
ಆಗಸ್ಟ್ 11 ಮತ್ತು 12 ರಂದು ಬೆಂಗಳೂರು ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ ಜರುಗಿದ ಆಲ್ ಇಂಡಿಯಾ ಹಕುವಾಕಿ ಓಪನ್ ಕರಾಟೆ ಚಾಂಪಿಯನ್ ಷಿಪ್-2018 ರಲ್ಲಿ ಉಡುಪಿ ಕರಂಬಳ್ಳಿಯ ವಿ.ಎಂ.ನಗರದ ದರ್ಶನ್.ಪಿ.ಭಂಡಾರಿ ಕಾಟಾ ವಿಭಾಗದಲ್ಲಿ ಪ್ರಥಮ ಮತ್ತು ಕುಮಿಟೆ ವಿಭಾಗದಲ್ಲಿ ತೃತೀಯ ಬಹುಮಾನ ಗಳಿಸಿದ್ದಾರೆ.
ನಮ್ಮ ಭಂಡಾರಿವಾರ್ತೆ ತಂಡದ ಹೆಮ್ಮೆಯ ಓದುಗರಲ್ಲೊಬ್ಬರಾದ ಪವಿತ್ರ ಭಂಡಾರಿಯವರ ಪುತ್ರನಾದ ದರ್ಶನ್ ಉಡುಪಿ ಕುಂಜಿಬೆಟ್ಟು ಟಿ.ಎ.ಪೈ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್ ನಲ್ಲಿ ಎಂಟನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ವರ್ಷದಿಂದ ವರ್ಷಕ್ಕೆ ಕರಾಟೆಯಲ್ಲಿ ಹೆಚ್ಚಿನ ಸಾಧನೆ ಮಾಡುತ್ತಾ ತನ್ನ ಅಕ್ಕ ಸಾಕ್ಷಿ.ಪಿ ಭಂಡಾರಿಯವರ ಹಾದಿಯಲ್ಲಿ ಸಾಗುತ್ತಿರುವ ದರ್ಶನ್ ಕರಾಟೆಯಲ್ಲಿ ಇನ್ನೂ ಎತ್ತರಕ್ಕೆ ಏರಲಿ,ಜೊತೆಜೊತೆಗೆ ವಿಧ್ಯಾಭ್ಯಾಸದಲ್ಲೂ ಯಶಸ್ಸು ಗಳಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹಾರ್ದಿಕವಾಗಿ ಶುಭ ಹಾರೈಸುತ್ತದೆ.
ವರದಿ: ಭಾಸ್ಕರ್ ಭಂಡಾರಿ ಶಿರಾಳಕೊಪ್ಪ.