November 23, 2024
Nithika 1
ಮುಂಬಯಿ ದೊಂಬಿವಿಲಿಯ ಶ್ರೀ ಸುರೇಶ್ ಕುಂದರ್ ಮತ್ತು ಶ್ರೀಮತಿ ವಿಶಾಲಾಕ್ಷಿ ಸುರೇಶ್ ಕುಂದರ್ ದಂಪತಿಗಳ ಪುತ್ರಿ ಕುಮಾರಿ ನಿತಿಕಾ ಸುರೇಶ್ ಕುಂದರ್ ಏಪ್ರಿಲ್ 5 ರ ಗುರುವಾರ ಸಂಜೆ 6:30 ಕ್ಕೆ ಆಕಸ್ಮಿಕ ಮರಣ ಹೊಂದಿದ್ದಾರೆ. ಅವರಿಗೆ 19 ವರ್ಷ ವಯಸ್ಸಾಗಿತ್ತು.
ದೊಂಬಿವಿಲಿಯ ಎಸ್ ಐ ಎ (S I A) ಕಾಲೇಜಿನಲ್ಲಿ ಪ್ರಥಮ ವರ್ಷದ ಬಿ.ಕಾಂ. ವ್ಯಾಸಂಗ ಮಾಡುತ್ತಿದ್ದ ಇವರ ತಾಯಿ ಶ್ರೀಮತಿ ವಿಶಾಲಾಕ್ಷಿ ಮೂಲ್ಕಿಯ ಚಿತ್ರಾಪು ಮೂಲದವರು.
ಮುದ್ದಿನ ಮಗಳ ಅಕಾಲಿಕ ಮರಣದಿಂದ ಆಘಾತಕ್ಕೊಳಗಾದ ತಂದೆ, ತಾಯಿ, ಅಜ್ಜ, ಅಜ್ಜಿ, ಅಣ್ಣ ನಿತಿನ್ ,ಮಾವ ಉಮೇಶ್ ಭಂಡಾರಿ ಮತ್ತು ಕುಟುಂಬಸ್ಥರಿಗೆ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತನು ದಯಪಾಲಿಸಲಿ ಮತ್ತು ಮೃತರ ಆತ್ಮಕ್ಕೆ ಚಿರಶಾಂತಿ ಲಭಿಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು “ಭಂಡಾರಿವಾರ್ತೆ” ಶ್ರೀ ದೇವರಲ್ಲಿ ಪ್ರಾರ್ಥಿಸುತ್ತದೆ.
-ಭಂಡಾರಿವಾರ್ತೆ

1 thought on “ಮುಂಬಯಿಯ ಕುಮಾರಿ ನಿತಿಕಾ ಕುಂದರ್ ವಿಧಿವಶ

Leave a Reply

Your email address will not be published. Required fields are marked *