
ಪ್ರಕೃತಿಯನ್ನು ಆರಾಧಿಸುವ ನಾವು ಗಾಳಿ, ಬೆಂಕಿ, ನೀರಲ್ಲಿ ದೇವರನ್ನು ಕಾಣುತ್ತೇವೆ. ಅಂತೆಯೇ ಗೋವುಗಳನ್ನು ಪೂಜೆ ಮಾಡುತ್ತೇವೆ. ಗೋ ಮಾತೆ ಎಂದು ಪೂಜಿಸುವ ಹಸುಗಳು ಭೂಮಾತೆ ಎಂದು ಕೂಡ ಕರೆಯಲ್ಪಡುತ್ತದೆ. ಹಸುವಿನ ಹಾಲನ್ನು ಪೌಷ್ಠಿಕತೆಯ ಬೆಳವಣಿಗೆಯನ್ನು ತೆಗೆದುಕೊಂಡು ಅಂತೆಯೇ ಅದರ ಗೋ ಮೂತ್ರವನ್ನು ಔಷಧೀಯ ತಯಾರಿಕೆಯಲ್ಲಿ ಬಳಸುತ್ತಾರೆ
ಸರ್ವ ಕಾಮಧೇನು ದೇವಿ ಸರ್ವ ತೀರ್ಥಾಭಿಷೇಜಿನಿ!
ಪಾಪನೇ ಸುರಭಿ ಶ್ರೇಷ್ಠೇ ದೇವಿ ತುಭ್ಯಂ ನಮೋಸ್ತುತೇ!!
ಕಾಮಧೇನು ಎಂದರೆ ಎಲ್ಲಾ ಅಭೀಷ್ಠಗಳನ್ನು ಪೂರೈಸುವ ದೇವಿ ಸ್ವರೂಪಿಣಿ, ೩೩ ಕೋಟಿ ದೇವಾನುದೇವತೆಗಳು ಗೋವುಗಳಲ್ಲಿ ವಾಸಿಸುತ್ತಾರೆ. ಇಂತಹ ಗೋವುಗಳನ್ನು ಪ್ರತಿನಿತ್ಯ ನಾವು ಆರಾಧಿಸೋಣ.
- ಹಸುಗಳಿಗೆ ಹುಲ್ಲು, ಬಾಳೆಹಣ್ಣನ್ನು ಕೊಟ್ಟರೆ ನಮಗೆ ಇರುವ ಮಾತೃ, ಪಿತೃ, ದೋಷಗಳು ಪರಿಹಾರವಾಗುವುದು
- ಹಸುಗಳಿಗೆ ನೀರು ಮತ್ತು ಆಹಾರವನ್ನು ನೀಡಿದರೆ, ಮನೆ ಅಥವಾ ಆಸ್ತಿ ಖರೀದಿಸುವ ಶಕ್ತಿಯನ್ನು ನೀಡುವುದು
- ಶುಕ್ರವಾರದಂದು ಪೂಜಿಸಿದರೆ ಮಹಾಲಕ್ಷ್ಮೀಯು ಅನುಗ್ರಹಿಸುವಳು.
- ಗೋ ಅಷ್ಟಮಿ (ಗೋಕುಲಾಷ್ಟಮಿ) ಎಂದು ನಾವು ಶ್ರೀಕೃಷ್ಣನ ಜನ್ಮಾಷ್ಟಮಿಯಂದು ಆಚರಿಸುತ್ತೇವೆ. ಜಗತ್ಪಾಲಕ, ಜಗದೋದ್ಧಾರಕನಾದ ಶ್ರೀಕೃಷ್ಣನು ಗೋಪಾಲನೆಂದು ಕರೆಯಿಸಿಕೊಳ್ಳುತ್ತಾನೆ. ಗೋವರ್ಧನ ಗಿರಿಯನ್ನು ತನ್ನ ಕಿರುಬೆರಳಿನಿಂದ ಎತ್ತುವ ಶ್ರಿಕೃಷ್ಣನ ಉದ್ದೇಶವೇ ಹಸುಗಳ ರಕ್ಷಣೆ.
- ಹಸುವಿನ ಹಾಲನ್ನು ಹುಟ್ಟಿದ ಮಗುವಿಗೆ ಕೊಡಲಾಗುವುದು ಆ ಹಾಲು ತಾಯಿಯ ಹಾಲಿಗೆ ಸಮಾನವಾಗಿದೆ
- ಪಂಚಗವ್ಯವನ್ನು ಸಸಿಗಳ ಬೆಳವಣಿಗೆಗೆ ಬಳಸಲಾಗುವುದು
- ದೀಪಾವಳಿಯ ೩ ನೇ ದಿನವಾದ ಬಲಿ ಪಾಡ್ಯಮಿಯಂದು ಗೋವುಗಳನ್ನುಪೂಜಿಸುತ್ತಾರೆ. ಲಕ್ಷ್ಮೀಗೆ ಸಮಾನಳಾದ ಗೋಮಾತೆ ಎಲ್ಲರ ಮನೆಯಲ್ಲೂ ಬಂದು ನೆಲಸಲಿ ಎಂದು ಪೂಜಿಸೋಣ ನಮ್ಮೆಲ್ಲರ ಸಂಕಷ್ಟಗಳನ್ನು ಪರಿಹರಿಸಲಿ ಎಂದು ಬೇಡಿಕೊಳ್ಳೋಣ.
ಲಕ್ಷ್ಮೀರ್ಯಾ ಲೋಕಪಾಲನಾಂ ಧೇನುರೂಪೇಣ ಸಂಸ್ಥಿತಾ!
ಘೃತಂ ವಹತಿ ಯಜ್ಞಾರ್ಥಂ ಮಮ ಪಾಪಂ ವ್ಯಪೋಹತೋ!!.
