January 18, 2025
obituary

ಉಡುಪಿ ಕರಂಬಳ್ಳಿ ವಿ.ಎಮ್.ನಗರದ ಶ್ರೀ ದಾಮೋದರ ಭಂಡಾರಿಯವರ ಇಪ್ಪತ್ತೆರಡನೆಯ ವರ್ಷದ ವಾರ್ಷಿಕ ಪುಣ್ಯಸ್ಮರಣೆಯನ್ನು ಆಗಸ್ಟ್ 5 ರ ಭಾನುವಾರ ಅವರ ಮಡದಿ, ಮಕ್ಕಳು, ಸೊಸೆ, ಮೊಮ್ಮಕ್ಕಳು ಮತ್ತು ಕುಟುಂಬಸ್ಥರೆಲ್ಲಾ ಸೇರಿ ಶೃದ್ಧಾಭಕ್ತಿಯಿಂದ ಆಚರಿಸುತ್ತಿದ್ದಾರೆ.


ನೀವು ನಮ್ಮನ್ನಗಲಿ ಇಪ್ಪತ್ತೆರಡು ವಸಂತಗಳು ಕಳೆದರೂ ನಿಮ್ಮ ನೆನಪು ನಮಗೆ ನಿರಂತರ ಸ್ಪೂರ್ತಿಯಾಗಿದೆ.ನಮ್ಮ ನೆನಪಲಿ ನೀವು ಅಜರಾಮರರಾಗಿದ್ದೀರಿ ಎಂದು ಅವರ ಪತ್ನಿ ಸುನಂದ ಭಂಡಾರಿ, ಮಗ ಶ್ರೀ ಉದಯ ಭಂಡಾರಿ, ಸೊಸೆ ಶ್ರೀಮತಿ ಮಮತಾ ಉದಯ ಭಂಡಾರಿ, ಮಗಳು ಪವಿತ್ರ ಭಂಡಾರಿ, ಕಿರಿಯ ಮಗ ಶ್ರೀ ರೋಹಿತ್ ಭಂಡಾರಿ, ಮೊಮ್ಮಕ್ಕಳಾದ ಸಾಕ್ಷಿ. ಪಿ. ಭಂಡಾರಿ, ದರ್ಶನ್.ಪಿ.ಭಂಡಾರಿ, ಧನುಷ್.ಯು.ಭಂಡಾರಿ ಮತ್ತು ಕುಟುಂಬಸ್ಥರು ತಮ್ಮ ಶ್ರದ್ಧಾಂಜಲಿಯನ್ನು ಅರ್ಪಿಸಿದ್ದಾರೆ.

ಕುಟುಂಬದ ಹಿರಿಯ ಚೇತನ ದಾಮೋದರ ಭಂಡಾರಿಯವರ ಪುಣ್ಯಸ್ಮರಣೆಯ ಈ ದಿನ ಕುಟುಂಬಸ್ಥರಿಗೆ ಅವರ ನೆನಪು ಪುನಶ್ಚೇತನವನ್ನು ನೀಡಲಿ,ನೀವೆಲ್ಲಾ ಒಗ್ಗೂಡಿ ಆಚರಿಸುವ ಪುಣ್ಯಸ್ಮರಣೆ ಅಗಲಿದ ಆತ್ಮಕ್ಕೆ ಸಂತೃಪ್ತಿ ನೀಡಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ”ಯು ಪ್ರಾರ್ಥಿಸುತ್ತದೆ.

 

– ಭಂಡಾರಿವಾರ್ತೆ.

Leave a Reply

Your email address will not be published. Required fields are marked *