

ಕಡಲ ತೀರದಿ ಕುಳಿತರೆ ಸಾಕು ಬೋರ್ ಕಳೆಯಲು.
* ಮಗುವಾಗಿದ್ದಾಗ ಬೇಕಾಗಿತ್ತು ತಾಯಿಯ ಸ್ತನಪಾನ,
ಈಗ ತಾಯಿಗಿಂತ ದೊಡ್ಡದು ಅವನ ಸ್ಥಾನಮಾನ.
* ಜೊತೆಯಲ್ಲಿದ್ದರೆ ಒಂದು ಪೆಗ್ಗು,
ಕಲಾವಿದನ ಕುಂಚದಲ್ಲಿ ಮೂಡುತ್ತದೆ ಅವಳ
ಉಬ್ಬು ತಗ್ಗು.
* ನನ್ನವಳ ಜೊತೆಯಿರಲು ಪ್ರೀತಿಯ ಪುಳಕ,
ಮಣಿದ ಮನಕೆ ದಣಿವ ತವಕ.
* ಬೇಸರದ ಹಾದಿಯಲಿ ನೇಸರನ ಅರಸುತ್ತಿದೆ ನನ್ನ ಕಂಗಳು,
ಆದರೂ ಅವಳ ಕಂಗಳಲ್ಲಿ ನೋಡುತ್ತೇನೆ ಬೆಳದಿಂಗಳು.
