January 18, 2025
depawali-8

       ತ್ತಲೆಯಿಂದ ಬೆಳಕಿನೆಡೆಗೆ’, ‘ಅಜ್ಞಾನದಿಂದ ಸುಜ್ಞಾನ’ದ ಕಡೆಗೆ ಮಾರ್ಗವನ್ನು ತೋರಿಸುವ ಬೆಳಕಿನ ಹಬ್ಬವೆಂದರೆ ಯಾರಿಗೆ ಪ್ರಿಯವಲ್ಲ ಹೇಳಿ.. ಬೆಳ್ಳಂಬೆಳಿಗ್ಗೆ ಎಣ್ಣೆ ಹಚ್ಚಿಕೊಂಡು ಬಿಸಿ ನೀರ ಸ್ನಾನ ಮಾಡಿಕೊಂಡು, ಅವಲಕ್ಕಿ ತಿನ್ನಲು ಕಾಯುತ್ತಿದ್ದೆವು. ರಾತ್ರಿಯಾಗುತ್ತಿದ್ದಂತೆ ಮಣ್ಣಿನ ಹಣತೆಯಲ್ಲಿ ಸಾಲು ಸಾಲು ದೀಪಗಳನ್ನು ಸುಂದರವಾಗಿ ಹಚ್ಚುತ್ತಿದ್ದೆವು. ಆಗ ನಕ್ಷತ್ರಕಡ್ಡಿ, ನೆಲಚಕ್ರ ಲಕ್ಷ್ಮೀ ಪಟಾಕಿಯನ್ನು ಹಚ್ಚಿ ಸಂಭ್ರಮಿಸುತ್ತಿದ್ದೆವು. ಹೀಗೆ ಬಾಲ್ಯದಲ್ಲಿ ನಡೆದ ಒಂದು ಘಟನೆ ಈಗಲೂ ನೆನಪಿಗೆ ಬರುತ್ತದೆ..
      ಒಂದು ಸಲ ನಾನು ಮತ್ತು ನನ್ನ ತಮ್ಮ ಇಬ್ಬರೂ ಸೇರಿ ನಕ್ಷತ್ರ ಕಡ್ಡಿಯನ್ನು ಹಿಡಿದುಕೊಂಡು ಖುಷಿ ಪಡುತ್ತಿದ್ದೆವು.. ನನ್ನ ತಂದೆ ಪಟಾಕಿಯನ್ನು ಎತ್ತರಕ್ಕೆ ಎಸೆದು ಡಂ ಎನಿಸುವುದನ್ನು ನೋಡುವುದೇ ನಮಗೆ ಮಜವಾಗಿತ್ತು ..ನಾನು ಮತ್ತು ನನ್ನ ತಮ್ಮ ಅಂಗಳದಲ್ಲಿದ್ದಾಗ ಅಪ್ಪ ಬಿಸಾಡಿದ ಪಟಾಕಿ ನನ್ನ ಕಾಲಬುಡದಲ್ಲಿ ಬಿದ್ದು ಸಿಡಿಯಿತು.. ಏನೋ ಪುಣ್ಯ ಅಂದು ಕಾಲಿಗೆ ಸ್ವಲ್ಪ ಸುಟ್ಟ ಗಾಯವಾಗಿತ್ತು.. ಅದೇನಾದರೂ ಕಣ್ಣಿಗೆ ಬಿದ್ದಿದ್ದರೆ ಕಣ್ಣಿಲ್ಲದ ಕುರುಡರಾಗುತ್ತಿದ್ದೆವು. ಹಾಗಾಗಿ ದೀಪಾವಳಿಯಂದು ಪಟಾಕಿಯನ್ನು ಜಾಗರೂಕತೆಯಿಂದ ಹಚ್ಚಿ, ವಾಯು ಮಾಲಿನ್ಯವನ್ನು ತಡೆಯಿರಿ, ನಿಮ್ಮನ್ನು ಮತ್ತು ಇತರರನ್ನು ಉಳಿಸಿ, ಬೆಳಕಿನ ಹಬ್ಬ ಬೆಳಕನ್ನು ಮಾತ್ರ ನೀಡಲಿ ಕತ್ತಲೆಯ ಕೂಪಕ್ಕೆ ನೂಕದಿರಲಿ..
       ಬಾಲ್ಯದ ಈ ನೆನಪು ಕಹಿಯಾದರೂ, ದೀಪಾವಳಿ ಎಂದರೆ ಈಗಲೂ ಬಲು ಖುಷಿ. ಎಲ್ಲರಿಗೂ ದೀಪಾವಳಿ ಹಬ್ಬ ಸುಖ ಶಾಂತಿ ನೆಮ್ಮದಿ ಸಮೃದ್ಧಿಯನ್ನು ನೀಡಲಿ.

✍ ನಾಗಶ್ರೀ ಭಂಡಾರಿ, ಮೂಡುಬಿದಿರೆ

Leave a Reply

Your email address will not be published. Required fields are marked *