಸಂದರ್ಭದಲ್ಲಿ ಗರ್ಭಿಣಿಯರು ತಮ್ಮ ಆರೋಗ್ಯ ಕಾಳಜಿಯ ಜೊತೆಗೆ ತಮ್ಮ ದೇಹದ ತಾಪಮಾನ ಸರಿಯಾಗಿ ಕಾಯ್ದುಕೊಳ್ಳುವುದೂ ಮುಖ್ಯವಾಗುತ್ತದೆ.
ಗರ್ಭಾವಸ್ಥೆಯ ಸಂದರ್ಭದಲ್ಲಿ ಎಷ್ಟು ಜೋಪಾನವಾಗಿದ್ದರೂ ಕಡಿಮೆಯೇ. ಏಕೆಂದರೆ ತಮ್ಮ ದೇಹದಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಆದರೂ ಅದು ನೇರವಾಗಿ ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ಗರ್ಭಿಣಿ ಮಹಿಳೆಯರು ಬೇಸಿಗೆ ಸಮಯದಲ್ಲಿ ತಮ್ಮ ದೇಹದ ಆರೋಗ್ಯಕ್ಕೆ ಪೂರಕವಾದ ಸಲಹೆಗಳನ್ನು ಅನುಸರಿಸುವುದು ಬಹಳ ಮುಖ್ಯವಾಗುತ್ತದೆ. ತಾವು ಸೇವಿಸುವ ಆಹಾರದ ಜೊತೆಗೆ ತಾವು ತೊಡುವ ಬಟ್ಟೆಗಳ ಬಗ್ಗೆಯೂ ಜಾಗೃತಿ ವಹಿಸಬೇಕಾದುದು ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ಬೇಸಿಗೆ ಸಂದರ್ಭದಲ್ಲಿ ಗರ್ಭಿಣಿಯರು ಅನುಭವಿಸುವ ಸಮಸ್ಯೆಗಳು ಹಾಗೂ ತಮ್ಮನ್ನು ತಾವು ಹೇಗೆ ಕಾಪಾಡಿಕೊಳ್ಳಬೇಕೆಂಬುದರ ಕುರಿತು ಸಲಹೆಗಳನ್ನು ನೀಡಲಾಗಿದೆ.
ಗರಗರ್ಭಾವಸ್ಥೆಯಲ್ಲಿ ವಾಕರಿಕೆ ಮತ್ತು ವಾಂತಿ
ಶೇ.60-70ರಷ್ಟು ಗರ್ಭಿಣಿಯರು ಗರ್ಭಾವಸ್ಥೆಯ ಸಂದರ್ಭದಲ್ಲಿ ಈ ಸಮಸ್ಯೆಯನ್ನು ಎದುರಿಸುತ್ತಾರೆ. ಅತಿಯಾದ ವಾಂತಿ ದೇಹ ನಿರ್ಜಲೀಕರಣ ಮತ್ತು ದೌರ್ಬಲ್ಯಕ್ಕೆ ಕಾರಣವಾಗಬಹುದು, ಕೆಲವೊಮ್ಮೆ ಆಸ್ಪತ್ರೆಗೆ ದಾಖಲಾಗುವ ಪರಿಸ್ಥಿತಿಯನ್ನೂ ಎದುರು ಮಾಡಲಿದೆ. ಈ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಬೇಕು.್ಭಿಣಿಯರು ಅನುಭವಿಸುವ ಸಮಸ್ಯೆಗಳು ಹಾಗೂ ತಮ್ಮನ್ನು ತಾವು ಹೇಗೆ ಕಾಪಾಡಿಕೊಳ್ಳಬೇಕೆಂಬುದರ ಕುರಿತು ಸಲಹೆಗಳನ್ನು ನೀಡಲಾಗಿದೆ.
ಅಜೀರ್ಣ, ಹೊಟ್ಟೆ ಉಬ್ಬರಿಸಿದ ಅನುಭವ
ಗರ್ಭಾವಸ್ಥೆಯಲ್ಲಿ ಎದುರಾಗುವ ಬದಲಾವಣೆಗಳು ಅನ್ನನಾಳದ ಮೂಲಕ ಹೊಟ್ಟೆಗೆ ಆಹಾರವನ್ನು ನಿಧಾನಗತಿಯಲ್ಲಿ ದೇಹಕ್ಕೆ ತಲುಪಿಸುತ್ತದೆ. ಇದು ಅಜೀರ್ಣ, ಹೊಟ್ಟೆ ಉಬ್ಬರಿಸಿದ ಅನುಭವವನ್ನುಂಟು ಮಾಡಲಿದೆ. ಕೆಲವೊಮ್ಮೆ ಎದೆ ಇರಿಯುತ್ತಿರುವಂತೆ ಎನಿಸುತ್ತದೆ.
ಕಾಲು ಊತ
ಗರ್ಭಧಾರಣೆಯ ಮೊದಲ ಮೂರು ತಿಂಗಳ ನಂತರ ಪಾದಗಳು ಮತ್ತು ಕಾಲುಗಳಲ್ಲಿ ದ್ರವದ ಸಂಗ್ರಹವಾಗುತ್ತದೆ. ಇದರಿಂದ ಪಾದಗಳು, ಕಾಲುಗಳು, ಬೆರಳುಗಳು ಹಾಗೂ ಮುಖದಲ್ಲಿ ಹಠಾತ್ ಊತಗಳಾಗುತ್ತಿರುವುದು ಕಂಡು ಬರುತ್ತದೆ. ಇದು ಅಧಿಕ ರಕ್ತದೊತ್ತಡದ ಸಂಕೇತವೂ ಆಗಿರಬಹುದು. ಈ ಬಗ್ಗೆ ಎಚ್ಚರಿಕೆ ವಹಿಸಬೇಕು. ವಿಶ್ರಾಂತಿ ಬಳಿಕವೂ ಊತ ಕಡಿಮೆಯಾಗದಿದ್ದರೆ, ವೈದ್ಯರ ಭೇಟಿ ಮಾಡುವುದು ಮುಖ್ಯವಾಗುತ್ತದೆ.
ಉಸಿರಾಟದ ತೊಂದರೆ
ಬೆಳೆಯುತ್ತಿರುವ ಗರ್ಭಾಶಯವು ಶ್ವಾಸಕೋಶವನ್ನು ಸಂಕುಚಿತಗೊಳಿಸುತ್ತದೆ. ಇದು ಉಸಿರಾಟದ ತೊಂದರೆಗೆ ಕಾರಣವಾಗುತ್ತದೆ. ವಾತಾವರಣದಲ್ಲಿ ತಾಪಮಾನ ಹೆಚ್ಚಾದಾಗಲೂ ಗರ್ಭಿಣಿ ಮಹಿಳೆಯರಲ್ಲಿ ಉಸಿರುಗಟ್ಟುತ್ತಿರುವ ಭಾಸವಾಗುತ್ತದೆ. ಮುಖ್ಯವಾಗಿ ಮಲಗಿರುವ ಸಂದರ್ಭದಲ್ಲಿ ಉಸಿರಾಟ ಸಮಸ್ಯೆಯಾಗುತ್ತಿರುವುದು ಕಂಡು ಬರುತ್ತದೆ.
ದೇಹ ಬಿಸಿಯಾಗುತ್ತಿರುವ ಅನುಭವ
ಕೆಲವು ಗರ್ಭಿಣಿಯರಿಗೆ ಸಾಕಷ್ಟು ಸಮಯದಲ್ಲಿ ತಮ್ಮ ದೇಹ ಬಿಸಿಯಾಗುತ್ತಿರುವುದು ಹಾಗೂ ಬೆವರುತ್ತಿರುವ ಅನುಭವವಾಗುತ್ತಿರುವುದಾಗಿ ಹೇಳುತ್ತಾರೆ. ಗರ್ಭಿಣಿಯರಲ್ಲದವರಿಗೆ ಹೋಲಿಸಿದರೆ ಗರ್ಭಿಣಿಯರು ತಮ್ಮ ದೇಹದಲ್ಲಿ 1 ರಿಂದ 1.5 ಲೀಟರ್ ಹೆಚ್ಚುವರಿ ರಕ್ತವನ್ನು ಹೊಂದಿರುವುದು ಇದಕ್ಕೆ ಕಾರಣವಾಗಿರಬಹುದು.
ಬೇಸಿಗೆ ಸಂದರ್ಭದಲ್ಲಿ ಗರ್ಭಿಣಿಯರು ಆರೋಗ್ಯವಾಗಿರಲು ಪಾಲಿಸಬೇಕಾದ ಕೆಲವು ಉಪಯುಕ್ತ ಸಲಹೆಗಳು…
ಹೆಚ್ಚು ನೀರನ್ನು ಕುಡಿಯಿರಿ
ಬೇಸಿಗೆಯಲ್ಲಿ ಅಧಿಕ ನೀರನ್ನು ಸೇವಿಸುವುದರ ಮೂಲಕ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹಾಗೂ ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ ನೋಡಿಕೊಳ್ಳುವುದು ಹೆಚ್ಚು ಮುಖ್ಯವಾಗುತ್ತದೆ. ಬಾಯಾರಿಕೆ ಆಗದೆ ಇದ್ದರೂ ಪದೇ ಪದೇ ನೀರು ಅಥವಾ ದ್ರವ ಪದಾರ್ಥಗಳನ್ನು ಸೇವಿಸುತ್ತಲೇ ಇರಬೇಕು. ರಸ ಭರಿತ ಅಥವಾ ನೀರಿನಿಂದ ಕೂಡಿರುವ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ದೇಹದಲ್ಲಿ ನಿರ್ಜಲೀಕರಣ ಉಂಟಾಗದಂತೆ ತಡೆಯಬಹುದು. ಅಲ್ಲದೆ ದೇಹವು ತಂಪಾಗಿರುತ್ತದೆ. ಜೊತೆಗೆ ಪಚನ ಕ್ರಿಯೆಗಳು ಸುಲಭವಾಗಿ ನೆರವೇರುತ್ತವೆ.
ತಾಪಮಾನದಿಂದ ದೂರ ಉಳಿಯಲು ಸ್ನಾನ ಮಾಡಿ
ತಾಪಮಾನದಿಂದ ದೂರ ಉಳಿಯಲು ಸ್ನಾನ ಮಾಡಿ. ಬೆಳಿಗ್ಗೆ ಎದ್ದ ಕೂಡಲೇ ಹಾಗೂ ರಾತ್ರಿ ಮಲಗುವ ಮುನ್ನ ಸ್ನಾನ ಮಾಡುವುದರಿಂದ ಇದು ನಿಮ್ಮನ್ನು ರಿಫ್ರೆಶ್ ಮಾಡುತ್ತದೆ.
ತೊಡುವ ಬಟ್ಟೆಗಳ ಮೇಲೆ ಗಮನ ಇರಲಿ
ದಿನದಿಂದ ದಿನಕ್ಕೆ ಮಗುವಿನ ಬೆಳವಣಿಗೆ ಆಗುತ್ತಿದ್ದಂತೆ ತಾಯಿಯ ದೇಹದ ಗಾತ್ರವು ದೊಡ್ಡದಾಗುತ್ತಾ ಹೋಗುತ್ತದೆ. ಅಂತಹ ಸಂದರ್ಭದಲ್ಲಿ ತೊಡುವ ಬಟ್ಟೆ ಅಥವಾ ಆಯ್ಕೆ ಮಾಡುವ ಉಡುಪುಗಳು ಸಾಕಷ್ಟು ಸಡಿಲ ಹಾಗೂ ಗಾಳಿ ಆಡುವಂತೆ ಇರಬೇಕು. ಹೆಚ್ಚು ಶಾಖವನ್ನು ಹೀರಿಕೊಳ್ಳುವಂತಹ ಬಣ್ಣ ಮತ್ತು ಬಟ್ಟೆಯನ್ನು ಆಯ್ಕೆ ಮಾಡಬಾರದು. ಆದಷ್ಟು ಹತ್ತಿ ಬಟ್ಟೆಯ ಆಯ್ಕೆ ಮಾಡಿಕೊಳ್ಳಬೇಕು. ಹತ್ತಿ ಬಟ್ಟೆಯಲ್ಲಿ ತಂಪಾದ ಹಾಗೂ ಗಾಳಿಆಡುವಂತಹ ಅನುಭವ ನೀಡುತ್ತದೆ. ಹಗುರವಾಗಿರುವ ಹತ್ತಿ ಬಟ್ಟೆಗಳು ಆರಾಮದಾಯಕ ಅನುಭವ ನೀಡುತ್ತವೆ. ಪಾದ ಹಾಗೂ ಕಾಲುಗಳಲ್ಲಿ ಉರಿಯೂತ ಹಾಗೂ ನೋವುಗಳು ಕಾಣಿಸಿಕೊಳ್ಳುವ ಸಾಧ್ಯತೆಗಳಿರುತ್ತವೆ. ಹಾಗಾಗಿ ಮನೆಯಲ್ಲಿ ಓಡಾಡುವಾಗ ಹಿತವೆನಿಸುವಂತಹ ಹಗುರವಾದ ಮತ್ತು ಸಮತಟ್ಟಾದ ಚಪ್ಪಲಿಯ ಆಯ್ಕೆಯನ್ನು ಮರೆಯದಿರಿ.
ವ್ಯಾಯಾಮ, ಪ್ರಯಾಣ ಮಾಡುವಾಗ ಎಚ್ಚರದಿಂದಿರಿ
ಮೂರನೇ ತ್ರೈಮಾಸಿಕಕ್ಕೆ ಕಾಲಿಡುತ್ತಿದ್ದಂತೆಯೇ ಗರ್ಭಿಣಿಯರ ದೇಹವು ಹೆಚ್ಚು ಸೂಕ್ಷ್ಮತೆಯನ್ನು ಪಡೆದುಕೊಂಡಿರುತ್ತದೆ. ಅಂತಹ ಸಮಯದಲ್ಲಿ ಒತ್ತಡದ ಕೆಲಸ ಹಾಗೂ ಭಾರ ಎತ್ತುವಂತಹ ಕೆಲಸ ಮಾಡುವುದರಿಂದ ಮಗುವಿನ ಮೇಲೆ ನೇರ ಪ್ರಭಾವ ಬೀರುವುದು. ಜೊತೆಗೆ ಆಂತರಿಕ ದೇಹದ ಆರೋಗ್ಯದಲ್ಲೂ ತೊಂದರೆ ಉಂಟಾಗುವುದು. ಮನೆಯಲ್ಲಿ ಹೆಚ್ಚು ಓಡಾಟದ ಕೆಲಸ ಮಾಡುವುದು, ಭಾರವಾದ ಚೀಲ ಅಥವಾ ವಸ್ತುವನ್ನು ಎತ್ತುವಂತಹ ಕೆಲಸವನ್ನು ಮಾಡಬಾರದು. ನಿಮಗೆ ಅಗತ್ಯ ವಸ್ತುಗಳನ್ನು ಎತ್ತುವಾಗ ಮನೆ ಮಂದಿಯ ಬಳಿ ಅಥವಾ ನಿಮ್ಮ ಹತ್ತಿರ ಇರುವ ವ್ಯಕ್ತಿಯಿಂದ ಸಹಾಯವನ್ನು ಪಡೆದುಕೊಳ್ಳಿ.
ಗರ್ಭಾವಸ್ಥೆಯ ಆರಂಭದಿಂದ ಅಂತ್ಯದ ವರೆಗೂ ಸಾಕಷ್ಟು ಕಾಳಜಿಯನ್ನು ನಿರ್ವಹಿಸಬೇಕಾಗುತ್ತದೆ. ದೂರದ ಸ್ಥಳಗಳಿಗೆ ಪದೇ ಪದೇ ಪ್ರಯಾಣ ಬೆಳೆಸುವುದು ಸೂಕ್ತವಲ್ಲ. ಇದರಿಂದಲೂ ಮಗುವಿನ ಆರೋಗ್ಯ ಕೆಡಬಹುದು. ಕೆಲವೊಮ್ಮೆ ದೈಹಿಕ ಒತ್ತಡ ಉಂಟಾಗುವುದರಿಂದಲೂ ಅಕಾಲಿಕ ಪ್ರಸವ ಉಂಟಾಗುವ ಸಾಧ್ಯತೆಗಳಿರುತ್ತವೆ. ಹಾಗಾಗಿ ಆದಷ್ಟು ದೂರದ ಪ್ರದೇಶಕ್ಕೆ ಹಾಗೂ ಬಿಸಿಲಲ್ಲಿ ಓಡಾಡುವ ಕೆಲಸವನ್ನು ತಪ್ಪಿಸಿ. ಆದಷ್ಟು ಮನೆಯಲ್ಲಿಯೇ ವಿಶ್ರಾಂತಿ ಹಾಗೂ ಆರಾಮದಾಯಕ ಅನುಭವ ಹೊಂದಲು ಆದ್ಯತೆ ನೀಡಿ.
ಆಹಾರದ ಮೇಲೆ ಕಾಳಜಿ ವಹಿಸಿ
ತಡವಾಗಿ ಊಟ ಮಾಡದಿರಿ. ಲಘುವಾಗಿ ತಿನ್ನಿ. ಬೆಳಗಿನ ಉಪಾಹಾರವು ಸಂಪೂರ್ಣ ಮತ್ತು ಪೌಷ್ಟಿಕವಾಗಿರಬೇಕು. ಗರ್ಭಾವಸ್ಥೆಯ ಸಮಯದಲ್ಲಿ ದಿನಕ್ಕೆ ಐದು ಬಾರಿ ಊಟ ಮಾಡುವುದು ಉತ್ತಮ. ಇವುಗಳಲ್ಲಿ ಕನಿಷ್ಠ ಒಂದು ಅಥವಾ ಎರಡು ಹಣ್ಣುಗಳು ಮತ್ತು ತರಕಾರಿಗಳು ಇರಬೇಕು.. ಪ್ರೋಟೀನ್ ಯುಕ್ತ ಆಹಾರ ಸೇವನೆ ಮಾಡುವುದನ್ನು ಮರೆಯದಿರಿ.
ವಿಶ್ರಾಂತಿಗೆ ಆದ್ಯತೆ ನೀಡಿ
ಗರ್ಭಾವಸ್ಥೆ ಎನ್ನುವುದು ಅತ್ಯಂತ ಸೂಕ್ಷ್ಮ ಹಾಗೂ ವಿಶೇಷವಾದ ಹಂತವಾಗಿರುವುದರಿಂದ ಸಾಕಷ್ಟು ವಿಶ್ರಾಂತಿಯನ್ನು ಪಡೆದುಕೊಳ್ಳಬೇಕು. ಗರ್ಭಿಣಿಯರು ಸಹ ವಿಶ್ರಾಂತಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಲಾಗುವುದು. ಅದರಲ್ಲೂ ವಿಶೇಷವಾಗಿ ಬೇಸಿಗೆಯ ಸಮಯದಲ್ಲಿ ಉಂಟಾಗುವ ಉರಿ, ಬೆವರಿನ ಕಿರಿಕಿರಿ ಹಾಗೂ ಆಯಾಸದ ಭಾವನೆಯು ಹೆಚ್ಚಾಗಿರುತ್ತದೆ. ಅಂತಹ ಸಮಯದಲ್ಲಿ ಯಾವುದೇ ಒತ್ತಡಕ್ಕೆ ಒಳಗಾಗದೆ, ಆದಷ್ಟು ವಿಶ್ರಾಂತಿಯನ್ನು ಪಡೆದುಕೊಳ್ಳಲು ಆದ್ಯತೆ ನೀಡಬೇಕು.
ಇದರಿಂದ ನಿಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯವು ಆರಾಮದಾಯಕ ಸ್ಥಿತಿಯಲ್ಲಿ ಇರುತ್ತದೆ. ನೀವು ಹೆಚ್ಚು ವಿಶ್ರಾಂತಿ ಪಡೆಯುವುದರಿಂದ ಮಗುವಿನ ಚಟುವಟಿಕೆ ಹೆಚ್ಚಾಗಿರುತ್ತದೆ. ಅಂತಹ ಸಂದರ್ಭದಲ್ಲಿ ನೀವು ಸಹ ಅದನ್ನು ಗಮನಿಸಬಹುದು ಅಥವಾ ಅನುಭವಿಸಬಹುದು. ನಿತ್ಯವೂ ಲಘುವಾದ ವ್ಯಾಯಾಮ, ಪೌಷ್ಠಿಕ ಆಹಾರ, ರಸ ಭರಿತ ಹಣ್ಣು-ತರಕಾರಿಗಳ ಸೇವನೆ, ಹಾಲು ಮತ್ತು ಮಜ್ಜಿಗೆಯ ಬಳಕೆ, ವೈದ್ಯರು ಸಲಹೆ ನೀಡಿರುವ ಔಷಧಗಳ ಸೇವನೆಗಳನ್ನು ಸೂಕ್ತವಾಗಿ ಅನುಸರಿಸಬೇಕು. ಆಗ ಗರ್ಭಾವಸ್ಥೆಯನ್ನು ಹೆಚ್ಚು ಆನಂದದಾಯಕ ಹಾಗೂ ಸುಂದರವಾದ ಅನುಭವಗಳ ಮೂಲಕ ಕಳೆಯಬಹುದು.
ಸಂಗ್ರಹ : SB
ಮೂಲ: K B