
ಜನವರಿ 3,2020 ರಿಂದ 9,2020 ರ ವರೆಗೆ ನವದೆಹಲಿಯಲ್ಲಿ ಜರುಗಿದ 65 ನೇ ರಾಷ್ಟ್ರೀಯ ಶಾಲಾ ಕ್ರೀಡಾಕೂಟ 2019-20 ರಲ್ಲಿ ಹತ್ತೊಂಬತ್ತು ವರ್ಷದೊಳಗಿನ ಬಾಲಕಿಯರ ಕರ್ನಾಟಕ ರಾಜ್ಯ ಫ್ಲೋರ್ ಬಾಲ್ ತಂಡವನ್ನು ಪ್ರತಿನಿಧಿಸಿದ ಕುಮಾರಿ ಧನ್ಯ ಸುಕುಮಾರ ಭಂಡಾರಿಯವರು ದ್ವಿತೀಯ ಸ್ಥಾನ ಗಳಿಸಿರುತ್ತಾರೆ.

ಮೂಡುಬಿದಿರೆಯ ಜೈನ್ ಪದವಿ ಪೂರ್ವ ಕಾಲೇಜ್ ನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ಕುಮಾರಿ ಧನ್ಯ.ಎಸ್.ಭಂಡಾರಿಯವರು ಮೂಡುಬಿದಿರೆ ಉಳಿಯದ ಶ್ರೀ ಸುಕುಮಾರ ಭಂಡಾರಿ ಮತ್ತು ಶ್ರೀಮತಿ ಲೀಲಾವತಿ ಭಂಡಾರಿ ದಂಪತಿಯ ಪುತ್ರಿ.

ಕುಮಾರಿ ಧನ್ಯ ಸುಕುಮಾರ ಭಂಡಾರಿಯವರಿಗೆ “ಭಂಡಾರಿವಾರ್ತೆ” ತಂಡದಿಂದ ಹಾರ್ದಿಕ ಅಭಿನಂದನೆಗಳು.
“ಭಂಡಾರಿವಾರ್ತೆ.”