January 18, 2025
1

ಭಾರತೀಯರ ನೆಚ್ಚಿನ 5G ಫೋನ್‌ ಬ್ರ್ಯಾಂಡ್‌ಗಳು ಯಾವುವು ಗೊತ್ತಾ?..ರಿಪೋರ್ಟ್ ನೋಡಿ! 

2022 ನೇ ವರ್ಷದಲ್ಲಿ 100 ಕ್ಕೂ ಹೆಚ್ಚು 5G ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಲಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ 2022 ರಲ್ಲಿ 5G ಸ್ಮಾರ್ಟ್‌ಫೋನ್‌ನ ಮಾರುಕಟ್ಟೆ ಪಾಲು ಶೇಕಡಾ 45%.

ಭಾರತದಲ್ಲಿ 5G ಸೇವೆ ಒದಗಿಸುತ್ತಿರುವ ವ್ಯಾಪ್ತಿ ಹೆಚ್ಚಾದಂತೆ ಮೊಬೈಲ್ ಕಂಪೆನಿಗಳು ಕೂಡ 5G ಸ್ಮಾರ್ಟ್‌ಫೋನ್‌ಗಳ ತಯಾರಿಕೆಯಲ್ಲಿ ಹೆಚ್ಚು ಕಾರ್ಯನಿರ್ತವಾಗಿವೆ ಎಂಬ ಸುದ್ದಿ ಇತ್ತೀಚಿಗಷ್ಟೇ ಹೊರಬಿದ್ದಿತ್ತು. ಇದೀಗ ಬಂದಿರುವ ಹೊಸದೊಂದು ರಿಪೋರ್ಟ್ ಪ್ರಕಾರ, 2022 ರಲ್ಲಿ 5G ಸ್ಮಾರ್ಟ್‌ಫೋನ್‌ನ ಮಾರುಕಟ್ಟೆ ಪಾಲು ಶೇಕಡಾ 45 ಆಗಿತ್ತು. ಆದರೆ, 2023ರ ಅಂತ್ಯದ ವೇಳೆಗೆ 5G ಸ್ಮಾರ್ಟ್‌ಫೋನ್ ಮಾರಾಟವು ಶೇಕಡಾ 70 ಕ್ಕೆ ಹೆಚ್ಚಬಹುದು ಎಂದು ಸೈಬರ್ ಮೀಡಿಯಾ ರಿಸರ್ಚ್ (CMR) ವರದಿಯು ತಿಳಿಸಿದೆ. ಇಷ್ಟೇ ಅಲ್ಲದೇ, ಭಾರತೀಯರು ಹೆಚ್ಚು ಇಷ್ಟಪಡುತ್ತಿರುವ 5G ಸ್ಮಾರ್ಟ್‌ಫೋನ್‌ ಬ್ರ್ಯಾಂಡ್‌ಗಳು ಯಾವುವು ಎಂಬ ಬಗ್ಗೆ ಕೂಡ ಮಾಹಿತಿಯನ್ನು ಹೊರಹಾಕಿದೆ. ಹಾಗಾದರೆ, ಭಾರತೀಯರ ನೆಚ್ಚಿನ 5G ಬ್ರ್ಯಾಂಡ್ ಸ್ಮಾರ್ಟ್‌ಫೋನ್‌ಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

ಸೈಬರ್ ಮೀಡಿಯಾ ರಿಸರ್ಚ್ (CMR) ವರದಿಯ ಪ್ರಕಾರ, ಭಾರತದ 5G ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ Samsung, Vivo, Oppo, Xiaomi, Realme ಮತ್ತು Motorola ಬ್ರ್ಯಾಂಡ್‌ಗಳು ಹೆಚ್ಚು 5G ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡುತ್ತಿವೆ. ಇವುಗಳಲ್ಲಿ Samsung, Vivo ಮತ್ತು Oppo ಕಂಪೆನಿಗಳು ದುಬಾರಿ 5G ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹೆಚ್ಚು ಸದ್ದು ಮಾಡುತ್ತಿದ್ದರೆ, 10 ಸಾವಿರದಿಂದ 20 ಸಾವಿರ ರೂ. ಬೆಲೆಯ 5G ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ Xiaomi, Realme ಮತ್ತು Motorola ಕಂಪನಿಗಳ 5G ಸ್ಮಾರ್ಟ್‌ಫೋನ್‌ಗಳನ್ನು ಹೆಚ್ಚು ಜನರು ಇಷ್ಟಪಡುತ್ತಿದ್ದಾರೆ. ಬಜೆಟ್ 5G ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಈ ಕಂಪನಿಗಳು ಒಟ್ಟು ಪಾಲು ಸುಮಾರು 80% ಪ್ರತಿಶತ ಇದ್ದು, ಅತ್ಯುತ್ತಮ ಡೀಲ್‌ಗಳೊಂದಿಗೆ ಅಪ್‌ಗ್ರೇಡ್ ಮಾಡಲು ಅವಕಾಶ ನೀಡಿವೆ ಎಂದು ಹೇಳಲಾಗಿದೆ .

2022 ನೇ ವರ್ಷದಲ್ಲಿ 100 ಕ್ಕೂ ಹೆಚ್ಚು 5G ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಲಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ 2022 ರಲ್ಲಿ 5G ಸ್ಮಾರ್ಟ್‌ಫೋನ್‌ನ ಮಾರುಕಟ್ಟೆ ಪಾಲು ಶೇಕಡಾ 45 ಆಗಿರಬಹುದು. ಆದರೆ, 2023 ರ ಅಂತ್ಯದ ವೇಳೆಗೆ 70% ಪ್ರತಿಶತ 5G ಸ್ಮಾರ್ಟ್‌ಫೋನ್‌ಗಳನ್ನು ರವಾನಿಸಲಾಗುತ್ತದೆ. ಭಾರತೀಯ ಟೆಲಿಕಾಂ ಕಂಪೆನಿಗಳ ಆಕ್ರಮಣಕಾರಿ 5G ನೆಟ್‌ವರ್ಕ್ ನಿಯೋಜನೆಯಿಂದ ಗ್ರಾಹಕರು ತಮ್ಮ ಸ್ಮಾರ್ಟ್‌ಫೋನ್‌ಗಳನ್ನು ಬದಲಾಯಿಸಲು ಮತ್ತು ಅಪ್‌ಗ್ರೇಡ್ ಮಾಡಲು ಬಯಸಿದಂತೆ, 5G ಸ್ಮಾರ್ಟ್‌ಫೋನ್‌ಗಳತ್ತ ಒಲವು ಹೆಚ್ಚಾಗುವುದು ನಿಶ್ಚಿತ. ಹೊಸ ವರ್ಷದಲ್ಲಿ 5G ಸ್ಮಾರ್ಟ್‌ಫೋನ್ ಸಾಗಣೆಗೆ ಮತ್ತಷ್ಟು ಆವೇಗವನ್ನು ನಾವು ನಿರೀಕ್ಷಿಸುತ್ತೇವೆ.” ಎಂದು ಇಂಡಸ್ಟ್ರಿ ಇಂಟೆಲಿಜೆನ್ಸ್ ಗ್ರೂಪ್ (IIG), ಸೈಬರ್ ಮೀಡಿಯಾ ರಿಸರ್ಚ್ (CMR) ವಿಶ್ಲೇಷಕರಾದ ಅವರು ಶಿಪ್ರಾ ಸಿನ್ಹಾ ಹೇಳಿದ್ದಾರೆ.

ಸೈಬರ್ ಮೀಡಿಯಾ ರಿಸರ್ಚ್ (CMR) ವರದಿಯು, 5G ಸ್ಮಾರ್ಟ್‌ಫೋನ್‌ಗಳಲ್ಲಿನ ಸಾಗಣೆ ಬೆಳವಣಿಗೆಯು ಮೌಲ್ಯದ ವಿಭಾಗದಲ್ಲಿ ಅವುಗಳ ಲಭ್ಯತೆಯನ್ನು ಅವಲಂಬಿಸಿರುತ್ತದೆ, ಜೊತೆಗೆ ದೇಶಾದ್ಯಂತ 5G ನೆಟ್‌ವರ್ಕ್‌ಗಳ ಲಭ್ಯತೆ ಮತ್ತು ಪ್ರವೇಶವನ್ನು ಅವಲಂಬಿಸಿರುತ್ತದೆ ಎಂದು ಹೇಳಿದೆ. ಇನ್ನು ನಾವೆಲ್ಲರೂ ತಿಳಿದಿರುವಂತೆ, ಭಾರತದಲ್ಲಿ 5G ಸ್ಮಾರ್ಟ್‌ಫೋನ್‌ನ ವ್ಯಾಪ್ತಿಯು ವೇಗವಾಗಿ ಹೆಚ್ಚುತ್ತಿದೆ. ಭಾರತದಲ್ಲಿ 5G ನೆಟ್‌ವರ್ಕ್ ತರಲು Jio ಮತ್ತು Airtel ಕಂಪನಿಗಳು ಪೈಪೋಟಿಯಲ್ಲಿದ್ದು, ದೇಶದಲ್ಲಿ ಈಗಾಗಲೇ 120 ಕ್ಕೂ ಹೆಚ್ಚು ನಗರಗಳಲ್ಲಿ 5G ಸೇವೆಗಳನ್ನು ಆರಂಭಿಸಿವೆ. ಅದರಲ್ಲೂ ಆರಂಭಿಕವಾಗಿ ಏರ್‌ಟೆಲ್ ಮತ್ತು ಜಿಯೋ ಎರಡೂ ಕಂಪೆನಿಗಳು ತಮ್ಮ ಬಳಕೆದಾರರಿಗೆ 5G ಸೇವೆಯನ್ನು ಉಚಿತವಾಗಿಯೇ ನೀಡುತ್ತಿರುವುದರಿಂದ 5G ಸ್ಮಾರ್ಟ್‌ಫೋನ್‌ಗಳ ಮಾರಾಟ ವೇಗ ಮತ್ತಷ್ಟು ಹೆಚ್ಚುವ ನಿರೀಕ್ಷೆ ಇದೆ.

 

 

ಸಂಗ್ರಹ : ಎಸ್.ಬಿ ನೆಲ್ಯಾಡಿ

ಮೂಲ: VK

 

 

Leave a Reply

Your email address will not be published. Required fields are marked *