January 18, 2025
94
ಪಯಣ
ಪಯಣವು ಸ್ನೇಹವಾಗುವುದು 
ಮೌನದ ದಾರಿ ಒಂಟಿಯಾದಾಗ 
ಕವನವು ಪ್ರೀತಿಯಾಗುವುದು
ಕನಸು ದಾರಿ ಹಿಡಿದಾಗ
*******
 ಸಂಯಮ
ಆತುರತೆಯ ಅಮಲಿನಲ್ಲಿ 
ಸಂಯಮ ಕಳೆದುಕೊಳ್ಳಬೇಕಿಲ್ಲ 
ಮಧುರ ಬಾಂಧವ್ಯದಲ್ಲಿ 
ನಂಬಿಕೆ ಇಲ್ಲದ ಬಾಳು ಬಾಳಲ್ಲ
******
 ಮಗು
ಅರುಳು ಮರುಳು ನೀನು ಬರಲು 
ಮನವಾಗಿದೆ ಮೌನದ ಸಂತೆ 
ಜೀವನಪೂರ್ತಿ ಜೊತೆಗೆ ಇದ್ದರೆ 
ನಾನಾಗಿರುವ ಮಗುವಂತೆ 
******
 ನೆನಪು
ಕಾಣದ ಒಂದು ಕಡಲು 
ಕಣ್ಣೀರಿಗದು ಒಡಲು 
ಮಳೆ ಹನಿಯ ಚೆಲ್ಲಿ 
ಒಲವು ಅವಳಲ್ಲಿ 
ಪ್ರೀತಿಯ ನೆನಪಲ್ಲಿ 
ಕವನದ ನೆಪದಲ್ಲಿ 
********
 ಕವನ 
ಕವನವೊಂದು ಬರೆದಿರುವೆ ನಿನಗಾಗಿ 
ಕನಸಲ್ಲಿ ಕಾಡುವೆ ಮಧುರವಾಗಿ
ಕಾಣಿಸದೆ ಓಡುವೆ ಏಕೆ?
ಕಲ್ಪನೆಯಲ್ಲೇ ಕಾಯುವೆ ಹಾಯಾಗಿ
********
 ಪ್ರೀತಿ 
ನಯವಾಗಿ ವಿನಂತಿಸುವೆ 
ಸುಳಿಯಬೇಡ ನನ್ನ ಮುಂದೆ 
ಏಕೆಂದರೆ ಮತ್ತೆ ಪ್ರೀತಿಗಾಗಿ 
ಬರುವೆ ನಿನ್ನ ಹಿಂದೆ 
********
✍: ದೀಕ್ಷಿತ್ ಭಂಡಾರಿ, ಉಜಿರೆ

Leave a Reply

Your email address will not be published. Required fields are marked *