
ಮುಂಬಯಿಯ ಸಾಕಿನಾಕಾದ ಶ್ರೀ ರಮೇಶ್ ಮುಲ್ಕಾರ್ ಮತ್ತು ಶ್ರೀಮತಿ ಪ್ರೇಮಾ ರಮೇಶ್ ಮುಲ್ಕಾರ್ ದಂಪತಿಗಳ ಪುತ್ರ ಶ್ರೀ ಧನು ರಮೇಶ್ ಮುಲ್ಕಾರ್ ಫೆಬ್ರವರಿ 18 ರ ಭಾನುವಾರ ರಾತ್ರಿ ಅಕಾಲಿಕ ಮರಣ ಹೊಂದಿದ್ದಾರೆ. ಅವರಿಗೆ 32 ವರ್ಷ ವಯಸ್ಸಾಗಿತ್ತು.

ಮಗನಿಗೆ ಮದುವೆ ಮಾಡುವ ತಯಾರಿಯಲ್ಲಿದ್ದ ಪೋಷಕರಿಗೆ ಮಗನ ಅಕಾಲಿಕ ಮರಣ ಆಘಾತವನ್ನುಂಟು ಮಾಡಿದೆ. ಧನು ಮುಲ್ಕಾರ್ ನಿಧನದಿಂದ ಆಘಾತಕ್ಕೊಳಗಾದ ತಂದೆ ತಾಯಿ ಕುಟುಂಬಸ್ಥರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತನು ದಯಪಾಲಿಸಲಿ ಮತ್ತು ಅವರ ಆತ್ಮಕ್ಕೆ ಚಿರಶಾಂತಿ ಲಭಿಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಶ್ರೀ ದೇವರಲ್ಲಿ ಪ್ರಾರ್ಥಿಸುತ್ತದೆ.
—ಭಂಡಾರಿವಾರ್ತೆ