September 20, 2024

ಭಂಡಾರಿ ಸಮಾಜ ಸಂಘ (ರಿ) ಬೆಂಗಳೂರು ವಲಯದ ಕೇಂದ್ರ ಕಚೇರಿಯ ಪದಾಧಿಕಾರಿಗಳ ಮತ್ತು ಘಟಕಗಳ ಪದಾಧಿಕಾರಿಗಳ ಸಮನ್ವಯ ಸಭೆಯು ಮಾರ್ಚ್ 22 ರ ಮಂಗಳವಾರದಂದು ಬೆಳಿಗ್ಗೆ 11 ಗಂಟೆಗೆ ಗೂಗಲ್ ಮೀಟ್ ನ ಮೂಲಕ ಆನ್ ಲೈನ್ ನಲ್ಲಿ ಜರಗಿತು.


ಸಂಘದ ಕೇಂದ್ರ ಕಚೇರಿ ಮತ್ತು ಘಟಕಗಳ ನಡುವೆ ಸಮನ್ವಯತೆ ಸಾದಿಸುವ ನಿಟ್ಟಿನಲ್ಲಿ ಈ ಸಭೆಯು ಮಹತ್ವದ್ದಾಗಿತ್ತು ಮತ್ತು ಘಟಕಗಳ ಪದಾಧಿಕಾರಿಗಳು ಬೆಂಗಳೂರಿನಲ್ಲಿ ನೇರ ಸಭೆಗಳನ್ನು ಆಯೋಜಿಸಿದಾಗ ನಾನಾ ಕಾರಣಗಳಿಂದ ಭಾಗವಹಿಸುವುದು ಅಸಾಧ್ಯವಾಗಿದ್ದುಈ ಸಭೆಯು ಆನ್ ಲೈನ್ ನಲ್ಲಿ ಹಮ್ಮಿಕೊಂಡ ಕಾರಣದಿಂದ ಮತ್ತು ಮಂಗಳವಾರವೇ ಆಯೋಜಿಸಿರುವುದರಿಂದ ಘಟಕದ ಪದಾಧಿಕಾರಿಗಳಿಗೆ ಪಾಲ್ಗೊಳ್ಳಲು ಸಾಧ್ಯವಾಯಿತು.

ಪ್ರಧಾನ ಕಾರ್ಯದರ್ಶಿ ಶ್ರೀ ಕುಶಲ್ ಭಂಡಾರಿ ಹಾಜರಿದ್ದ ಎಲ್ಲಾ ಪದಾಧಿಕಾರಿಗಳನ್ನು ಸ್ವಾಗತಿಸಿ ಸಭೆಯ ಮುಖ್ಯ ಅಜೆಂಡಾವನ್ನು ತಿಳಿಸುತ್ತಾ ಸಂಘದ ನೂತನ ಯೋಜನೆಯಾದ ವಿದ್ಯಾನಿಧಿ ದೇಣಿಗೆ ಸಂಗ್ರಹ ಅಭಿಯಾನದ ಕುರಿತು ಈಗಾಗಲೇ ವಿಜ್ಞಾಪನೆಯನ್ನು ಸಂಘದ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಮತ್ತು ನಮ್ಮ ಸಮಾಜದ ಮುಖವಾಣಿಯಾದ ಕಚ್ಚೂರು ವಾಣಿಯಲ್ಲಿ ಪ್ರಕಟಿಸಿದ್ದು , ಘಟಕಗಳಲ್ಲಿ ಇದನ್ನು ಯಶಸ್ಸುಗೊಳಿಸುವ ಬಗ್ಗೆ ರೂಪುರೇಷೆಯನ್ನು ಇಂದಿನ ಸಭೆಯಲ್ಲಿ ಚರ್ಚಿಸುವಂತೆ ವಿನಂತಿಸಿಕೊಂಡು ಈ ಬಗ್ಗೆ ಅಧ್ಯಕ್ಷರಾದ ಪ್ರಸಾದ್ ಭಂಡಾರಿ ಮುನಿಯಾಲ್ ಸಂಕ್ಷಿಪ್ತವಾಗಿ ವಿವರಣೆ ನೀಡಬೇಕೆಂದು ಕೋರಿಕೊಂಡರು.


ಭಸಸ ಬೆಂಗಳೂರು ಅಧ್ಯಕ್ಷರಾದ ಪ್ರಸಾದ್ ಭಂಡಾರಿ ಮುನಿಯಾಲ್ ಮಾತನಾಡಿ ಕಳೆದ ಹಲವು ವರ್ಷಗಳಿಂದ ನಾವು ಬೆಂಗಳೂರು ವಲಯದ 10 ಘಟಕಗಳಿಗೆ ವಿದ್ಯಾರ್ಥಿವೇತನವನ್ನು ನೀಡುತ್ತಾ ಬಂದಿದ್ದು, ಈಗ ಆ  ವಿದ್ಯಾರ್ಥಿಗಳು ಉದ್ಯೋಗ ಪಡೆದು ದುಡಿಯುತ್ತಿರಬಹುದು ಅವರನ್ನು ಸಂಪರ್ಕಿಸಿ ವಿದ್ಯಾನಿಧಿಗೆ ದೇಣಿಗೆ ಸಲ್ಲಿಸುವಂತೆ ಮನವಿ ಮಾಡಬೇಕಾಗಿ ಸಭೆಯಲ್ಲಿ ಹೇಳಿದರು.  ಇದಕ್ಕೆ ಎಲ್ಲಾ ಘಟಕದ ಅಧ್ಯಕ್ಷರು ಸಹಕರಿಸುವಂತೆ ವಿನಂತಿಸಿದರು.

ಇಲ್ಲಿಯವರೆಗೆ ನಾವು ವಿದ್ಯಾರ್ಥಿವೇತನ ಕೊಟ್ಟವರ ಪಟ್ಟಿಯನ್ನು ತಯಾರಿಸಿ ಘಟಕದ ಪದಾಧಿಕಾರಿಗಳ ಸಹಾಯದಿಂದ ಅವರನ್ನು ಸಂಪರ್ಕಿಸುವಂತೆ ನಿರ್ಧರಿಸಲಾಯಿತು.

ಘಟಕಗಳೊಂದಿಗೆ ಇನ್ನುಾ ಹೆಚ್ಚಿನ ಸಮನ್ವಯ ಸಾಧಿಸಲು ಮುಾರು ತಿಂಗಳಿಗೊಮ್ಮೆ ಗುಾಗಲ್ ಮೀಟ್ ಮುಖಾಂತರ ಸಭೆ ಮಾಡುವ ಸಲಹೆಯನ್ನು ನೀಡಿದರು!
ಗೌರಾವಧ್ಯಕ್ಷರಾದ ಲಕ್ಷ್ಮಣ ಭಂಡಾರಿಯವರು ಸಭೆಯಲ್ಲಿ ಅಮುಾಲ್ಯ ಸಲಹೆ ನೀಡಿದರು.

ಘಟಕದ ಪಧಾಧಿಕಾರಿಗಳೊಂದಿಗೆ ಏಪ್ರಿಲ್ 10 ರಂದು ಹೊಸನಗರದಲ್ಲಿ ಮೀಟಿಂಗ್ ಮಾಡುವಂತೆ ಸಭೆಯಲ್ಲಿ ನಿರ್ಧರಿಸಲಾಯಿತು ಮತ್ತು ಎಲ್ಲರುಾ ಅದಕ್ಕೆ ಸಹಮತ ವ್ಯಕ್ತಪಡಿಸಿದರು.

ಕೊಪ್ಪ ಘಟಕದ ಅಧ್ಯಕ್ಷರಾದ ನಾಗರಾಜ್ ಭಂಡಾರಿ ಮತ್ತು ಕಾರ್ಯದರ್ಶಿಯವರಾದ ಸುರೇಶ ಭಂಡಾರಿ , ರಿಪ್ಪನಪೇಟೆ ಘಟಕದ ಅಧ್ಯಕ್ಷರಾದ ಗೋಪಾಲ್ ಭಂಡಾರಿ ಮತ್ತು ಕಾರ್ಯದರ್ಶಿಯವರಾದ ಮಂಜುನಾಥ್ ಭಂಡಾರಿ , ಹೊಸನಗರ ಘಟಕದ ಅಧ್ಯಕ್ಷರಾದ ಮಂಜುನಾಥ್ ಭಂಡಾರಿ , ಮೂಡಿಗೆರೆ ಘಟಕದ ಅಧ್ಯಕ್ಷರಾದ ಷಣ್ಮುಖಾನಂದ ಭಂಡಾರಿ , ಬಾಳೆಹೊನ್ನೂರು ಘಟಕದ ಅಧ್ಯಕ್ಷರಾದ ಸುನಿಲ್ ರಾಜ್ ಭಂಡಾರಿ , ತೀರ್ಥಹಳ್ಳಿ ಘಟಕದ ಅಧ್ಯಕ್ಷರಾದ ಗಿರೀಶ್ ಭಂಡಾರಿ ಭಾಗವಹಿಸಿ ಉಪಯುಕ್ತ ಸಲಹೆ ನೀಡಿದರು .
ಘಟಕಗಳ ಪ್ರತಿನಿಧಿ ಹಾಗೂ ಭಸಸ ಬೆಂಗಳೂರು ಉಪಾಧ್ಯಕ್ಷರಾದ ಸುಧಾಕರ್ ಭಂಡಾರಿ ಶಿರಾಳಕೊಪ್ಪ ರವರ ವಂದನಾರ್ಪಣೆಯೊಂದಿಗೆ ಸಭೆ ಮುಕ್ತಾಯಗೊಂಡಿತು.

-ಭಂಡಾರಿ ವಾರ್ತೆ 

Leave a Reply

Your email address will not be published. Required fields are marked *