January 18, 2025
dinesh
       ಮಂಗಳೂರು ಪಂಪ್‌ವೆಲ್ ಕಂಕನಾಡಿ ದಂಬೆ ಮನೆ  ದಿ.ಕಿಟ್ಟಣ ಭಂಡಾರಿ ಮತ್ತು ದಿ.ಪದ್ಮಾವತಿ ದಂಪತಿ ಪುತ್ರ ದಿನೇಶ್  ದಂಬೆ (೫೭ ವರ್ಷ) ನ.೨೮ರಂದು ತೀವ್ರ  ಅನಾರೋಗ್ಯದಿಂದ  ಮಂಗಳೂರಿನ ವಿಜಯ ಕ್ಲಿನಿಕ್ ನಲ್ಲಿ ಚಿಕಿತ್ಸೆಗೆ  ಸ್ಪಂದಿಸದೆ ಮೃತಪಟ್ಟಿದ್ದಾರೆ.
         ತುಳು ರಂಗಭೂಮಿ ಕ್ಷೇತ್ರದಲ್ಲಿ ದಿನೇಶ್ ಕಂಕನಾಡಿ ಎಂದು ಹೆಸರುಗಳಿಸಿದ್ದ ಇವರು ನಾಟಕ ರಚನೆಯಲ್ಲಿ ನಿಸ್ಸೀಮರಾಗಿದ್ದರು. ಜತೆಗೆ ಆಸರೆ ಎಂಬ ನಾಟಕ ತಂಡದ ರೂವಾರಿಯಾಗಿಯೂ ಗುರುತಿಸಿಕೊಂಡಿದ್ದರು.
ಇವರು ರಚಿಸಿದ ಹತ್ತು ಹಲವು ನಾಟಕಗಳು ಅನೇಕ ಪ್ರದರ್ಶನಗಳನ್ನು ಕಂಡು ಕಲಾಭಿಮಾನಿಗಳ ಮನಗೆದ್ದಿತ್ತು. ಇವರ ನಾಟಕ  ಕುಸಲ್ದ  ಪರಬೆ ತುಳು ಮತ್ತು ಕೊಂಕಣಿಯಲ್ಲಿ ಪ್ರದರ್ಶನಗೊಂಡಿತ್ತು.
ಜತೆಗೆ ಬಲಿಪು ವಿಠಲ ಬಲಿಪು, ಯಮುನ ದಾನೆ ನಮೂನೆ, ಅಲೆಗಿನಿ ಶನಿವಾರ, ಮೂಡಾಯಿ ಪಡ್ಡೆಯಿ ಹಾಗೂ ಹೊಸ ನಾಟಕ  ಗುಸುಗುಸು ಉಂಡುಗೆ ಇನ್ನಷ್ಟೇ ಪ್ರದರ್ಶನ ಕಾಣಬೇಕಿದೆ. ಜತೆಗೆ ಇನ್ನಿತರ ಪ್ರಸಿದ್ಧ ನಾಟಕಗಳನ್ನು  ರಚಿಸಿದ್ದಾರೆ.
          ರಂಗಭೂಮಿ ಕ್ಷೇತ್ರದ ಸಾಧನೆಗಾಗಿ ಮಂಗಳೂರು ಭಂಡಾರಿ ಸಮಾಜ ಸಂಘ ಹಾಗೂ ಬೆಂಗಳೂರು ಭಂಡಾರಿ ಸಮಾಜ ಸಂಘದಲ್ಲಿ ಸನ್ಮಾನ ಪಡೆದಿದ್ದಾರೆ.
          ಪ್ರತಿ ಗುರುವಾರ ರಾತ್ರಿ ಇವರ ಮನೆಯಲ್ಲಿ ಆರ್ .ಎಸ್ .ಎಸ್.ನ ಶಾಖೆ ಇವರ ನೇತೃತ್ವದಲ್ಲೇ  ನಡೆಯುತ್ತಿತ್ತು. ವಿಶ್ವ ಹಿಂದೂ  ಪರಿಷತ್ ನಾಗುರಿ ಪ್ರಖಂಡದ ಅಧ್ಯಕ್ಷರಾಗಿದ್ದ ದಿನೇಶ್  ಸಹೃದಯಿ  ಹಾಗೂ ಅಜಾತ ಶತೃವಾಗಿದ್ದರು.
          ಮನೆಯಲ್ಲಿ  ಹೋಟೆಲ್ ಉದ್ಯಮವನ್ನು ತನ್ನ ಜೀವನದ   ವೃತ್ತಿಯನ್ನಾಗಿ ಮಾಡುತ್ತಿದ್ದರು. ಪತ್ನಿ  ಸುಕೃತಿ ಮತ್ತು ಪುತ್ರ ಭುವನ್ ಹಾಗೂ ಅಪಾರ ಬಂದು  ಮಿತ್ರರನ್ನು  ಅಗಲಿದ್ದಾರೆ.

ಭಗವಂತನು ಕುಟುಂಬವರ್ಗದವರಿಗೆ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ದಯಪಾಲಿಸಲಿ ಮತ್ತು ಅವರ ಆತ್ಮಕ್ಕೆ ಚಿರಶಾಂತಿ ಲಭಿಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಭಗವಂತನಲ್ಲಿ ಪ್ರಾರ್ಥಿಸುತ್ತದೆ.

ಭಂಡಾರಿವಾರ್ತೆ

Leave a Reply

Your email address will not be published. Required fields are marked *