January 18, 2025
istockphoto-1014317284-612x612

Bacteria and germs on vegetables and the health risk of ingesting contaminated green food including romaine lettuce as a produce safety concept 3D render elements.

ವಿಷಕಾರಿ ಆಹಾರಗಳ ಸೇವನೆಯಿಂದ ಫುಡ್ ಪಾಯ್ಸನ್‌ ಕಾಡುತ್ತದೆ. ಆಗ ಹೇಗೆ ಆರೈಕೆ ಮಾಡಬೇಕು ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

ಆಹಾರ ನಮ್ಮ ದೇಹಕ್ಕೆ ಎಷ್ಟು ಮುಖ್ಯವೋ ಅಷ್ಟೇ ಆರೋಗ್ಯಯುತ, ಶುಚಿಯಾದ ಆಹಾರ ಅಗತ್ಯವಾಗಿದೆ. ಹೀಗಾಗಿ ಆಹಾರ ಸೇವನೆಯಲ್ಲಿ ಕೂಡ ಮುನ್ನೆಚ್ಚರಿಕೆವಹಿಸುವುದು ತುಂಬಾ ಮುಖ್ಯವಾಗಿರುತ್ತದೆ. ಕಲುಷಿತ ಆಹಾರ ಸೇವನೆ, ಅಜೀರ್ಣವಾಗುವುದು ಈ ರೀತಿ ಆದಾಗ ಫುಡ್‌ ಪಾಯ್ಸನ್‌ ಉಂಟಾಗುತ್ತದೆ. ಅಂದರೆ ತಿಂದ ಆಹಾರ ಹೊಟ್ಟೆಯಲ್ಲಿ ವಿಷವಾಗಿ ವಾಂತಿ, ಬೇಧಿ, ಹೊಟ್ಟೆನೋವು ಕಾಣಿಸಿಕೊಳ್ಳುತ್ತದೆ. ಅತಿಯಾಗಿ ಹಿಂಸೆ ನೀಡುವ ಈ ಫುಡ್‌ ಪಾಯ್ಸ್‌ನ್ನು ಕಡಿಮೆ ಮಾಡುವುದು ಹೇಗೆ, ಯಾವೆಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಬೇಕು.

ಫುಡ್‌ ಪಾಯ್ಸನ್‌ ಲಕ್ಷಣಗಳು

ಅನಾರೋಗ್ಯದ ಭಾವನೆ, ಆಗಾಗ ವಾಕರಿಗೆ ಬೇಧಿ ವಾಂತಿ ಹೊಟ್ಟೆ ನೋವು ಮೈ ಬಿಸಿಯಾಗಿ ಜ್ವರದ ಅನುಭವ ಸುಸ್ತು ಕಾಣಿಸಿಕೊಳ್ಳುತ್ತದೆ

ಜೀರಿಗೆ ನೀರಿನ ಸೇವನೆ

ಫುಡ್‌ ಪಾಯ್ಸನ್‌ ಆದಾಗ ವಾಂತಿ, ಬೇಧಿ ಸಾಮಾನ್ಯವಾಗಿರುತ್ತದೆ. ಹೀಗಾಗಿ ಹೊಟ್ಟೆ ಖಾಲಿಯಾಗಿರುತ್ತದೆ, ಅಂತಹ ಸಂದರ್ಭದಲ್ಲಿ ಆದಷ್ಟು ಜೀರಿಗೆ ನೀರು ಅಥವಾ ಕಷಾಯವನ್ನು ಸೇವಿಸಬೇಕು. ಇದರಿಂದ ಖಾಲಿ ಹೊಟ್ಟೆಯಲ್ಲಿನ ಸಂಕಟವನ್ನು ತಡೆಯಬಹುದಾಗಿದೆ. ಅಲ್ಲದೆ ಜೀರಿಗೆ ನೀರು ಜೀರ್ಣಶಕ್ತಿಯನ್ನು ಕೂಡ ಉತ್ತಮಗೊಳಿಸಿ, ವಾಂತಿ ಮತ್ತು ಬೇಧಿಯನ್ನು ನಿಯಂತ್ರಿಸುತ್ತದೆ.

ನಿರ್ಜಲೀಕರಣವಾಗದಂತೆ ನೋಡಿಕೊಳ್ಳಿ

ವಾಂತಿ ಬೇಧಿಯಾಗಿ ದೇಹದಿಂದ ಸಾಕಷ್ಟು ಪ್ರಮಾಣದ ದ್ರವ ಪದಾರ್ಥ ನಷ್ಟವಾಗಿರುತ್ತದೆ. ಆದ್ದರಿಂದ ಜ್ಯೂಸ್‌ ಅಥವಾ ನೀರನ್ನು ಸೇವಿಸುತ್ತಾ ಇರಬೇಕು. ನಿರ್ಜಲೀಕರಣದಿಂದ ಹೆಚ್ಚು ಸುಸ್ತಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ನಿರ್ಜಲೀಕರಣವಾಗದಂತೆ ನೋಡಿಕೊಳ್ಳಿ. ಹೀಗಾಗಿ ಓಆರ್‌ಎಸ್‌, ನೀರು, ಹಣ್ಣುಗಳ ರಸವನ್ನು ಸೇವಿಸಿ.

ಲಘು ಆಹಾರವನ್ನೇ ಸೇವಿಸಿ

ಸರಿಯಾಗಿ ಹಸಿವೆಯಾಗುವವರೆಗೂ ಆದಷ್ಟು ಲಘು ಆಹಾರವನ್ನೇ ಸೇವಿಸಿ. ಉದಾಹರಣೆಗೆ ಗಂಜಿ, ಅಥವಾ ತುಪ್ಪವನ್ನು ಮಿಶ್ರಣ ಮಾಡಿದ ಗಂಜಿ ಸೇರಿದಂತೆ ಜ್ಯೂಸ್‌, ಸೂಪ್‌ನಂತಹ ಆಹಾರಗಳನ್ನು ಆಗಾಗ ಸೇವಿಸುತ್ತಾ ಇರಿ. ಇದರಿಂದ ದೇಹವೂ ನಿರ್ಜಲೀಕರಣವಾಗುವುದಿಲ್ಲ. ಅಲ್ಲದೆ ಗಟ್ಟಿ ಆಹಾರಗಳ ಸೇವನೆಯನ್ನು ಒಂದೇ ಸಮನೆ ಆರಂಭಿಸಬೇಡಿ.

ಎಳನೀರಿನ ಸೇವನೆ

ಎಳನೀರು ದೇಹವನ್ನು ಆರೋಗ್ಯವಾಗಿರಿಸಿಕೊಳ್ಳಲು ಇರುವ ಅತ್ಯುತ್ತಮ ಪಾನೀಯವಾಗಿದೆ. ಹಾಗೂ ನೈಸರ್ಗಿಕ ಪಾನೀಯವಾಗಿದೆ. ಹೀಗಾಗಿ ಫುಡ್‌ ಪಾಯ್ಸನ್‌ನಿಂದ ವಾಂತಿ, ಬೇಧಿಯಾದಾಗ ದೇಹದ ಸುಸ್ತನ್ನು ನಿವಾರಿಸಲು ಎಳನೀರಿನ ಸೇವನೆ ಉತ್ತಮವಾಗಿದೆ. ಎಳನೀರು ಹೊಟ್ಟೆಯಲ್ಲಿನ ಕಲ್ಮಷಗಳನ್ನು ಕೂಡ ದೇಹದಿಂದ ಹೊರಹಾಕಲು ನೆರವಾಗುತ್ತದೆ. ಫುಡ್‌ ಪಾಯ್ಸನ್‌ ವೇಳೆ ವಾಂತಿಯನ್ನು ತಡೆಯಬೇಡಿ, ಏಕೆಂದರೆ ದೇಹ ಅನುಪಯುಕ್ತ, ವಿಷಕಾರಿ ಪದಾರ್ಥಗಳನ್ನು ವಾಂತಿಯ ಮೂಲಕ ಹೊರಹಾಕುತ್ತಿರುತ್ತದೆ. ಹೀಗಾಗಿ ಅದನ್ನು ತಡೆದರೆ ಆರೋಗ್ಯಕ್ಕೆ ಅಪಾಯ .

ಸಂಗ್ರಹ : ಶ್ರೀಪಾಲ್ ಭಂಡಾರಿ ನೆಲ್ಯಾಡಿ

ಮೂಲ: ವಿ ಕೆ

 

1 thought on “ಫುಡ್‌ ಪಾಯ್ಸನ್‌ನಿಂದ ಬೇಗ ಗುಣಮುಖವಾಗಲು ಹೀಗೆ ಮಾಡಿ

Leave a Reply

Your email address will not be published. Required fields are marked *