January 18, 2025
Pearl copy

      ಮುದ್ರದಡಿಯಲ್ಲಿ ಚಿಪ್ಪಿನೊಳಗಡೆ ಲಕ್ಷಾಂತರ ಮುತ್ತುಗಳಿದ್ದರೂ ಅವುಗಳ ಬೆಲೆ ನಗಣ್ಯ. ಆದರೆ ಆ ಮುತ್ತುಗಳನ್ನು ಚಿಪ್ಪಿನಿಂದ ಹೊರತೆಗೆದು ತಂದಾಗಲೇ ಅವುಗಳಿಗೊಂದು ಬೆಲೆ.ಹಾಗೆಯೇ ಒಬ್ಬರಲ್ಲಿ ಅಡಗಿರುವ ಪ್ರತಿಭೆ ಹೊರಜಗತ್ತಿಗೆ ತಿಳಿದಾಗಲೇ ಆಪ್ರತಿಭೆಗೂ,ಆ ವ್ಯಕ್ತಿಗೂ ಒಂದು ಗೌರವ,ಬೆಲೆ.ನಮ್ಮ ಭಂಡಾರಿ ಕುಟುಂಬದವರಲ್ಲಿ ಸುಪ್ತವಾಗಿರುವ ಪ್ರತಿಭೆಗಳನ್ನು ಹೊರತೆಗೆಯಲು “ಭಂಡಾರಿವಾರ್ತೆ” ಆರಂಭಿಸಿದ ಅಂಕಣವೇ “ಚಿಪ್ಪಿನೊಳಗಿನ ಭಂಡಾರಿ ಮುತ್ತು”

      ಈ ಸಂಚಿಕೆಯಲ್ಲಿ ನಾವು ಹೆಕ್ಕಿ ತಂದಿರುವ ಚಿಪ್ಪಿನೊಳಗಿನ ಭಂಡಾರಿ ಮುತ್ತು ಚೆಸ್ ಆಟದಲ್ಲಿ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿರುವ “ಸೃಜನ ಚಂದ್ರಶೇಖರ ಭಂಡಾರಿ.”
ನಮ್ಮ ಬುದ್ಧಿಮತ್ತೆಯನ್ನು ಒರೆಗೆ ಹಚ್ಚುವ ಈ ಚದುರಂಗದಾಟದಲ್ಲಿ ಅದ್ಭುತ ಸಾಧನೆ ಮಾಡಿರುವ ಇವರು ಬಂಟ್ವಾಳ ತಾಲ್ಲೂಕಿನ ಮುಂಡಾಡಿಯ “ಶ್ರೀ ಚಂದ್ರಶೇಖರ ಭಂಡಾರಿ ಮತ್ತು ಶ್ರೀಮತಿ ರೇವತಿ ಚಂದ್ರಶೇಖರ ಭಂಡಾರಿ” ಯವರ ಮಗಳು.
      ಬಂಟ್ವಾಳದ S.V.S. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎಂಟನೇ ತರಗತಿಯಲ್ಲಿ ಓದುತ್ತಿರುವ ಇವರ ಸಾಧನೆ ನೋಡಿದರೆ ಎಂಥವರೂ ಹುಬ್ಬೇರಿಸಬೇಕು. ಐದನೇ ವರ್ಷಕ್ಕೆ ಚೆಸ್ ಆಡಲು ಆರಂಭಿಸಿದ ಇವರು ತಾಲ್ಲೂಕು ಮಟ್ಟದಲ್ಲಿ, ಜಿಲ್ಲಾ ಮಟ್ಟದಲ್ಲಿ,ವಿಭಾಗ ಮಟ್ಟದಲ್ಲಿ ಹಾಗೂ ರಾಜ್ಯ ಮಟ್ಟದಲ್ಲಿ ಸುಮಾರು ಎಪ್ಪತ್ತಕ್ಕಿಂತಲೂ ಹೆಚ್ಚು ಸ್ಪರ್ಧೆಗಳಲ್ಲಿ ಭಾಗವಹಿಸಿ, ನಲವತ್ತೈದಕ್ಕೂ ಹೆಚ್ಚು ಬಾರಿ ಬಹುಮಾನ ಗಳಿಸಿರುವುದು ಇವರ ಹೆಗ್ಗಳಿಕೆ.

“ಇವರ ಸಾಧನೆಗಳು ಮತ್ತು ಸನ್ಮಾನಗಳು”
🥇 ಜಿಲ್ಲಾ ಮಟ್ಟದ ಹದಿಮೂರರ ವಯೋಮಾನದ ಚೆಸ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ.
🥇 ಜಿಲ್ಲಾ ಮಟ್ಟದ ಹದಿನಾಲ್ಕರ ವಯೋಮಾನದ ಚೆಸ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ.
🥇 ಕಳೆದ ಸಾಲಿನಲ್ಲಿ ಮಂಡ್ಯದಲ್ಲಿ ಜರುಗಿದ ರಾಜ್ಯ ಮಟ್ಟದ ಚೆಸ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ.
🏅 ಕೇರಳದ ಕಣ್ಣೂರಿನಲ್ಲಿ ನೆಡೆದ ರಾಷ್ಟ್ರ ಮಟ್ಟದ ಚೆಸ್ ಸ್ಪರ್ಧೆಯಲ್ಲಿ ಒಂಬತ್ತನೇ ಸ್ಥಾನ.
🥈 ಬಂಟ್ವಾಳದಲ್ಲಿ ಜರುಗಿದ ಅಂತರಜಿಲ್ಲಾ ಮಟ್ಟದ ಚೆಸ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ.
🥉 ಮಂಗಳೂರಿನಲ್ಲಿ ಜರುಗಿದ ಅಂತರಜಿಲ್ಲಾ ಮಟ್ಟದ ಚೆಸ್ ಸ್ಪರ್ಧೆಯಲ್ಲಿ ತೃತೀಯ ಸ್ಥಾನ.
🥈 ಕಿಂಗ್ಸ್ ಅಕಾಡೆಮಿ ಮಂಗಳೂರು ಫೋರಂ, ಪಿಜ್ಜಾ ಮಾಲ್ ಮಂಗಳೂರು ಇವರ ನೇತೃತ್ವದಲ್ಲಿ ನೆಡೆದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ.
      ಹೀಗೆ ಹಲವಾರು ಪ್ರಶಸ್ತಿಗಳನ್ನು ಪಡೆದಿರುವ ಇವರನ್ನು ಇವರು ವ್ಯಾಸಂಗ ಮಾಡುತ್ತಿರುವ ಶಾಲೆಯವರು ಬಂಗಾರದ ಪದಕ ನೀಡಿ ಗೌರವಿಸಿದ್ದಾರೆ. ಮತ್ತು ಇವರ ಸಾಧನೆಯನ್ನು ಗುರುತಿಸಿ ಬಂಟ್ವಾಳ ಪುರಸಭೆಯ ವತಿಯಿಂದ ನಗದು ಬಹುಮಾನ ನೀಡಿ ಸನ್ಮಾನಿಸಲಾಗಿದೆ.

       ಅಂತರಾಷ್ಟ್ರೀಯ ಮಟ್ಟದಲ್ಲಿ ಆಡುವ ಅರ್ಹತೆಯ ಫಿಡರೇಟಿಂಗ್ ಹೊಂದಿರುವ ಇವರು ಈ ಬಾರಿಯ ಹದಿನಾಲ್ಕರ ವಯೋಮಾನದವರ ರಾಜ್ಯ ಮಟ್ಟದ ಚೆಸ್ ಸ್ಪರ್ಧೆಗೆ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ.
      ಇವರಿಗೆ ಬೆನ್ನೆಲುಬಾಗಿ ನಿಂತಿರುವುದು ಮಂಗಳೂರಿನ ಡೆರಿಕ್ ಚೆಸ್ ತರಬೇತಿ ಸಂಸ್ಥೆಯ “ಡೆರಿಕ್ ಪಿಂಟೋ ಮತ್ತು ಪ್ರಸನ್ನ ರಾವ್.” ಜೊತೆಗೆ ಚೆಸ್ ನಲ್ಲಿ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿರುವ ಅಣ್ಣ “ಅನೀಷ್ ಚರಿತ್ ಭಂಡಾರಿ” ಯವರ ನಿರಂತರ ಪ್ರೋತ್ಸಾಹವೂ ಇದೆ.
      ನಮ್ಮ ಭಂಡಾರಿ ಕುಟುಂಬದ ಕುಡಿ “ಸೃಜನ ಚಂದ್ರಶೇಖರ ಭಂಡಾರಿ” ಇನ್ನಷ್ಟು ಸಾಧನೆ ಮಾಡಲಿ…ಇನ್ನಷ್ಟು ಎತ್ತರಕ್ಕೇರಲಿ ಎಂಬುದು ಭಂಡಾರಿ ಕುಟುಂಬದ ಮನೆಮನದ ಮಾತು “ಭಂಡಾರಿವಾರ್ತೆ” ತಂಡದ ಶುಭಹಾರೈಕೆ.

ಮಾಹಿತಿ: ಕಿಶೋರ್ ಸೊರ್ನಾಡು

✍ : ಭಾಸ್ಕರ್ ಭಂಡಾರಿ. ಸಿ.ಆರ್,ಶಿರಾಳಕೊಪ್ಪ, ಭಂಡಾರಿ ವಾರ್ತೆ

2 thoughts on “ಚಿಪ್ಪಿನೊಳಗಿನ ಭಂಡಾರಿ ಮುತ್ತು – 2

  1. Miss SHRAJANA,
    I couldn’t completely read your achievements,
    Madam you made me proud to be a Bhandary.

    Like to call on you, next time when i visit my sisters at “Mairanpade” Bantwala.
    Thank you.

  2. I hope Mr. Aneesh charit Bhandary too will accommodate me.

    Thank you too, Mr. Aneesh Charit Bhandary.

Leave a Reply

Your email address will not be published. Required fields are marked *