ಉತ್ಪಾದನೆ, ಮಾರಾಟ, ಬಳಕೆ ವಸ್ತುಗಳು ಮತ್ತು ಸೇವೆಗಳ ಮೇಲೆ ರಾಷ್ಟ್ರೀಯ ಮಟ್ಟದಲ್ಲಿ ಹೇರಲಾಗುವ ಸಮಗ್ರ ತೆರಿಗೆಗೆ ಸರಕು ಮತ್ತು ಸೇವಾ ತೆರಿಗೆ ಎಂದು ಕರೆಯಲಾಗುತ್ತದೆ. ಇದು ಭಾರತದ ಅತಿ ದೊಡ್ಡ ಸೇವಾ ತೆರಿಗೆಗಳಲ್ಲೊಂದು. ಆಂಗ್ಲ ಭಾಷೆಯಲ್ಲಿ ಗೂಡ್ಸ್ ಆಂಡ್ ಸರ್ವೀಸಸ್ ಟ್ಯಾಕ್ಸ್ ಎಂದು ಇದನ್ನು ಕರೆಯಲಾಗುತ್ತದೆ. ಜಿ ಎಸ್ ಟಿ ಹೊಸ ತೆರಿಗೆ ವ್ಯವಸ್ಥೆಯಾದರೂ ಹಿಂದೆ ಇದ್ದ ಎಲ್ಲಾ ರೀತಿಯ ತೆರಿಗೆಗಳು ಸರಕು ಮತ್ತು ಸೇವೆಗಳ ತೆರಿಗೆಯಲ್ಲಿ ವಿಲೀನಗೊಂಡು ಒಂದು ತೆರಿಗೆ ಎಂಬ ಹೆಸರಿನಲ್ಲಿ ಕರೆಸಿಕೊಳ್ಳುತ್ತಿದೆ.
ಸರಕು ಮತ್ತು ಸೇವೆಗಳ ತೆರಿಗೆಯಿಂದ ಆಗುವ ಪ್ರಯೋಜನಗಳು ಹಲವಾರು. ಸಣ್ಣ ವ್ಯಾಪಾರಿಗಳಿಗೆ ದೇಶದ ಯಾವುದೇ ಭಾಗದಲ್ಲೂ ಸಮತಟ್ಟಾದ ಕಾರ್ಯಕ್ಷೇತ್ರದೊಂದಿಗೆ ಹೆಚ್ಚಿನ ವಸ್ತುಗಳಿಗೆ ಶೇ.5 ತೆರಿಗೆ ಒಳಗೊಂಡು ಸಾಮಾನ್ಯ ಜನರ ಸ್ನೇಹಪರವಾಗಿದೆ. ಏಕೀಕೃತ ಸಾಮಾನ್ಯ ರಾಷ್ಟ್ರೀಯ ಮಾರುಕಟ್ಟೆ ನಿರ್ಮಿಸುವುದರೊಂದಿಗೆ ಭಾರತವನ್ನು ಉತ್ಪಾದನಾ ಕೇಂದ್ರವನ್ನಾಗಿ ಮಾಡುವುದಾಗಿದೆ. ಅದರೊಂದಿಗೆ ಹೂಡಿಕೆ ಮತ್ತು ರಫ್ತುಗಳನ್ನು ಹೆಚ್ಚಿಸುವುದು, ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುವುದು, ಒಂದು ಅರ್ಥಿಕತೆಯ ಭಾರತವನ್ನು ನಿರ್ಮಿಸುವುದು, ಜಿ ಎಸ್ ಟಿ ಯ ಅತಿದೊಡ್ಡ ಆಶಯ. ಅಂದರೆ ಇದರಿಂದಾಗುವ ಅನುಕೂಲಗಳು ಸರಕು ಮತ್ತು ಸೇವೆಗಳ ಸ್ವತಂತ್ರ ಚಲನೆ, ಸ್ಪರ್ಧೆ ಹೆಚ್ಚಳದಿಂದ ಗ್ರಾಹಕರಿಗೆ ಪ್ರಯೋಜನ, ರಾಷ್ಟ್ರತ್ವ ಮತ್ತು ಏಕತೆಯ ಭಾವನೆಯನ್ನು ಬಲಗೊಳಿಸುವುದು.
ಸಾಮಾನ್ಯ ಬಳಕೆಯ ವಸ್ತುಗಳ ಮೇಲಿನ ಹಿಂದಿನ ಮತ್ತು ಜಿ ಎಸ್ ಟಿ ತೆರಿಗೆಯ ದರ
ಸರಕುಗಳ ವಿವರಣೆ | ಹಿಂದಿನ ತೆರಿಗೆ | ಜಿಎಸ್ ಟಿ ತೆರಿಗೆ |
ಗೋಧಿ | 2.30% | 0% |
ಅಕ್ಕಿ | 2.75% | 0% |
ಸಿಹಿ ಪದಾರ್ಥಗಳು | 6% | 5% |
ತರಕಾರಿ, ಖಾದ್ಯ, ತೈಲಗಳು | 6% | 5% |
ಪಾದರಕ್ಷೆಗಳು (ರೂ. 500 ತನಕ) | 10% | 5% |
ಇತರೆ ಪಾದರಕ್ಷೆಗಳು | 21% | 18% |
ಎಲ್ ಇ ಡಿ ಬಲ್ಬ್ ಗಳು | 15% | 12% |
ಹೊಲಿಗೆ ಯಂತ್ರ | 16% | 12% |
ಹೆಲ್ಮೆಟ್ | 20% | 18% |
ಸಿಮೆಂಟ್ | 29% | 28% |
ಸಾಬೂನ್, ಟೂತ್ ಪೇಸ್ಟ್ | 27% | 18% |